ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಬಿಡುಗಡೆ ಯಾವಾಗ? ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಿಸುವುದು ಹೇಗೆ?

PM Kisan Scheme 15th Installment Date: ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ. ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಬಿಡುಗಡೆ ಯಾವಾಗ? ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಿಸುವುದು ಹೇಗೆ?
ರೈತ
Follow us
|

Updated on: Oct 25, 2023 | 10:07 AM

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) 15ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಜುಲೈ ತಿಂಗಳಲ್ಲಿ 14ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಪ್ರತೀ ನಾಲ್ಕು ತಿಂಗಳಿಗೆ ಕೇಂದ್ರ ಸರ್ಕಾರ 2,000 ರೂ ಹಣವನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ. ಅದರಂತೆ, ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.

ಏನಿದು ಪಿಎಂ ಕಿಸಾನ್ ಯೋಜನೆ?

ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ.

ಜಮೀನು ಮಾಲಕತ್ವ ಹೊಂದಿರುವ ರೈತರು ಈ ಯೋಜನೆಯ ಫಲ ಪಡೆಯಲು ಅರ್ಹರಿರುತ್ತಾರೆ. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರ ಕೆಲಸದಲ್ಲಿ ಇರುವ ರೈತರು ಅಥವಾ ಅವರ ಕುಟುಂಬದವರಲ್ಲಿ ಯಾರಾದರೂ ಅಂಥವರು ಇದ್ದರೆ ಅನರ್ಹರಾಗುತ್ತಾರೆ. ಹಾಗೆಯೇ, ಶಾಸಕ, ಸಂಸದ ಇತ್ಯಾದಿ ಜನಪ್ರತಿಧಿಗಳಾದವರು, ನಿವೃತ್ತಿ ಪಿಂಚಣಿ ಪಡೆಯುತ್ತಿರುವವರೂ ಕೂಡ ಈ ಯೋಜನೆಯ ಫಲಾನುಭವಿಗಳಾಗುವಂತಿಲ್ಲ.

ಇದನ್ನೂ ಓದಿ: ಪಿಎಂ ಸ್ವನಿಧಿ ಯೋಜನೆಯ ಲಾಭ ಪಡೆದವರಲ್ಲಿ ಸಾಮಾನ್ಯೇತರ ವರ್ಗದವರು, ಮಹಿಳೆಯರೇ ಹೆಚ್ಚು, ಎಸ್​​ಬಿಐ ಸಂಶೋಧನಾ ವರದಿ: ಮೋದಿ ಮೆಚ್ಚುಗೆ

ಸುಮಾರು 10 ಕೋಟಿ ಆಸುಪಾಸಿನ ಸಂಖ್ಯೆಯಷ್ಟು ಫಲಾನುಭವಿಗಳು ಈ ಯೋಜನೆಯಲ್ಲಿದ್ದಾರೆ. ಒಂದು ಹಣಕಾಸು ವರ್ಷದಲ್ಲಿ 3 ಕಂತುಗಳಲ್ಲಿ, ಅಂದರೆ ಏಪ್ರಿಲ್​ನಿಂದ ಜುಲೈವರೆಗೆ, ಆಗಸ್ಟ್​ನಿಂದ ನವೆಂಬರ್​ವರೆಗೆ, ಡಿಸೆಂಬರ್​ನಿಂದ ಮಾರ್ಚ್​ವರೆಗಿನ ಅವಧಿಗೆ 2,000 ರೂ ಹಣವನ್ನು ಸರ್ಕಾರ ರೈತರಿಗೆ ನೀಡುತ್ತದೆ. ಸರ್ಕಾರ ಇಲ್ಲಿಯವರೆಗೆ 15 ಕಂತುಗಳಲ್ಲಿ ಒಟ್ಟು 2.5 ಲಕ್ಷಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ.

ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಾಯಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಲ್ಲಿ ಹಲವು ಮಂದಿ ಫಲಾನುಭವಿಗಳ ಹೆಸರು ಮತ್ತು ಅವರ ಆಧಾರ್​ನಲ್ಲಿರುವ ಹೆಸರಿಗೂ ಹೊಂದಿಕೆ ಆಗಿಲ್ಲದಿರುವುದು ಕಂಡು ಬಂದಿದೆ. ಆಧಾರ್​ನಲ್ಲಿರುವ ಹೆಸರೇ ಇಲ್ಲಿಯೂ ಇರಬೇಕು. ಒಂದು ವೇಳೆ ತಪ್ಪಾಗಿ ಇದ್ದರೆ ಅದನ್ನು ಆನ್​ಲೈನ್​ನಲ್ಲೇ ಸರಿಪಡಿಸಬಹುದಾಗಿದೆ.

ಇದನ್ನೂ ಓದಿ: ಬಾಸ್ಮತಿ ಅಕ್ಕಿ ರಫ್ತು ನಿರ್ಬಂಧ; ರೈತರು, ವರ್ತಕರ ಆಕ್ಷೇಪ ಹಿನ್ನೆಲೆ, ಕನಿಷ್ಠ ರಫ್ತು ಬೆಲೆ ಇಳಿಸಲು ಸರ್ಕಾರ ಆಲೋಚನೆ

ಆಧಾರ್ ಪ್ರಕಾರ ಹೆಸರು ಸರಿಪಡಿಸುವುದು ಹೇಗೆ?

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ: pmkisan.gov.in
  • ಫಾರ್ಮರ್ಸ್ ಕಾರ್ನರ್ ಸೆಗ್ಮೆಂಟ್​ನಲ್ಲಿ ಇ ಕೆವೈಸಿ, ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಇತ್ಯಾದಿ ಟ್ಯಾಬ್​ಗಳನ್ನು ಕಾಣಬಹುದು. ಅದರಲ್ಲಿ ‘ನೇಮ್ ಕರೆಕ್ಷನ್ ಆ್ಯಸ್ ಪರ್ ಆಧಾರ್’ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ ಸರ್ಚ್ ಕೊಡಿ
  • ಒಂದು ವೇಳೆ ರಿಜಿಸ್ಟ್ರೇಶನ್ ನಂಬರ್ ಗೊತ್ತಿಲ್ಲದಿದ್ದರೆ ‘ನೋ ಯುವರ್ ರಿಜಿಸ್ಟ್ರಶನ್ ನಂಬರ್’ ಟ್ಯಾಬ್ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಕೊಟ್ಟು ಒಟಿಪಿ ಪಡೆದು ಹಾಕಿರಿ.
  • ಯೋಜನೆಯ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಸಿಗುತ್ತದೆ. ಅದನ್ನು ನಮೂದಿಸಿದ ಬಳಿಕ ಹೆಸರನ್ನು ಬದಲಿಸುವ ಅವಕಾಶ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ