Infosys Warning: ಕಚೇರಿಗೆ ಬಂದು ಕೆಲಸ ಮಾಡಿ, ಇಲ್ಲ ಶಿಸ್ತು ಕ್ರಮ ಎದುರಿಸಿ: ಅಮೆರಿಕ, ಕೆನಡಾ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ

No WFH, Says Infosys To US Employees: ಕಚೇರಿಗೆ ಬಂದೇ ಕೆಲಸ ಮಾಡಬೇಕು, ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಇನ್ಫೋಸಿಸ್ ಸಂಸ್ಥೆ ಅಮೆರಿಕ ಮತ್ತು ಕೆನಡಾದಲ್ಲಿರುವ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Infosys Warning: ಕಚೇರಿಗೆ ಬಂದು ಕೆಲಸ ಮಾಡಿ, ಇಲ್ಲ ಶಿಸ್ತು ಕ್ರಮ ಎದುರಿಸಿ: ಅಮೆರಿಕ, ಕೆನಡಾ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ
ಇನ್ಫೋಸಿಸ್
Follow us
|

Updated on: Jun 18, 2023 | 11:46 AM

ಬೆಂಗಳೂರು: ವರ್ಕ್ ಫ್ರಂ ಹೋಂ ಮತ್ತು ವರ್ಕ್ ಫ್ರಂ ಆಫೀಸ್ ದ್ವಂದ್ವದಲ್ಲಿ ಕಂಪನಿಗಳು ಮತ್ತು ಉದ್ಯೋಗಿಗಳ ಮಧ್ಯೆ ಕೆಲವೆಡೆ ಹಗ್ಗ ಜಗ್ಗಾಟ ನಿಲ್ಲುತ್ತಿಲ್ಲ. 3 ವರ್ಷಗಳಿಂದ ಮನೆಯಿಂದ ಕೆಲಸ ಮಾಡುತ್ತಾ ಒಗ್ಗಿಹೋಗಿರುವ ಕೆಲ ಉದ್ಯೋಗಿಗಳು ಕಚೇರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಿಂದ ಕೆಲಸ ಮಾಡಲು ಬಿಟ್ಟಿದ್ದೇ ದೊಡ್ಡ ತಪ್ಪಾಯಿತು ಎಂದು ಕೊರೋನಾಗೆ ಹಿಡಿಶಾಪ ಹಾಕುತ್ತಿರುವ ಐಟಿ ಕಂಪನಿಗಳು, ಮನೆಗಂಟಿಕೊಂಡಿರುವ ಉದ್ಯೋಗಿಗಳನ್ನು ಕಚೇರಿಗೆ ಕರೆತರಲು ಸಾಮ ದಾನ ಭೇದ ಇತ್ಯಾದಿ ನಾನಾ ಅಸ್ತ್ರಗಳನ್ನು ಪ್ರಯೋಗಿಸುತ್ತಿವೆ. ಇನ್ಫೋಸಿಸ್ ಸಂಸ್ಥೆ (Infosys) ಅಮೆರಿಕ ಮತ್ತು ಕೆನಡಾದಲ್ಲಿರುವ ತನ್ನ ಉದ್ಯೋಗಿಗಳಿಗೆ ದಂಡಂ ದಶಗುಣಂ ಬೆದರಿಕೆ ಹಾಕುತ್ತಿರುವುದು ತಿಳಿದುಬಂದಿದೆ. ಕಚೇರಿಗೆ ಬಂದೇ ಕೆಲಸ ಮಾಡಬೇಕು, ಇಲ್ಲವಾದರೆ ಶಿಸ್ತು ಕ್ರಮ (Disciplinary Action) ಎದುರಿಸಬೇಕಾಗುತ್ತದೆ ಎಂದು ಇನ್ಫೋಸಿಸ್ ಸಂಸ್ಥೆ ತನ್ನ ಆ ದೇಶಗಳಲ್ಲಿನ ಉದ್ಯೋಗಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ವರ್ಕ್ ಫ್ರಂ ಹೋಮ್ ಮಾಡಲೇಬೇಕೆಂದರೆ ಅಂಥ ಉದ್ಯೋಗಿಗಳು ವಿಶೇಷ ಅನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ಫೋಸಿಸ್, ಭಾರತದಲ್ಲಿನ ತನ್ನ ಉದ್ಯೋಗಿಗಳನ್ನು ಕಚೇರಿಗೆ ಬಂದು ಕೆಲಸ ಮಾಡಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಆದರೆ, ಶಿಸ್ತುಕ್ರಮದ ಎಚ್ಚರಿಕೆಯನ್ನು ಭಾರತದಲ್ಲಿರುವ ಉದ್ಯೋಗಿಗಳಿಗೆ ಸದ್ಯಕ್ಕೆ ಅದು ನೀಡಿಲ್ಲ. ಆದರೆ, ಅಮೆರಿಕ ಮತ್ತು ಕೆನಡಾದಲ್ಲಿರುವ ಅದರ 30,000 ಉದ್ಯೋಗಿಗಳಲ್ಲಿ ಬಹಳ ಮಂದಿ ಕಚೇರಿಗೆ ಬಂದು ಕೆಲಸ ಮಾಡಲು ಸಿದ್ಧರಿಲ್ಲ. ಇದು ಅಲ್ಲಿನ ಇನ್ಫೋಸಿಸ್ ಉದ್ಯೋಗಿಗಳ ಕಥೆ ಮಾತ್ರವಲ್ಲ ಬಹುತೇಕ ಎಲ್ಲಾ ಕಂಪನಿಗಳದ್ದೂ ಹೌದು. ಅಮೆರಿಕದಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವವರಲ್ಲಿ ಹೆಚ್ಚಿವನರು ಕಚೇರಿಗೆ ಬರಲು ಒಪ್ಪುತ್ತಿಲ್ಲ. ಕೆಲಸ ಹೋದರೂ ಪರವಾಗಿಲ್ಲ, ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಅವರು ಹೇಳುತ್ತಿದ್ದಾರೆ ಎನ್ನುವಂತಹ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ಇದನ್ನೂ ಓದಿMass Resignation: ಟಿಸಿಎಸ್​ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ; ವರ್ಕ್ ಫ್ರಂ ಹೋಂ ಬೇಡ ಎಂದಿದ್ದಕ್ಕೆ ನಡೆಯಿತಾ ಮಾಸ್ ರೆಸಿಗ್ನೇಶನ್?

ವರ್ಕ್ ಫ್ರಂ ಹೋಮ್ ಮಾಡುವವರ ವಿಶೇಷ ಅನುಮತಿ ಹೇಗೆ?

ಅಮೆರಿಕದ ನಮ್ಮ ಉದ್ಯೋಗಿಗಳು ದೇಶದ ಹೊರಗೆ ಪ್ರವಾಸದಲ್ಲಿದ್ದಾಗ ಕೆಲಸ ಮಾಡಲು ವಿಶೇಷ ಅನುಮತಿ ಪಡೆಯಬೇಕು. ವರ್ಕ್ ಫ್ರಂ ಹೋಂ ಅನುಮತಿಗಾಗಿ ಅರ್ಜಿ ಹಾಕುವಾಗ ಉದ್ಯೋಗಿಗಳು ತಮ್ಮ ಮನೆಯ ವಿಳಾಸ ಕೊಡಬೇಕು. ವರ್ಕ್ ಫ್ರಂ ಹೋಂ ಅನುಮತಿ ಸಿಕ್ಕಾಕ್ಷಣ ಆ ಅವಕಾಶ ಖಾಯಂ ಆಗಿರುವುದಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ಅಮೆರಿಕ ಮತ್ತು ಕೆನಡಾದಲ್ಲಿರುವ ತನ್ನ 30,000ಉದ್ಯೋಗಿಗಳಿಗೆ ತಿಳಿಸಿದೆ.

ಈ ಎಚ್ಚರಿಕೆಯ ಸಂದೇಶವು ಇನ್ಫೋಸಿಸ್​ನ ಭಾರತೀಯ ಉದ್ಯೋಗಿಗಳಿಗೆ ಸದ್ಯಕ್ಕೆ ಅನ್ವಯ ಆಗುವುದಿಲ್ಲ. ದೇಶೀಯ ಉದ್ಯೋಗಿಗಳಿಗೆ ಇನ್ಫೋಸಿಸ್ ಇನ್ನೂ ಸಾಮ, ದಾನದ ಹಂತದಲ್ಲಿದ್ದಂತಿದೆ.

ಇದನ್ನೂ ಓದಿTCS: ಟ್ರಾನ್ಸಮೆರಿಕಾದ 16,000 ಕೋಟಿ ರೂ ಗುತ್ತಿಗೆ ಕಳೆದುಕೊಂಡ ಟಿಸಿಎಸ್; ಅಮೆರಿಕನ್ ಕಂಪನಿಯ ಈ ನಿರ್ಧಾರಕ್ಕೆ ಏನು ಕಾರಣ?

ಟಿಸಿಎಸ್​ನಲ್ಲಿ ಮಾಸ್ ರೆಸಿಗ್ನೇಶನ್

ಇದೇ ವೇಳೆ, ಟಿಸಿಎಸ್ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳ ಸಮೂಹಿಕ ರಾಜೀನಾಮೆ ಕೊಡುತ್ತಿರುವ ಸುದ್ದಿ ಇಲ್ಲಿ ಉಲ್ಲೇಖಿಸಬಹುದು. ವರ್ಕ್ ಫ್ರಂ ಹೋಮ್ ಅನ್ನು ರದ್ದು ಮಾಡಿದ ಕಾರಣಕ್ಕೆ ಟಿಸಿಎಸ್​ನ ಮಹಿಳಾ ಉದ್ಯೋಗಿಗಳು ಕೆಲಸ ಬಿಡುತ್ತಿದ್ದಾರೆನ್ನಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಗಮನಾರ್ಹ ಮಟ್ಟದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?