Semiconductor Supply Chain: ಸೆಮಿಕಂಡಕ್ಟರ್ ಯೋಜನೆ: ಭಾರತ-ಜಪಾನ್ ಪಾಲುದಾರಿಕೆಗೆ ಕೇಂದ್ರ ಸಂಪುಟ ಅನುಮೋದನೆ

|

Updated on: Oct 25, 2023 | 6:20 PM

Union Cabinet Approves India Japan Partnership: ಭಾರತದಲ್ಲಿ ಸಮರ್ಪಕವಾದ ಸೆಮಿಕಂಡಕ್ಟರ್ ಸರಬರಾಜು ಸರಪಳಿ ಸೃಷ್ಟಿಸಲು ಅನುಕೂಲವಾಗುವಂತೆ ಜಪಾನ್ ನೆರವು ಪಡೆಯುವ ಒಪ್ಪಂದಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಸೆಮಿಕಂಡಕ್ಟರ್ ಸಪ್ಲೈ ಚೈನ್ ಉತ್ತಮಗೊಳಿಸಲು ಎರಡೂ ದೇಶಗಳು ಜುಲೈನಲ್ಲಿ ಸಹಕಾರ ಒಪ್ಪಂದಕ್ಕೆ (ಎಂಒಸಿ) ಸಹಿ ಹಾಕಿದ್ದವು. ಅಂದಿನಿಂದ ಆರಂಭವಾಗಿ ಐದು ವರ್ಷ ಕಾಲ ಸಹಕಾರ ಒಪ್ಪಂದ ಚಾಲನೆಯಲ್ಲಿರುತ್ತದೆ.

Semiconductor Supply Chain: ಸೆಮಿಕಂಡಕ್ಟರ್ ಯೋಜನೆ: ಭಾರತ-ಜಪಾನ್ ಪಾಲುದಾರಿಕೆಗೆ ಕೇಂದ್ರ ಸಂಪುಟ ಅನುಮೋದನೆ
ಭಾರತ ಜಪಾನ್ ಸಹಕಾರ ಒಪ್ಪಂದ
Follow us on

ನವದೆಹಲಿ, ಅಕ್ಟೋಬರ್ 25: ಭಾರತದಲ್ಲಿ ಸಮರ್ಪಕವಾದ ಸೆಮಿಕಂಡಕ್ಟರ್ ಸರಬರಾಜು ಸರಪಳಿ (Semiconductor Supply Chain) ಸೃಷ್ಟಿಸಲು ಅನುಕೂಲವಾಗುವಂತೆ ಜಪಾನ್ ನೆರವು ಪಡೆಯುವ ಒಪ್ಪಂದಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ (Union Cabinet approval) ನೀಡಿದೆ. ಸೆಮಿಕಂಡಕ್ಟರ್ ಸಪ್ಲೈ ಚೈನ್ ಉತ್ತಮಗೊಳಿಸಲು ಎರಡೂ ದೇಶಗಳು ಜುಲೈನಲ್ಲಿ ಸಹಕಾರ ಒಪ್ಪಂದಕ್ಕೆ (MoC- Memorandum of Understanding) ಸಹಿ ಹಾಕಿದ್ದವು. ಅದಕ್ಕೀಗ ಸಂಪುಟದ ಒಪ್ಪಿಗೆ ಮುದ್ರೆ ಸಿಕ್ಕಿದೆ. ಇದು ಮಾತ್ರವಲ್ಲ, ಹಿಂಗಾರು ಋತುವಿಗೆ ರೈತರಿಗೆ ಎನ್​ಪಿಕೆ ರಸಗೊಬ್ಬರಗಳಿಗೆ (P & K Fertilizers Subsidy) ಸಬ್ಸಿಡಿ ನೀಡುವ ಪ್ರಸ್ತಾವಕ್ಕೂ ಸಂಪುಟದ ಒಪ್ಪಿಗೆ ಸಿಕ್ಕಿದೆ. ಹಾಗೆಯೇ, ಪಿಎಂ ಕೃಷಿ ಸಿಂಚಯಿ ಯೋಜನೆ ಅಡಿ ಉತ್ತರಾಖಂಡ್​ಗೆ 1,557 ಕೋಟಿ ರೂ ಸಹಾಯಧನ ಒದಗಿಸುವ ಪ್ರಸ್ತಾವಕ್ಕೂ ಸಂಪುಟದಿಂದ ಅನುಮೋದನೆ ಸಿಕ್ಕಿದೆ.

ಭಾರತಲ್ಲಿ ದೇಶೀಯವಾಗಿ ಎಲೆಕ್ಟ್ರಾನಿಕ್ಸ್ ತಯಾರಿಕೆಯ ವ್ಯವಸ್ಥೆ (Indigenous Electronics Manufacturing System) ರೂಪಿಸಲು ಸರ್ಕಾರ ಗುರಿ ಇಟ್ಟಿದೆ. ಅದರಂತೆ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಮ್ ಬೆಳೆಸುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಸೆಮಿಕಂಡಕ್ಟರ್ ಫ್ಯಾಬ್, ಡಿಸ್​ಪ್ಲೇ ಫ್ಯಾಬ್, ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್, ಒಎಸ್​ಎಟಿ ಸೌಲಭ್ಯ ಇತ್ಯಾದಿಯನ್ನು ಭಾರತದಲ್ಲೇ ನಡೆಸುವುದು ಗುರಿ. ಸೆಮಿಕಂಡಕ್ಟರ್ ಸಪ್ಲೈ ಚೈನ್ ನಿರ್ಮಿಸುವುದು ಇದರ ಒಂದು ಭಾಗ. ಈ ಕಾರ್ಯಗಳಿಗೆ ಜಪಾನ್ ಸಹಕಾರವನ್ನು ಭಾರತ ಯಾಚಿಸಿದೆ.

ಇದನ್ನೂ ಓದಿ: ಕೃಷಿಕರಿಗೆ ಸಿಹಿ ಸುದ್ದಿ..! ಕೇಂದ್ರದಿಂದ ರಸಗೊಬ್ಬರಕ್ಕೆ 22,303 ರೂ ಸಬ್ಸಿಡಿಗೆ ಅನುಮೋದನೆ

‘ಉದ್ಯಮಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬೆಳವಣಿಗೆಗೆ ಸೆಮಿಕಂಡಕ್ಟರ್ ಎಷ್ಟು ಮಹತ್ವದ್ದು ಎಂಬುದನ್ನು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್ ಸರಬರಾಜು ಸರಪಳಿಯನ್ನು ಉತ್ತಮಗೊಳಿಸಲು ಭಾರತ ಮತ್ತು ಜಪಾನ್ ನಡುವಿನ ಸಹಕಾರ ಗಟ್ಟಿಗೊಳಿಸುವುದು ಈ ಒಪ್ಪಂದದ ಆಶಯವಾಗಿದೆ’ ಎಂದು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈನಲ್ಲಿ ಭಾರತ ಮತ್ತು ಜಪಾನ್ ನಡುವೆ ಈ ಒಪ್ಪಂದಕ್ಕೆ ಸಹಿಬಿದ್ದಿತ್ತು. ಅಂದಿನಿಂದ ಆರಂಭವಾಗಿ ಐದು ವರ್ಷ ಕಾಲ ಸಹಕಾರ ಒಪ್ಪಂದ ಚಾಲನೆಯಲ್ಲಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ