AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೇಡಿಂಗ್ ಆ್ಯಪ್​ಗಳಿಗೆ ವೆರಿಫೈಡ್ ಲೇಬಲ್; ವಂಚಕರನ್ನು ದೂರ ಇಡಲು ಸೆಬಿ ಹೊಸ ಕ್ರಮ

SEBI in collaboration with Google, introduces verified badge for trading apps: ಇತ್ತೀಚಿನ ವರ್ಷಗಳಲ್ಲಿ ಪ್ಲೇಸ್ಟೋರ್​ನಲ್ಲಿ ನಕಲಿ ಟ್ರೇಡಿಂಗ್ ಆ್ಯಪ್​ಗಳ ಹಾವಳಿ ಹೆಚ್ಚುತ್ತಿದೆ. ಅಸಲಿ ಆ್ಯಪ್​ಗಳ ಹೆಸರು ಮತ್ತು ಚಿಹ್ನೆ ಹೋಲುವ ರೀತಿಯ ಈ ಆ್ಯಪ್​ಗಳು ಸಾವಿರಾರು, ಲಕ್ಷಾಂತರ ಜನರನ್ನು ಯಾಮಾರಿಸಿರುವುದುಂಟು. ಈ ನಕಲಿ ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಲ್ಲಿ ದೂರ ಇಡಲು, ಅಸಲಿ ಆ್ಯಪ್​ಗಳಿಗೆ ವೆರಿಫೈಡ್ ಲೇಬಲ್ ಹಾಕುವ ಕ್ರಮವನ್ನು ಸೆಬಿ ಜಾರಿಗೆ ತಂದಿದೆ.

ಟ್ರೇಡಿಂಗ್ ಆ್ಯಪ್​ಗಳಿಗೆ ವೆರಿಫೈಡ್ ಲೇಬಲ್; ವಂಚಕರನ್ನು ದೂರ ಇಡಲು ಸೆಬಿ ಹೊಸ ಕ್ರಮ
ಟ್ರೇಡಿಂಗ್Image Credit source: Pixabay
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2026 | 8:21 PM

Share

ನವದೆಹಲಿ, ಮಾರ್ಚ್ 26: ಆನ್​ಲೈನ್​ನಲ್ಲಿ ಸಾಕಷ್ಟು ವಂಚನೆಗಳಾಗುತ್ತವೆ. ವಾಟ್ಸಾಪ್, ಟೆಲಿಗ್ರಾಮ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳಲ್ಲಿ ವಂಚಕ ವೆಬ್​ಸೈಟ್​ಗಳಿಗೆ ದಾರಿ ಕೊಡುವ ನಕಲಿ ಲಿಂಕ್​ಗಳನ್ನು ಹಾಕಿ ಯಾಮಾರಿಸುವವರು ಬಹಳ ಇದ್ದಾರೆ. ಹಾಗೆಯೇ, ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮೂಲಕ ಅದ್ಬುತವಾಗಿ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸಿ, ನಕಲಿ ಟ್ರೇಡಿಂಗ್ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಂತೆ ಮಾಡಲಾಗುತ್ತದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವುದುಂಟು. ಇವಕ್ಕೆ ಕಡಿವಾಣ ಹಾಕಲು ಮತ್ತು ಹೂಡಿಕೆದಾರರನ್ನು ವಂಚಕರಿಂದ ರಕ್ಷಿಸಲು ಸೆಬಿ (SEBI) ಹೊಸ ಉಪಾಯ ಮಾಡಿದೆ. ಷೇರು ಟ್ರೇಡಿಂಗ್ ಆ್ಯಪ್​ಗಳನ್ನು ಸುಲಭವಾಗಿ ಗುರುತಿಸಬಲ್ಲಂತಹ ಉಪಾಯ ಇದು.

ಸೆಬಿಯಿಂದ ಮಾನ್ಯತೆ ಹೊಂದಿರುವ ಷೇರು ಟ್ರೇಡಿಂಗ್ ಆ್ಯಪ್​ಗಳಿಗೆ ಗೂಗಲ್ ಪ್ಲೇಸ್ಟೋರ್​ನಲ್ಲಿ ವೆರಿಫೈ ಲೇಬಲ್ ಹಾಕುವ ಕ್ರಮವನ್ನು ಸೆಬಿ ಜಾರಿಗೆ ತಂದಿದೆ. ಷೇರು ಮಾರುಕಟ್ಟೆಯ ಬ್ರೋಕರ್ ಎಂದು ಹೇಳಿ ಜನರನ್ನು ವಂಚಿಸುತ್ತಿರುವ ಸಮಸ್ಯೆ ನಿವಾರಿಸಲು ಈ ಪ್ರಯತ್ನ ನಡೆದಿದೆ.

ಇದನ್ನೂ ಓದಿ: Petrol Diesel Prices: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಇತ್ತೀಚಿನ ವರ್ಷಗಳಲ್ಲಿ ಪ್ಲೇಸ್ಟೋರ್​ನಲ್ಲಿ ನಕಲಿ ಟ್ರೇಡಿಂಗ್ ಆ್ಯಪ್​ಗಳ ಸಂಖ್ಯೆ ಬಹಳ ಹೆಚ್ಚಿದೆ. ಗ್ರೋ, ಝಿರೋಧ ಕೈಟ್, ಏಂಜೆಲ್ ಒನ್ ಇತ್ಯಾದಿ ಅಧಿಕೃತ ಪ್ಲಾಟ್​ಫಾರ್ಮ್​ಗಳನ್ನು ಹೋಲುವ ರೀತಿಯ ನಕಲಿ ಆ್ಯಪ್​ಗಳನ್ನು ತಯಾರಿಸಿ ಅಮಾಯಕ ಜನರನ್ನು ಸೆಳೆಯಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆತಂಕ ಮೂಡಿಸುತ್ತಿವೆ.

ಈ ಕಾರಣಕ್ಕೆ ಸೆಬಿ ನೊಂದಾಯಿತ ಟ್ರೇಡಿಂಗ್ ಆ್ಯಪ್​ಗಳಿಗೆ ಪ್ಲೇ ಸ್ಟೋರ್​ನಲ್ಲಿ ವೆರಿಫೈಡ್ ಟ್ಯಾಗ್ ಕಾಣುವಂತೆ ಇಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಸೆಬಿ ಮತ್ತು ಗೂಗಲ್ ಕೈಜೋಡಿಸಿವೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಸೆಬಿ ಸಿವಿವಿ ಸೇಫ್ಟಿ ಫ್ರೇಮ್​ವರ್ಕ್

ಹೂಡಿಕೆದಾರರನ್ನು ರಕ್ಷಿಸಲು ಸೆಬಿ ಸಿವಿವಿ ಅಥವಾ ಚೆಕ್, ವ್ಯಾಲಿಡೇಟ್ ಮತ್ತು ವೆರಿಫೈ, ಈ ವಿಧಾನವನ್ನು ಅನುಸರಿಸುವಂತೆ ಸಲಹೆ ಕೊಟ್ಟಿದೆ. ಈ ಸಿವಿವಿ ವಿಧಾನಗಳು ಹೀಗಿವೆ:

  1. ಚೆಕ್ (ಪರಿಶೀಲನೆ): ಸಾರಥಿ ಆ್ಯಪ್​ನಲ್ಲಿ (Saa₹thi) ಸೆಬಿ ಚೆಕ್ ಫೀಚರ್ ಬಳಸಿ ಬ್ಯಾಂಕ್ ಅಕೌಂಟ್​ಗಳನ್ನು ವೆರಿಫೈ ಮಾಡಿ.
  2. ವ್ಯಾಲಿಡೇಟ್: ಯುಪಿಐ ಐಡಿಗಳು ಸೆಬಿ ಟೂಲ್​ಗಳಲ್ಲಿ ‘Valid’ ಪದ ಹೊಂದಿದೆಯಾ ಖಚಿತಪಡಿಸಿಕೊಳ್ಳಿ.
  3. ವೆರಿಫೈ: ಟ್ರೇಡಿಂಗ್ ಆ್ಯಪ್​ಗಳಲ್ಲಿ ವೆರಿಫೈಡ್ ಲೇಬಲ್ ಇದೆಯಾ ಗಮನಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ