ನವದೆಹಲಿ: ಕಳೆದ ವಾರದ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ವಹಿವಾಟು ನಡೆದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆ ಮಟ್ಟಕ್ಕೆ ಏರಿವೆ. ಇದರ ಪರಿಣಾಮವಾಗಿ ಬಹಳಷ್ಟು ಕಂಪನಿಗಳ ಷೇರುಸಂಪತ್ತು ಅಮೋಘವಾಗಿ ಬೆಳೆದಿದೆ. ಅತಿಹೆಚ್ಚು ಷೇರುಸಂಪತ್ತು (Market Capitalisation) ಹೊಂದಿರುವ 10 ಅಗ್ರಮಾನ್ಯ ಸಂಸ್ಥೆಗಳ ಪೈಕಿ 6 ಕಂಪನಿಗಳ ಷೇರುಗಳ ಮೌಲ್ಯ ಗಮನಾರ್ಹವಾಗಿ ಹೆಚ್ಚಿದೆ. ಈ ಆರು ಕಂಪನಿಗಳ ಒಟ್ಟು ಷೇರುಸಂಪತ್ತು 1,13,703.82 ಕೋಟಿ ರೂನಷ್ಟು ಏರಿದೆ. ಈ ಏರಿಕೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನದ್ದು ಸಿಂಹಪಾಲು. ಕಳೆದ ವಾರ (ಜೂನ್ 12-16) ಬಿಎಸ್ಇ ಬೆಂಚ್ಮಾರ್ಕ್ 758.95 ಅಂಕಗಳಷ್ಟು ಜಿಗಿತ ಕಂಡಿತ್ತು. ಬಿಎಸ್ಇ ಸೆನ್ಸೆಕ್ಸ್ ಜೂನ್ 16ಕ್ಕೆ 63,384.58 ಅಂಕಗಳ ಮಟ್ಟ ಮುಟ್ಟಿತ್ತು. ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪ ಇದೆ.
ಟಾಪ್-10 ಕಂಪನಿಗಳ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಟಿಸಿ, ಇನ್ಫೋಸಿಸ್, ಎಚ್ಡಿಎಫ್ಸಿ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ಕಳೆದ ವಾರ ಷೇರುಸಂಪತ್ತು ಏರಿಸಿಕೊಂಡಿವೆ. ಈ 6 ಕಂಪನಿಗಳ ಒಟ್ಟಾರೆ 1.13 ಲಕ್ಷಕೋಟಿ ಷೇರುಸಂಪತ್ತು ಏರಿಕೆಯಲ್ಲಿ ಆರ್ಐಎಲ್ವೊಂದೇ 63,259.05 ಕೋಟಿಯಷ್ಟು ಷೇರುಸಂಪತ್ತು ಹೆಚ್ಚಿಸಿಕೊಂಡಿದೆ.
ಇನ್ನುಳಿದ ನಾಲ್ಕು ಅಗ್ರಮಾನ್ಯ ಕಂಪನಿಗಳೆನಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಹೆಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್ಬಿಐನ ಷೇರುಗಳು ಮೌಲ್ಯಕುಸಿತ ಕಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ