Genus Share: ಒಂದು ಲಕ್ಷ ರೂ ಹೂಡಿಕೆ ಮೂರು ವರ್ಷದಲ್ಲಿ 9 ಲಕ್ಷಕ್ಕೆ ವೃದ್ಧಿ; ಇದು ಜೀನಸ್ ಪವರ್ ಷೇರು ಮಹಿಮೆ

Multibagger Stock: ಜೀನಸ್ ಪವರ್ ಇನ್​ಫ್ರಾಸ್ಟ್ರಕ್ಚರ್ಸ್ ಲಿ ಸಂಸ್ಥೆ 19 ವರ್ಷಗಳ ಹಿಂದೆ 2005 ಜುಲೈನಲ್ಲಿ ಷೇರುಪೇಟೆಗೆ ಅಡಿ ಇಟ್ಟಿತ್ತು. ಆಗ ಇದರ ಬೆಲೆ 11 ರೂ ಆಸುಪಾಸಿನಲ್ಲಿತ್ತು. ಇದೀಗ 19 ವರ್ಷದಲ್ಲಿ 2035 ಪ್ರತಿಶತದಷ್ಟು ಬೆಳೆದು 255.60 ರೂ ಆಗಿದೆ. ಜೀನಸ್ ಪವರ್ ರಾಜಸ್ಥಾನ ಮೂಲದ ಕಂಪನಿಯಾಗಿದ್ದು, ಸ್ಮಾರ್ಟ್ ಮೀಟರ್, ಹೈಬ್ರಿಡ್ ಮೈಕ್ರೋಸರ್ಕ್ಯೂಟ್ಸ್ ಇತ್ಯಾದಿ ತಯಾರಿಸುತ್ತದೆ.

Genus Share: ಒಂದು ಲಕ್ಷ ರೂ ಹೂಡಿಕೆ ಮೂರು ವರ್ಷದಲ್ಲಿ 9 ಲಕ್ಷಕ್ಕೆ ವೃದ್ಧಿ; ಇದು ಜೀನಸ್ ಪವರ್ ಷೇರು ಮಹಿಮೆ
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2023 | 4:42 PM

ನವದೆಹಲಿ, ಅಕ್ಟೋಬರ್ 25: ಸ್ಮಾರ್ಟ್ ಎನರ್ಜಿ ಮೀಟರ್, ಹೈಬ್ರಿಡ್ ಮೈಕ್ರೋಸರ್ಕಿಟ್ಸ್ ಇತ್ಯಾದಿ ತಯಾರಿಸುವ ಮತ್ತು ವಿದ್ಯುತ್ ವಿತರಣೆ ವ್ಯವಹಾರ ಕೂಡ ಮಾಡುವ ರಾಜಸ್ಥಾನ ಮೂಲದ ಜೀನಸ್ ಪವರ್ ಇನ್​ಫ್ರಾಸ್ಟ್ರಕ್ಚರ್ಸ್ ಲಿ (Genus Power Infrastructures Ltd) ಸಂಸ್ಥೆಯ ಷೇರು ಮಲ್ಟಿಬ್ಯಾಗರ್ ಎನಿಸಿದೆ. ಇದರ ಷೇರುಬೆಲೆ 19 ವರ್ಷದಲ್ಲಿ 19 ಪಟ್ಟು ಹೆಚ್ಚಾಗಿದೆ. ಅಂದರೆ ಪ್ರತೀ ವರ್ಷ ಹೂಡಿಕೆ ಮೊತ್ತ ದುಪ್ಪಟ್ಟಾಗಿ ಬರುತ್ತಿದೆ. ಕಳೆದ ಮೂರು ವರ್ಷದಿಂದೀಚೆ ಕಿರು ಅವಧಿ ಹೂಡಿಕೆದಾರರು ಮತ್ತು ದೀರ್ಘ ಅವಧಿ ಹೂಡಿಕೆದಾರರಿಬ್ಬರಿಗೂ ಭರ್ಜರಿ ಲಾಬ ತಂದಿದೆ.

ಜೀನಸ್ ಪವರ್ ಇನ್​ಫ್ರಾಸ್ಟ್ರಕ್ಚರ್ಸ್ ಲಿ ಸಂಸ್ಥೆ 19 ವರ್ಷಗಳ ಹಿಂದೆ 2005 ಜುಲೈನಲ್ಲಿ ಷೇರುಪೇಟೆಗೆ ಅಡಿ ಇಟ್ಟಿತ್ತು. ಆಗ ಇದರ ಬೆಲೆ 11 ರೂ ಆಸುಪಾಸಿನಲ್ಲಿತ್ತು. ಇದೀಗ 19 ವರ್ಷದಲ್ಲಿ 2035 ಪ್ರತಿಶತದಷ್ಟು ಬೆಳೆದು 255.60 ರೂ ಆಗಿದೆ.

ಆರಂಭದಲ್ಲೇ 1 ಲಕ್ಷ ರೂ ಹೂಡಿಕೆ ಮಾಡಿದ್ದವರಿಗೆ…?

2005ರಲ್ಲಿ ಇದರ ಷೇರುಬೆಲೆ 11.97 ರೂ ಇದ್ದಾಗ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ, ಇವತ್ತು ಅವರ ಷೇರುಸಂಪತ್ತು 21.35 ಲಕ್ಷ ರೂ ಆಗುತ್ತಿತ್ತು.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಬಿಡುಗಡೆ ಯಾವಾಗ? ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಿಸುವುದು ಹೇಗೆ?

ಜೀನಸ್ ಪವರ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆಯ ಷೇರು ಬೆಲೆ ಜಿಗಿತ 4 ಹಂತಗಳಲ್ಲಿ ಆಗಿರುವುದನ್ನು ಗಮನಿಸಬಹುದು. 2005ರಿಂದ 2007ರವರೆಗೆ 11 ರೂನಿಂದ 71ರೂವರೆಗೆ ಜಂಪ್ ಕಂಡಿತ್ತು. ಬಳಿಕ 2014ರಿಂದ 2018ರವರೆಗೆ 11 ರೂನಿಂದ 78 ರೂ ಆಯಿತು.

2020ರಿಂದ 2023ರ ಮೇ ತಿಂಗಳವರೆಗೆ 16 ರೂನಿಂದ 87 ರೂಗೆ ಏರಿತ್ತು. 2023ರ ಮೇ ತಿಂಗಳಿನಿಂದ ಜೀನಸ್ ಪವರ್ ಷೇರು ಸಖತ್ತಾಗಿ ಬೆಳೆದಿದೆ. ಒಂದು ಹಂತದಲ್ಲಿ 289 ರೂವರೆಗೂ ಅದರ ಷೇರುಬೆಲೆ ಏರಿದೆ.

ಆರು ತಿಂಗಳ ಹಿಂದೆ ಹೂಡಿಕೆ ಮಾಡಿದ್ದರೆ?

ಇದೆ ಏಪ್ರಿಲ್ ತಿಂಗಳಲ್ಲಿ ಜೀನಸ್ ಪವರ್ ಇನ್​ಫ್ರಾಸ್ಟ್ರಕ್ಚರ್ ಷೇರುಬೆಲೆ 85 ರೂ ಇತ್ತು. ಆಗ ಯಾರಾದರೂ ಇದರ ಷೇರಿನ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 3 ಲಕ್ಷ ರೂ ಆಗಿರುತ್ತಿತ್ತು. ಆರು ತಿಂಗಳ ಅವಧಿಯಲ್ಲಿ ಹೂಡಿಕೆ ಮೂರು ಪಟ್ಟು ಲಾಭ ತಂದಿದೆ.

ಇದನ್ನೂ ಓದಿ: ತೆರಿಗೆ ಕಳ್ಳತನ ಆರೋಪ; ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷಕೋಟಿ ರೂ ಲೆಕ್ಕ ಕೇಳಿ ಶೋಕಾಸ್ ನೋಟೀಸ್

ಜೀನಸ್ ಪವರ್​ನ ದಿಢೀರ್ ವೇಗಕ್ಕೆ ಕಾರಣ?

ಜೀನಸ್ ಪವರ್ ಸಂಸ್ಥೆ ಇತ್ತೀಚೆಗೆ ಗಣನೀಯವಾಗಿ ಬೇಡಿಕೆ ಪಡೆಯಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ಸ್ಮಾರ್ಟ್ ಮೀಟರ್​ಗಳ ಗುತ್ತಿಗೆ. 3,115 ಕೋಟಿ ರೂ ಮೌಲ್ಯದ ಸ್ಮಾರ್ಟ್ ಮೀಟರ್​ಗಳ ಅಳವಡಿಕೆಗೆ ಸರ್ಕಾರದಿಂದ ಜೀನಸ್ ಪವರ್​ಗೆ ಗುತ್ತಿಗೆ ಸಿಕ್ಕಿತ್ತು. ಇದು ಸಂಸ್ಥೆಯ ಷೇರುಗಳಿಗೆ ಬೇಡಿಕೆ ಸೃಷ್ಟಿಯಾಗಲು ಪ್ರಮುಖ ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ