Rs 500 Notes: ಮುದ್ರಣಗೊಂಡ ಕೋಟ್ಯಂತರ 500 ರೂ ನೋಟುಗಳು ಆರ್​ಬಿಐಗೆ ತಲುಪುವ ಮುನ್ನವೇ ಕಾಣೆಯಾಗಿವೆಯಾ? ಆರ್​ಬಿಐ ಏನು ಹೇಳುತ್ತೆ?

RBI Denies Reports Of Missing Rs 500 Notes: ಪ್ರಿಂಟಿಂಗ್ ಪ್ರೆಸ್​ಗಳಿಂದ ಮುದ್ರಣಗೊಂಡ 881 ಕೋಟಿ ನೋಟುಗಳಲ್ಲಿ 726 ಕೋಟಿ ನೋಟುಗಳು ಮಾತ್ರ ಆರ್​ಬಿಐ ತಲುಪಿವೆ. ಉಳಿದ ನೋಟುಗಳು ಕಾಣೆಯಾಗಿವೆ ಎನ್ನುವಂತಹ ವರದಿ ಫ್ರೀ ಪ್ರೆಸ್ ಜರ್ನಲ್​ನಲ್ಲಿ ಪ್ರಕಟವಾಗಿದ್ದು, ಇದನ್ನು ಆರ್​ಬಿಐ ನಿರಾಕರಿಸಿದೆ.

Rs 500 Notes: ಮುದ್ರಣಗೊಂಡ ಕೋಟ್ಯಂತರ 500 ರೂ ನೋಟುಗಳು ಆರ್​ಬಿಐಗೆ ತಲುಪುವ ಮುನ್ನವೇ ಕಾಣೆಯಾಗಿವೆಯಾ? ಆರ್​ಬಿಐ ಏನು ಹೇಳುತ್ತೆ?
500 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2023 | 1:58 PM

ನವದೆಹಲಿ: ಭಾರತದ ಅರ್ಥವ್ಯವಸ್ಥೆಯಿಂದ 88,032.5 ಕೋಟಿ ರೂ ಮೊತ್ತದ ಕರೆನ್ಸಿ ನೋಟುಗಳು ಕಾಣೆ ಅಗಿವೆ ಎನ್ನುವಂತಹ ಸುದ್ದಿ ಬಹಳ ಮಂದಿಯ ಗಮನ ಸೆಳೆದಿದೆ. ಫ್ರೀ ಪ್ರೆಸ್ ಜರ್ನಲ್ (Free Press Journal) ಎಂಬ ಆನ್​ಲೈನ್ ನ್ಯೂಸ್ ವೆಬ್​​ಸೈಟ್​ನಲ್ಲಿ ಇಂಥದ್ದೊಂದು ಸುದ್ದಿ ಶನಿವಾರ ಪ್ರಕಟವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಬಳಸಿ ಮನೋರಂಜನ್ ರಾಯ್ ಎಂಬ ವ್ಯಕ್ತಿ ಕಲೆಹಾಕಿದ ಮಾಹಿತಿಯನ್ನಾಧರಿಸಿ ಈ ವರದಿ ಪ್ರಕಟವಾಗಿತ್ತು. ಅದರ ಪ್ರಕಾರ, 881.065 ಕೋಟಿಯಷ್ಟು ಹೊಸ 500 ರೂ ಮುಖಬೆಲೆಯ ನೋಟುಗಳನ್ನು (Rs 500 Note) ಮುದ್ರಿಸಲಾಗಿತ್ತು. ಇದರಲ್ಲಿ 726 ಕೋಟಿ ನೋಟುಗಳು ಮಾತ್ರ ಆರ್​ಬಿಐಗೆ ಸ್ವೀಕೃತವಾಗಿವೆ. ಉಳಿದ ನೋಟುಗಳು ನಾಪತ್ತೆಯಾಗಿವೆ. ಈ ನಾಪತ್ತೆಯಾಗಿರುವ ನೋಟುಗಳ ಮೌಲ್ಯ 88,032.50 ಕೋಟಿ ರೂ ಆಗುತ್ತದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಫ್ರೀ ಪ್ರೆಸ್ ಜರ್ನಲ್ ವೆಬ್​ಸೈಟ್​ನಲ್ಲಿ ಬಂದ ಈ ವರದಿಯಲ್ಲಿರುವ ಅಂಶವನ್ನು ಆರ್​ಬಿಐ ತಳ್ಳಿಹಾಕಿದೆ. ‘ಮುದ್ರಿತವಾಗಿರುವ ಬ್ಯಾಂಕ್​ನೋಟುಗಳು ಕಾಣೆಯಾಗಿರುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಗಳು ಬಂದಿರುವುದು ಆರ್​​ಬಿಐನ ಗಮನಕ್ಕೆ ಬಂದಿದೆ. ಆದರೆ, ಈ ವರದಿಗಳು ಸತ್ಯವಲ್ಲ. ಪ್ರಿಂಟಿಂಗ್ ಪ್ರೆಸ್​ಗಳಿಂದ ಆರ್​ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಇದನ್ನೂ ಓದಿSalary Gap: ಛೇ ಛೇ..! ಸರ್ಕಾರಿ ವರ್ಸಸ್ ಖಾಸಗಿ ಸಂಸ್ಥೆ; ಎಸ್​ಬಿಐ ಛೇರ್ಮನ್​ಗೆ ಸಿಗೋ ಸಂಬಳ ಇಷ್ಟೇನಾ?

ಪ್ರಿಂಟಿಂಗ್ ಪ್ರೆಸ್​ಗಳಲ್ಲಿ ನೋಟುಗಳ ಮುದ್ರಣ ಆಗುವುದರಿಂದ ಹಿಡಿದು ಆರ್​ಬಿಐಗೆ ಈ ನೋಟುಗಳು ಸರಬರಾಜು ಆಗುವವರೆಗೂ ಪ್ರತಿಯೊಂದು ಹಂತದಲ್ಲೂ ಬಹಳ ನಿಗಾ ಇರುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಆರ್​ಬಿಐನಿಂದ ಪ್ರಕಟವಾಗುವ ಮಾಹಿತಿಯ ಮೇಲೆ ಮಾತ್ರ ವಿಶ್ವಾಸ ಇಡಬೇಕು ಎಂದು ಅದು ಮನವಿ ಮಾಡಿದೆ.

ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಲಿ, ಮಹಾರಾಷ್ಟ್ರದ ನಾಶಿಕ್​ನ ಕರೆನ್ಸಿ ನೋಟ್ ಪ್ರೆಸ್ ಮತ್ತು ಮಧ್ಯಪ್ರದೇಶದ ದೇವಸ್​ನ ಬ್ಯಾಂಕ್ ನೋಟ್ ಪ್ರೆಸ್ ಸಂಸ್ಥೆಗಳು ರೂಪಾಯಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ