ಕೃಷಿಕರಿಗೆ ಸಿಹಿ ಸುದ್ದಿ..! ಕೇಂದ್ರದಿಂದ ರಸಗೊಬ್ಬರಕ್ಕೆ 22,303 ರೂ ಸಬ್ಸಿಡಿಗೆ ಅನುಮೋದನೆ
P&K Fertilizers Subsidy: ಎನ್ಬಿಎಸ್ ಯೋಜನೆ ಅಡಿಯಲ್ಲಿ ನೈಟ್ರೋಜನ್, ಪೊಟ್ಯಾಶಿಕ್, ಫಾಸ್ಫ್ಯಾಟಿಕ್ ಮತ್ತು ಸಲ್ಫರ್ ಅಂಶದ ರಸಗೊಬ್ಬರಗಳಿವೆ. ಒಂದು ಕಿಲೋ ನೈಟ್ರೋಜನ್ (N) ರಸಗೊಬ್ಬರಕ್ಕೆ 47 ರೂ ದರ ನಿಗದಿ ಮಾಡಲಾಗಿದೆ. ಒಂದು ಕಿಲೋ ಫಾಸ್ಫೇಟ್ಗೆ (ಪಿ) 20.82 ರೂ, ಒಂದು ಕಿಲೋ ಪೊಟ್ಯಾಶ್ಗೆ (ಕೆ) 2.38 ರೂ ಹಾಗು ಸಲ್ಫರ್ ಅಥವಾ ರಂಜಕಕ್ಕೆ (ಎಸ್) 1.89 ರೂ ಸಬ್ಸಿಡಿ ಸಿಗುತ್ತದೆ.
ನವದೆಹಲಿ, ಅಕ್ಟೋಬರ್ 25: ಪೌಷ್ಟಿಕಾಂಶ ಆಧಾರಿತ ಸಬ್ಸಿಡಿಯಾದ ಎನ್ಬಿಎಸ್ ಯೋಜನೆ ಅಡಿಯಲ್ಲಿ ರಸಗೊಬ್ಬರಕ್ಕೆ 22,303 ಕೋಟಿ ರೂ ಸಬ್ಸಿಡಿ ಒದಗಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ (ಅ. 25) ಅನುಮೋದನೆ ನೀಡಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗೆ ಇರುವ ಹಿಂಗಾರು ಋತುವಿಗೆ ಈ ಸಬ್ಸಿಡಿ ಇದೆ. ಫಾಸ್ಫ್ಯಾಟಿಕ್ ಮತ್ತು ಪೊಟಾಸಿಕ್ (P & K Fertilizers) ರಸಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ರೈತರು ಕೊಳ್ಳಬಹುದಾಗಿದೆ.
ಎನ್ಬಿಎಸ್ ಯೋಜನೆ ಅಡಿಯಲ್ಲಿ ನೈಟ್ರೋಜನ್, ಪೊಟ್ಯಾಶಿಕ್, ಫಾಸ್ಫ್ಯಾಟಿಕ್ ಮತ್ತು ಸಲ್ಫರ್ ಅಂಶದ ರಸಗೊಬ್ಬರಗಳಿವೆ. ಒಂದು ಕಿಲೋ ನೈಟ್ರೋಜನ್ (N) ರಸಗೊಬ್ಬರಕ್ಕೆ 47 ರೂ ದರ ನಿಗದಿ ಮಾಡಲಾಗಿದೆ. ಒಂದು ಕಿಲೋ ಫಾಸ್ಫೇಟ್ಗೆ (P) 20.82 ರೂ, ಒಂದು ಕಿಲೋ ಪೊಟ್ಯಾಶ್ಗೆ (K) 2.38 ರೂ ಹಾಗು ಸಲ್ಫರ್ ಅಥವಾ ರಂಜಕಕ್ಕೆ (S) 1.89 ರೂ ಸಬ್ಸಿಡಿ ಸಿಗುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಬಿಡುಗಡೆ ಯಾವಾಗ? ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಿಸುವುದು ಹೇಗೆ?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ರಸಗೊಬ್ಬರಗಳ ಬೆಲೆ ಬಹಳಷ್ಟು ಕಡಿಮೆ ಆಗಿದೆ. ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ರಸಗೊಬ್ಬರ ಬೆಲೆ ಇಳಿಸಲಾಗಿದೆ.
2010ರಿಂದಲೂ ಎನ್ಬಿಎಸ್ ಸ್ಕೀಮ್ ಇದ್ದು, ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಸಿಗುವಂತೆ ಇದು ಕ್ರಮ ಕೈಗೊಳ್ಳುತ್ತದೆ.
ಡಿಎಪಿ ಗೊಬ್ಬರಕ್ಕೆ ಟನ್ಗೆ 4,500 ರೂ ಸಬ್ಸಿಡಿ ಇದೆ. ಒಂದು ಚೀಲ ಡಿಎಪಿ ರಸಗೊಬ್ಬರ 1,350 ರೂಗೆ ಸಿಗುತ್ತದೆ. ಒಂದು ಚೀಲ ಎನ್ಪಿಕೆ 1,470 ರೂಗೆ ಸಿಗುತ್ತದೆ.
ಈ ಹೊಸ ಸಬ್ಸಿಡಿ ದರಗಳು ಅಕ್ಟೋಬರ್ 1ರಿಂದ ಹಿಡಿದು 2024ರ ಮಾರ್ಚ್ 31ರವರೆಗೂ ಅನ್ವಯ ಆಗುತ್ತವೆ. ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಈ ಸಬ್ಸಿಡಿಗಳನ್ನು ಒದಗಿಸುತ್ತದೆ. ಈ ರಸಗೊಬ್ಬರಗಳನ್ನು ಕಡಿಮೆ ಬೆಲೆಗೆ ವಿತರಿಸುವ ಮೂಲಕ ಸಬ್ಸಿಡಿ ಲಾಭವನ್ನು ರೈತರಿಗೆ ವರ್ಗಾಯಿಸಲಾಗುತ್ತದೆ.
ಇದನ್ನೂ ಓದಿ: ತೆರಿಗೆ ಕಳ್ಳತನ ಆರೋಪ; ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷಕೋಟಿ ರೂ ಲೆಕ್ಕ ಕೇಳಿ ಶೋಕಾಸ್ ನೋಟೀಸ್
ಈ ರಸಗೊಬ್ಬರಗಳು ಮಣ್ಣಿಗೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸಿ, ಬೆಳೆಗಳು ಹುಲುಸಾಗಿ ಬೆಳೆಯಲು ಸಹಾಯವಾಗುತ್ತವೆ. ಆದರೆ, ಅವುಗಳ ಅಡ್ಡಪರಿಣಾಮಗಳೂ ಹಲವುಂಟು. ಇವು ರಾಸಾಯನಿಕ ಗೊಬ್ಬರಗಳಾದ್ದರಿಂದ ಪರಿಸರಕ್ಕೆ ಮತ್ತು ಮಣ್ಣಿಗೆ ದೀರ್ಘ ಕಾಲದಲ್ಲಿ ಮಾರಕವಾಗಿ ಪರಿಣಮಿಸಬಹುದು. ಮಣ್ಣಿನಲ್ಲಿರುವ ಬಹಳ ಮುಖ್ಯ ಮೈಕ್ರೋಬ್ಗಳನ್ನು ಇವು ನಾಶ ಮಾಡಬಹುದು. ಹೀಗಾಗಿ, ಹಲವು ಕೃಷಿ ತಜ್ಞರು ಸಾಂಪ್ರದಾಯಿಕ ಗೊಬ್ಬರ ಬಳಕೆಗೆ ಶಿಫಾರಸು ಮಾಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ