AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್​ಗಳನ್ನು ಹೊಂದಿರಬಹುದಾ? ಅನುಕೂಲ, ಅನನುಕೂಲಗಳೇನು?

Pros and Cons of Having Multiple Demat Accounts: ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಮತ್ತು ಷೇರುಗಳನ್ನು ಸಂಗ್ರಹಿಸಲು ಡೀಮ್ಯಾಟ್ ಖಾತೆ ಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಖಾತೆ ಹೊಂದಿರಬಾರದು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಖಾತೆ ಹೊಂದಿರಲು ಅವಕಾಶ ಇದೆ. ಒಂದು ಬ್ರೋಕರ್ ಸಂಸ್ಥೆ ಬಳಿ ಒಂದು ಡೀಮ್ಯಾಟ್ ಖಾತೆ ಸೃಷ್ಟಿಸಬಹುದು. ಬೇರೆ ಬೇರೆ ಬ್ರೋಕರ್ ಸಂಸ್ಥೆಗಳ ಬಳಿಯೂ ಪ್ರತ್ಯೇಕವಾಗಿ ಡೀಮ್ಯಾಟ್ ಖಾತೆ ರಚಿಸಿ ವ್ಯವಹರಿಸಬಹುದು.

ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್​ಗಳನ್ನು ಹೊಂದಿರಬಹುದಾ? ಅನುಕೂಲ, ಅನನುಕೂಲಗಳೇನು?
ಡೀಮ್ಯಾಟ್ ಅಕೌಂಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 1:40 PM

Share

ಇವತ್ತು ಭಾರತದಲ್ಲಿ ಷೇರು ವ್ಯವಹಾರ (stock trading) ನಡೆಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಡೀಮ್ಯಾಟ್ ಖಾತೆ ತೆರೆಯುತ್ತಿರುವವ ಸಂಖ್ಯೆ ಬಹಳ ಹೆಚ್ಚುತ್ತಿದೆ. ಭಾರತದ ಷೇರು ಮಾರುಕಟ್ಟೆ (Stock Market) ಗಣನೀಯವಾಗಿ ಬೆಳೆಯುತ್ತಿರುವುದು ಇದಕ್ಕೆ ಒಂದು ಕಾರಣ. ಹಾಗೆಯೇ, ಇವತ್ತಿನ ಯುವ ಜನರ ಪರ್ಸನಲ್ ಫೈನಾನ್ಸ್ ಅರಿವು ಹೆಚ್ಚುತ್ತಿರುವುದೂ ಕೂಡ ಇನ್ನೊಂದು ಕಾರಣ. ಷೇರು ವಹಿವಾಟು ಅಥವಾ ಷೇರು ಟ್ರೇಡಿಂಗ್ ನಡೆಸಲು ಒಬ್ಬ ವ್ಯಕ್ತಿ ಡೀಮ್ಯಾಟ್ ಖಾತೆ (Demat Account) ತೆರೆಯಬೇಕಾಗುತ್ತದೆ. ಡೀಮ್ಯಾಟ್ ಎಂದರೆ ಡೀಮೆಟೀರಿಯಲೈಸ್ಡ್ ಅಕೌಂಟ್. ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳನ್ನು ಸಂಗ್ರಹಿಸುವ ಒಂದು ಖಾತೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದಿರಬಾರದು. ಅದರಂತೆಯೇ ಡೀಮ್ಯಾಟ್ ಅಕೌಂಟ್ ಕೂಡ ಎರಡೆರಡು ಇರಬಾರದು ಎನ್ನುವ ಕಲ್ಪನೆ ಹಲವರಲ್ಲಿ ಇದೆ. ಇದು ತಪ್ಪು ತಿಳಿವಳಿಕೆ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್ ಹೊಂದಿರಬಹುದು. ಷೇರು, ಬಾಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಡೀಮ್ಯಾಟ್ ರೂಪದಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡಲೆಂದು ಎರಡು ಡೆಪಾಸಿಟರಿ ಸಂಸ್ಥೆಗಳು ಭಾರತದಲ್ಲಿ ಇವೆ. ಒಂದು ಎನ್​ಎಸ್​ಡಿಎಲ್, ಮತ್ತೊಂದು ಸಿಎಸ್​ಡಿಎಲ್. ಭಾರತದಲ್ಲಿ ಸಾವಿರಾರು ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ಅಥವಾ ಬ್ರೋಕರ್ ಸಂಸ್ಥೆಗಳಿವೆ. ಇವು ಎನ್​ಎಸ್​ಡಿಎಲ್, ಸಿಎಸ್​ಡಿಎಲ್, ಈ ಎರಡರಲ್ಲೂ ನೊಂದಾಯಿತವಾಗಿರುತ್ತವೆ. ಅಥವಾ ಯಾವುದಾದರೂ ಒಂದರಲ್ಲಿ ನೊಂದಾಯಿತವಾಗಿರುತ್ತವೆ. ಉದಾಹರಣೆಗೆ, ಪೇಟಿಎಂ ಮನಿ ಒಂದು ಷೇರು ಬ್ರೋಕರ್ ಸಂಸ್ಥೆಯಾಗಿದ್ದು, ಇದು ಸಿಎಸ್​ಡಿಎಲ್​ನಲ್ಲಿ ನೊಂದಣಿಯಾಗಿದೆ. ಎಸ್​ಬಿಐ ಬ್ಯಾಂಕ್ ಎರಡೂ ಡೆಪಾಸಿಟರಿಗಳಲ್ಲಿ ನೊಂದಾಯಿತವಾಗಿದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಅಕೌಂಟ್​ಗಳಿದ್ದರೆ ಏನು ಮಾಡಬೇಕು? ಇಲ್ಲಿದೆ ಒಂದು ಐಡಿಯಾ

ನಾವು ಡೀಮ್ಯಾಟ್ ಖಾತೆ ತೆರೆಯುವುದು ಈ ರೀತಿಯ ಬ್ರೋಕರ್ ಸಂಸ್ಥೆಗಳ ಬಳಿ. ಎಸ್​ಬಿಐ, ಗ್ರೋ, ಕೋಟಕ್ ಮಹೀಂದ್ರ ಇತ್ಯಾದಿ ಷೇರು ಬ್ರೋಕರೇಜ್ ಸಂಸ್ಥೆಗಳು ಗ್ರಾಹಕರಿಗೆ ಡೀಮ್ಯಾಟ್ ಖಾತೆ ತೆರೆಯಲು ಅವಕಾಶ ಕೊಡುತ್ತವೆ. ಒಂದು ಡಿಪಿ ಅಥವಾ ಬ್ರೋಕರ್ ಸಂಸ್ಥೆಯಲ್ಲಿ ಒಂದು ಡೀಮ್ಯಾಟ್ ಅಕೌಂಟ್ ಮಾತ್ರ ತೆರೆಯಬಹುದು. ಆದರೆ, ಬೇರೆ ಬೇರೆ ಡಿಪಿಗಲ್ಲೂ ಪ್ರತ್ಯೇಕವಾಗಿ ಡೀಮ್ಯಾಟ್ ಅಕೌಂಟ್ ತೆರೆಯಲು ತಡೆ ಇರುವುದಿಲ್ಲ.

ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್ ಇದ್ದರೆ ಏನು ಲಾಭ?

  • ಐಟಿ ರಿಟರ್ನ್ ಫೈಲ್ ಮಾಡುವಾಗ ತೆರಿಗೆ ಉಳಿಸಲು ಸಹಾಯವಾಗುತ್ತದೆ.
  • ಟ್ರೇಡಿಂಗ್, ಹೂಡಿಕೆ ಇತ್ಯಾದಿಗಳಿಗೆ ಪ್ರತ್ಯೇಕ ಡೀಮ್ಯಾಟ್ ಅಕೌಂಟ್ ಹೊಂದಿರುವುದು ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ

ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್ ಇದ್ದರೆ ಅನನುಕೂಲವೇನು?

ಒಂದೇ ಡೀಮ್ಯಾಟ್ ಖಾತೆ ಇದ್ದರೆ ಎಲ್ಲವೂ ಒಂದೇ ಕಡೆ ಲಭ್ಯ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್​ಗಳನ್ನು ಹೊಂದಿರುವುದು ಗೋಜಲೆನಿಸಬಹುದು. ಒಂದು ಖಾತೆಯಲ್ಲಿ ಮಾತ್ರವೇ ವಹಿವಾಟು ನಡೆಸಬಹುದು. ಮತ್ತೊಂದು ಹಾಗೆಯೇ ನಿಷ್ಕ್ರಿಯವಾಗಿ ಉಳಿದುಹೋಗಬಹುದು.

ಇನ್ನೊಂದು ಪ್ರಮುಖ ಅನನುಕೂಲವೆಂದರೆ ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಡೀಮ್ಯಾಟ್ ಖಾತೆಯ ವಾರ್ಷಿಕ ಶುಲ್ಕ ಮತ್ತಿತರೆ ವೆಚ್ಚ ಇರುತ್ತದೆ. ಇವೆಲ್ಲವೂ ತಿಳಿದಿರಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ