ತೆರಿಗೆ ಕಳ್ಳತನ ಆರೋಪ; ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷಕೋಟಿ ರೂ ಲೆಕ್ಕ ಕೇಳಿ ಶೋಕಾಸ್ ನೋಟೀಸ್

GST Notice To Online Gaming Companies: ಇಲ್ಲಿಯವರೆಗೆ 1 ಲಕ್ಷ ಕೋಟಿ ರೂ ಮೊತ್ತದ ತೆರಿಗೆ ವಂಚನೆ ಬಗ್ಗೆ ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ಸೆಪ್ಟೆಂಬರ್​ನಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಡ್ರೀಮ್11 ಮೊದಲಾದ ಆನ್ಲೈನ್ ಗೇಮಿಂಗ್ ಕಂಪನಿಗಳು, ಡೆಲ್ಟಾ ಕಾರ್ಟ್ ಇತ್ಯಾದಿ ಕ್ಯಾಸಿನೋ ಆಪರೇಟಿಂಗ್ ಕಂಪನಿಗಳಿಗೆ ಜಿಎಸ್​ಟಿ ಇಲಾಖೆ ನೋಟೀಸ್ ಕೊಟ್ಟಿದೆ. 2022ರ ಸೆಪ್ಟೆಂಬರ್​ನಲ್ಲಿ ಗೇಮ್ಸ್​ಕ್ರಾಫ್ಟ್ ಎಂಬ ಕಂಪನಿ 21,000 ಕೋಟಿ ರೂ ಜಿಎಸ್​ಟಿ ತೆರಿಗೆ ಕಟ್ಟಿಲ್ಲವೆಂದು ಆರೋಪಿಸಿ ನೋಟೀಸ್ ಕೊಡಲಾಗಿತ್ತು. ಆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಗೇಮ್ಸ್​ಕ್ರಾಫ್ಟ್ ಪರವಾಗಿ ತಿರ್ಪು ನೀಡಿತ್ತು.

ತೆರಿಗೆ ಕಳ್ಳತನ ಆರೋಪ; ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷಕೋಟಿ ರೂ ಲೆಕ್ಕ ಕೇಳಿ ಶೋಕಾಸ್ ನೋಟೀಸ್
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2023 | 2:52 PM

ನವದೆಹಲಿ, ಅಕ್ಟೋಬರ್ 25: ತೆರಿಗೆ ಕಳ್ಳತನ ಮಾಡಲಾಗಿದೆ ಎಂದು ವಿವಿಧ ಆನ್ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧ ಜಿಎಸ್​ಟಿ ಅಧಿಕಾರಿಗಳು ಶೋಕಾಸ್ ನೋಟೀಸ್ (show cause notice) ನೀಡಿದ್ದಾರೆ. ಈ ಕಂಪನಿಗಳಿಂದ ಆಗಿರುವ ತೆರಿಗೆ ವಂಚನೆಯ ಒಟ್ಟು ಮೊತ್ತ 1 ಲಕ್ಷಕೋಟಿ ರೂ ಎಂದೆನ್ನಲಾಗಿದೆ. ವಿವಿಧ ಅವಧಿಗಳಲ್ಲಿ ಈ ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ಒಂದು ವರ್ಷದ ಹಿಂದೆ, 2022ರ ಸೆಪ್ಟೆಂಬರ್​ನಲ್ಲಿ ಗೇಮ್ಸ್​ಕ್ರಾಫ್ಟ್ ಎಂಬ ಕಂಪನಿ 21,000 ಕೋಟಿ ರೂ ಜಿಎಸ್​ಟಿ ತೆರಿಗೆ ಕಟ್ಟಿಲ್ಲವೆಂದು ಆರೋಪಿಸಿ ನೋಟೀಸ್ ಕೊಡಲಾಗಿತ್ತು. ಆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಗೇಮ್ಸ್​ಕ್ರಾಫ್ಟ್ ಪರವಾಗಿ ತಿರ್ಪು ನೀಡಿತ್ತಾದರೂ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್​ನಲ್ಲಿ ಸ್ಪೆಷಲ್ ಲೀವ್ ಪೆಟಿಶನ್ ಹಾಕಿದೆ.

ಗೇಮ್ಸ್​ಕ್ರಾಫ್ಟ್ ಮಾತ್ರವಲ್ಲದೇ ಡ್ರೀಮ್11 ಮೊದಲಾದ ಆನ್ಲೈನ್ ಗೇಮಿಂಗ್ ಕಂಪನಿಗಳು, ಡೆಲ್ಟಾ ಕಾರ್ಟ್ ಇತ್ಯಾದಿ ಕ್ಯಾಸಿನೋ ಆಪರೇಟಿಂಗ್ ಕಂಪನಿಗಳಿಗೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್​ಟಿ ಇಲಾಖೆಯಿಂದ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ.

‘ಇಲ್ಲಿಯವರೆಗೆ 1 ಲಕ್ಷ ಕೋಟಿ ರೂ ಮೊತ್ತದ ತೆರಿಗೆ ವಂಚನೆ ಬಗ್ಗೆ ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ನೋಟೀಸ್ ಸಲ್ಲಿಸಲಾಗಿದೆ,’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ವಿವಿಧ ಮಾಧ್ಯಮಗಳು ಉಲ್ಲೇಖಿಸಿ ವರದಿ ಮಾಡಿವೆ.

ಇದನ್ನೂ ಓದಿ: ಪಿಎಂ ಸ್ವನಿಧಿ ಯೋಜನೆಯ ಲಾಭ ಪಡೆದವರಲ್ಲಿ ಸಾಮಾನ್ಯೇತರ ವರ್ಗದವರು, ಮಹಿಳೆಯರೇ ಹೆಚ್ಚು, ಎಸ್​​ಬಿಐ ಸಂಶೋಧನಾ ವರದಿ: ಮೋದಿ ಮೆಚ್ಚುಗೆ

ವಿದೇಶೀ ಕಂಪನಿಗಳ ನೊಂದಣಿ

ವಿದೇಶದ ಆನ್ಲೈನ್ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೊಂದಣಿ ಆಗಬೇಕೆಂದು ಕಡ್ಡಾಯಪಡಿಸಿ ಜಿಎಸ್​ಟಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಅಕ್ಟೋಬರ್ 1ರಿಂದ ಈ ನಿಯಮ ಜಾರಿಯಲ್ಲಿದೆ. ಆದರೆ, ಇಲ್ಲಿಯವರೆಗೆ ಯಾವ್ಯಾವ ವಿದೇಶೀ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೊಂದಣಿ ಮಾಡಿಕೊಂಡಿವೆ ಎಂಬ ಮಾಹಿತಿ ಸದ್ಯಕ್ಕೆ ದೊರೆತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ