7 IPOs: ಮುಂದಿನ ವಾರ ಏಳು ಐಪಿಒಗಳ ಬಿಡುಗಡೆ; 1600 ಕೋಟಿ ರೂ ಬಂಡವಾಳ ಸಂಗ್ರಹದ ಗುರಿ

|

Updated on: Jun 25, 2023 | 11:16 AM

Seven IPOs Offering Next Week: ಜೂನ್ 26ರಿಂದ 30ರವರೆಗೆ 3 ದೊಡ್ಡ ಕಂಪನಿಗಳು ಹಾಗೂ 4 ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಆಫರ್ ಕೊಡುತ್ತಿವೆ. ಈ ಏಳೂ ಕಂಪನಿಗಳು ಒಟ್ಟಾರೆ 1,600 ಕೋಟಿ ರೂ ಸಂಗ್ರಹದ ಗುರಿ ಇಟ್ಟುಕೊಂಡಿವೆ.

7 IPOs: ಮುಂದಿನ ವಾರ ಏಳು ಐಪಿಒಗಳ ಬಿಡುಗಡೆ; 1600 ಕೋಟಿ ರೂ ಬಂಡವಾಳ ಸಂಗ್ರಹದ ಗುರಿ
ಷೇರುಪೇಟೆ
Follow us on

ನವದೆಹಲಿ: ಷೇರುಪೇಟೆ ಇತ್ತೀಚಿನ ಭರ್ಜರಿ ವ್ಯವಹಾರ ಕಾಣುತ್ತಿರುವ ಹೊತ್ತಿನಲ್ಲೇ ಐಪಿಒಗಳು ಸಾಲುಸಾಲಾಗಿ ಬಿಡುಗಡೆ ಆಗುತ್ತಿವೆ. ಜೂನ್ 26ರಿಂದ 30ರವರೆಗೆ 3 ದೊಡ್ಡ ಕಂಪನಿಗಳು ಹಾಗೂ 4 ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (IPO- Initial Public Offering) ಆಫರ್ ಕೊಡುತ್ತಿವೆ. ಈ ಏಳೂ ಕಂಪನಿಗಳು ಒಟ್ಟಾರೆ 1,600 ಕೋಟಿ ರೂ ಸಂಗ್ರಹದ ಗುರಿ ಇಟ್ಟುಕೊಂಡಿವೆ. ಇದರಲ್ಲಿ ಐಡಿಯಫೋರ್ಜ್, ಸೈಯೆಂಟ್ ಡಿಎಲ್​ಎಂ, ಪಿಕೆಎಚ್ ವೆಂಚರ್ಸ್ ದೊಡ್ಡ ಮಟ್ಟದ ಕಂಪನಿಗಳೆನಿಸಿವೆ. ಪೆಂಟಗಾನ್ ರಬ್ಬರ್, ಗ್ಲೋಬಲ್ ಪೆಟ್ ಇಂಡಸ್ಟ್ರೀಸ್, ಸಿನಾಪ್ಟಿಕ್ಸ್ ಟೆಕ್ನಾಲಜೀಸ್, ತ್ರಿಧ್ಯಾ ಟೆಕ್ ಕಂಪನಿಗಳು ಎಸ್​ಎಂಇಗಳಾಗಿವೆ.

ಐಡಿಯಾಫೋರ್ಜ್ ಟೆಕ್ನಾಲಜಿ (ideaForge Technology)

  • ಐಪಿಒ ದಿನಾಂಕ: ಜೂನ್ 26ರಿಂದ 29ರವರೆಗೆ
  • ಪ್ರತೀ ಷೇರಿನ ಬೆಲೆ: 638 ರೂನಿಂದ 672 ರೂ.
  • ಕನಿಷ್ಠ ಷೇರು ಖರೀದಿ: 22
  • ಒಟ್ಟು ಬಂಡವಾಳ ಗುರಿ: 567 ಕೋಟಿ ರೂ
  • ಷೇರುಪೇಟೆಗೆ ಲಿಸ್ಟ್ ಆಗುವ ದಿನ: ಜುಲೈ 7ಕ್ಕೆ

ಸೈಯೆಂಟ್ ಡಿಎಲ್​ಎಂ (Cyient DLM)

  • ಐಪಿಒ ದಿನಾಂಕ: ಜೂನ್ 27ರಿಂದ 30ರವರೆಗೆ
  • ಪ್ರತೀ ಷೇರಿನ ಬೆಲೆ: 250 ರೂನಿಂದ 265 ರೂವರೆಗೆ
  • ಸಾರ್ವಜನಿಕರಿಗೆ ಲಭ್ಯ ಇರುವ ಒಟ್ಟು ಷೇರು: 2.23 ಕೋಟಿ ರೂ
  • ಕನಿಷ್ಠ ಷೇರು ಖರೀದಿ: 56
  • ಒಟ್ಟು ಬಂಡವಾಳ ಗುರಿ: 592 ಕೋಟಿ ರೂ
  • ಷೇರುಪೇಟೆಗೆ ಲಿಸ್ಟ್ ಆಗುವ ದಿನ: ಜುಲೈ 10ಕ್ಕೆ

ಇದನ್ನೂ ಓದಿForex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಪಿಕೆಎಚ್ ವೆಂಚರ್ಸ್ (PKH Ventures)

  • ಐಪಿಒ ದಿನಾಂಕ: ಜೂನ್ 30ರಿಂದ ಜುಲೈ 4ರವರೆಗೆ
  • ಒಟ್ಟು ಷೇರುಗಳು: 2.56 ಕೋಟಿ ರೂ
  • ಪ್ರತೀ ಷೇರಿಗೆ ಆಫರ್ ಮಾಡಿರುವ ದರ: ಇನ್ನೂ ತಿಳಿಸಿಲ್ಲ
  • ಒಟ್ಟು ಬಂಡವಾಳ ಗುರಿ: 380 ಕೋಟಿ ರೂ
  • ಷೇರುಪೇಟೆಯಲ್ಲಿ ಲಿಸ್ಟ್ ಆಗುವ ದಿನ: ಜುಲೈ 12ಕ್ಕೆ

ಪೆಂಟಗಾನ್ ರಬ್ಬರ್ (Pentagon Rubber)

  • ಐಪಿಒ ದಿನಾಂಕ: ಜೂನ್ 26ರಿಂದ ಜೂನ್ 30ರವರೆಗೂ
  • ಒಟ್ಟು ಷೇರುಗಳು: 23.1 ಲಕ್ಷ ಈಕ್ವಿಟಿ ಷೇರುಗಳು
  • ಪ್ರತೀ ಷೇರಿನ ಬೆಲೆ: 65ರಿಂದ 70 ರೂ
  • ಒಟ್ಟು ಬಂಡವಾಳ ಗುರಿ: 16.17 ಕೋಟಿ ರೂ

ಗ್ಲೋಬಲ್ ಪೆಟ್ ಇಂಡಸ್ಟ್ರೀಸ್ (Global Pet Industries)

  • ಐಪಿಒ ದಿನಾಂಕ: ಜೂನ್ 29ರಿಂದ ಜುಲೈ 3ರವರೆಗೆ
  • ಪ್ರತೀ ಷೇರಿನ ಬೆಲೆ: 49 ರೂ
  • ಒಟ್ಟು ಷೇರುಗಳು: 27 ಲಕ್ಷ
  • ಬಂಡವಾಳ ಸಂಗ್ರಹ ಗುರಿ: 13.23 ಕೋಟಿ ರೂ

ಇದನ್ನೂ ಓದಿPM-Kisan Samman Nidhi Yojana: ಇ-ಕೆವೈಸಿ ಆಗದಿದ್ದರೆ ನಿಮ್ಮ ಖಾತೆಗೆ ಹಣ ಬರಲ್ಲಾ ಎಚ್ಚರ!

ಸಿನಾಪ್ಟಿಕ್ಸ್ ಟೆಕ್ನಾಲಜೀಸ್ (Synoptics Technologies)

  • ಐಪಿಒ ದಿನಾಂಕ: ಜೂನ್ 30ರಿಂದ ಜುಲೈ 5ರವರೆಗೆ
  • ಒಟ್ಟು ಷೇರುಗಳು: 22.88 ಲಕ್ಷ
  • ಪ್ರತೀ ಷೇರಿನ ಬೆಲೆ: 237 ರೂ
  • ಒಟ್ಟು ಬಂಡವಾಳ ಸಂಗ್ರಹ ಗುರಿ: 54.03 ಕೋಟಿ ರೂ

ತ್ರಿಧ್ಯಾ ಟೆಕ್ (Tridhya Tech)

  • ಐಪಿಒ ದಿನಾಂಕ: ಜೂನ್ 30ರಿಂದ ಜುಲೈ 5ರವರೆಗೆ
  • ಒಟ್ಟು ಷೇರುಗಳು: 62.88 ಲಕ್ಷ
  • ಪ್ರತೀ ಷೇರಿನ ಬೆಲೆ: 35ರಿಂದ 42 ರೂ
  • ಒಟ್ಟು ಬಂಡವಾಳ ಗುರಿ: 26.41 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ