ಚಿನ್ನದ ಬೆಲೆ ಹೆಚ್ಚಾದರೂ ಆಭರಣಗಳಿಗೆ ಕಡಿಮೆ ಆಗಿಲ್ಲ ಬೇಡಿಕೆ; 10ರಿಂದ 20 ಗ್ರಾಂ ಚಿನ್ನದ ಒಡವೆಗಳು ಹೆಚ್ಚು ಸೇಲ್; ಐದು ಗ್ರಾಮ್​ವೊಳಗಿನ ಜ್ಯೂವೆಲರಿ ಕೇಳೋರಿಲ್ಲ

Gold sales in India: ಈ ವರ್ಷದ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಚಿನ್ನಕ್ಕೆ ಬೇಡಿಕೆ 136.6 ಟನ್​ನಷ್ಟಾಗಿದೆ. ಇದು ಹಿಂದಿನ ಕ್ವಾರ್ಟರ್​ಗಿಂತ ಹೆಚ್ಚಾಗಿದೆ. ಚಿನ್ನದ ಬೆಲೆ ಸತತವಾಗಿ ಹೆಚ್ಚುತ್ತಿದ್ದರೂ ಅದಕ್ಕಿರುವ ಡಿಮ್ಯಾಂಡ್ ಕೂಡ ಹೆಚ್ಚಿರುವುದು ಗಮನಾರ್ಹ. ಅಕ್ಷಯ ತೃತೀಯ ದಿನದಂದು ಒಡವೆ ಜೊತೆಗೆ ಗೋಲ್ಡ್ ಕಾಯಿನ್ ಇತ್ಯಾದಿ ಖರೀದಿಯೂ ಹೆಚ್ಚಾಗಿದೆ. ಬೆಲೆ ಏರಿಕೆಯಿಂದಾಗಿ ಜನರು 5 ಗ್ರಾಮ್​ವೊಳಗಿನ ತೂಕದ ಚಿನ್ನವನ್ನು ಹೆಚ್ಚು ಖರೀದಿಸಬಹುದು ಎಂಬ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, 10ರಿಂದ 20 ಗ್ರಾಮ್ ತೂಕದ ಒಡವೆಗಳ ಮಾರಾಟ ಹೆಚ್ಚಾಗಿದೆಯಂತೆ.

ಚಿನ್ನದ ಬೆಲೆ ಹೆಚ್ಚಾದರೂ ಆಭರಣಗಳಿಗೆ ಕಡಿಮೆ ಆಗಿಲ್ಲ ಬೇಡಿಕೆ; 10ರಿಂದ 20 ಗ್ರಾಂ ಚಿನ್ನದ ಒಡವೆಗಳು ಹೆಚ್ಚು ಸೇಲ್; ಐದು ಗ್ರಾಮ್​ವೊಳಗಿನ ಜ್ಯೂವೆಲರಿ ಕೇಳೋರಿಲ್ಲ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 4:27 PM

ನವದೆಹಲಿ, ಮೇ 12: ಈ ವರ್ಷ ಚಿನ್ನ ಸೂಪರ್ ಸ್ಟಾರ್ ಆಗಿ ಹೋಗಿದೆ. ಜಾಗತಿಕ ರಾಜಕೀಯ ವಿದ್ಯಮಾನ, ಆರ್ಥಿಕ ಅನಿಶ್ಚಿತತೆ ಇತ್ಯಾದಿ ಕಾರಣಗಳಿಂದ ಚಿನ್ನಕ್ಕೆ ಸೂಪರ್ ಡಿಮ್ಯಾಂಡ್ ಇದೆ. ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಆಗುತ್ತಿದ್ದರೂ ಬೇಡಿಕೆ ಕುಗ್ಗಿಲ್ಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್ (World Gold Council) ಪ್ರಕಾರ 2024ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಚಿನ್ನಕ್ಕಿರುವ ಬೇಡಿಕೆ 136.6 ಟನ್​ಗೆ ಏರಿದೆ. ಇದರಲ್ಲಿ ಆಭರಣ ಮತ್ತು ಹೂಡಿಕೆ ಎರಡೂ ಕಾರಣಕ್ಕೂ ಖರೀದಿ ಆಗಿರುವ ಚಿನ್ನ ಸೇರಿದೆ. ಆದರೆ, ಚಿನ್ನದ ವ್ಯಾಪಾರಿಗಳಿಗೆ ಈ ಅವಧಿಯು ಕೆಲ ಅನಿರೀಕ್ಷಿತ ಅಚ್ಚರಿ ನೀಡಿದೆ.

ಕಡಿಮೆ ತೂಕದ ಒಡವೆಗಳು ಹೆಚ್ಚು ಸೇಲ್ ಆಗುವ ನಿರೀಕ್ಷೆಯಲ್ಲಿದ್ದವರಿಗೆ ಅಚ್ಚರಿ

ಚಿನ್ನದ ಬೆಲೆ ಹೆಚ್ಚಾಗಿರುವುದರಿಂದ ಅಕ್ಷಯ ತೃತೀಯ ದಿನದಂದು ಕಡಿಮೆ ಬೆಲೆಯ ಮತ್ತು ಕಡಿಮೆ ತೂಕದ ಆಭರಣಗಳಿಗೆ ಹೆಚ್ಚು ಬೇಡಿಕೆ ಬರಬಹುದು ಎಂದು ಆಭರಣ ವ್ಯಾಪಾರಿಗಳು ಭಾವಿಸಿದ್ದರಂತೆ. ಆದರೆ, ದೇಶಾದ್ಯಂತ ಬಹಳ ಕಡೆ ಆಭರಣದಂಗಡಿಗಳಲ್ಲಿ ಶಾಪಿಂಗ್ ಮಾಡುವ ಜನರ ಸಂಖ್ಯೆ ಮೊನ್ನೆ ಶುಕ್ರವಾರ ಹೆಚ್ಚಾಗಿತ್ತು. ಅಚ್ಚರಿ ಎಂದರೆ ಕಡಿಮೆ ತೂಕದ ಆಭರಣ ಬದಲು ಹೆಚ್ಚು ತೂಕದ ಚಿನ್ನದ ಒಡವೆಗಳು ಹೆಚ್ಚು ಸೇಲ್ ಆಗಿವೆ.

ಇದನ್ನೂ ಓದಿ: ಅಕ್ಷಯ ತೃತೀಯ: ಬೆಂಗಳೂರಿನ ಆಭರಣದಂಗಡಿಗಳಲ್ಲಿ ಜನರ ನೂಕುನುಗ್ಗಲು; ರಾಮನ ನಾಣ್ಯ ಟ್ರೆಂಡಿಂಗ್​ನಲ್ಲಿ

ಅಕ್ಷಯ ತೃತೀಯ ದಿನ ಮಾತ್ರವಲ್ಲ, ಮೊದಲ ಕ್ವಾರ್ಟರ್​ನಾದ್ಯಂತ ಚಿನ್ನದ ಖರೀದಿ ಪ್ರಮಾಣ ಹೆಚ್ಚಿದೆ. ಮದುವೆಗೆಂದು ಆಭರಣ ಕೊಳ್ಳುವವರು ಹೆಚ್ಚಿದ್ದಾರೆ. ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು ಎಂಬ ಲೆಕ್ಕಾಚಾರದಲ್ಲಿ ಜನರು ಚಿನ್ನದ ಖರೀದಿ ಮಾಡುತ್ತಿರಬಹುದು ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ ಭಾರತ ವಿಭಾಗದ ಮುಖ್ಯಸ್ಥ ಸಚಿನ್ ಜೈನ್ ಹೇಳುತ್ತಾರೆ.

ಜೈನ್ ಪ್ರಕಾರ 2ರಿಂದ 5 ಗ್ರಾಮ್ ಶ್ರೇಣಿಯ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಿದೆ. ಆದರೆ, 10ರಿಂದ 20 ಗ್ರಾಮ್ ಶ್ರೇಣಿಯ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿತಂತೆ. ಚಿನ್ನದ ಸರ ಇತ್ಯಾದಿ ಹೆಚ್ಚಿನ ಆಭರಣಗಳು 10ರಿಂದ 20 ಗ್ರಾಮ್ ತೂಕದ ಶ್ರೇಣಿಯಲ್ಲಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ