AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Market Value: 6 ದೊಡ್ಡ ಸಂಸ್ಥೆಗಳಿಗೆ ಒಂದು ವಾರದಲ್ಲಿ ಹೆಚ್ಚಾಯಿತು 1.13 ಲಕ್ಷ ಕೋಟಿ ರೂ ಷೇರುಸಂಪತ್ತು; ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಭರ್ಜರಿ ಲಾಭ

6 Firms Increase Market Valuation By 1.13 Lakh Crore: ಅತಿಹೆಚ್ಚು ಷೇರುಸಂಪತ್ತು ಹೊಂದಿರುವ 10 ಅಗ್ರಮಾನ್ಯ ಸಂಸ್ಥೆಗಳ ಪೈಕಿ 6 ಕಂಪನಿಗಳ ಷೇರುಗಳ ಮೌಲ್ಯ ಗಮನಾರ್ಹವಾಗಿ ಹೆಚ್ಚಿದೆ. ಈ ಆರು ಕಂಪನಿಗಳ ಒಟ್ಟು ಷೇರುಸಂಪತ್ತು 1,13,703.82 ಕೋಟಿ ರೂನಷ್ಟು ಏರಿದೆ.

Market Value: 6 ದೊಡ್ಡ ಸಂಸ್ಥೆಗಳಿಗೆ ಒಂದು ವಾರದಲ್ಲಿ ಹೆಚ್ಚಾಯಿತು 1.13 ಲಕ್ಷ ಕೋಟಿ ರೂ ಷೇರುಸಂಪತ್ತು; ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಭರ್ಜರಿ ಲಾಭ
ಷೇರು ಮಾರ್ಕೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2023 | 4:07 PM

Share

ನವದೆಹಲಿ: ಕಳೆದ ವಾರದ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ವಹಿವಾಟು ನಡೆದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆ ಮಟ್ಟಕ್ಕೆ ಏರಿವೆ. ಇದರ ಪರಿಣಾಮವಾಗಿ ಬಹಳಷ್ಟು ಕಂಪನಿಗಳ ಷೇರುಸಂಪತ್ತು ಅಮೋಘವಾಗಿ ಬೆಳೆದಿದೆ. ಅತಿಹೆಚ್ಚು ಷೇರುಸಂಪತ್ತು (Market Capitalisation) ಹೊಂದಿರುವ 10 ಅಗ್ರಮಾನ್ಯ ಸಂಸ್ಥೆಗಳ ಪೈಕಿ 6 ಕಂಪನಿಗಳ ಷೇರುಗಳ ಮೌಲ್ಯ ಗಮನಾರ್ಹವಾಗಿ ಹೆಚ್ಚಿದೆ. ಈ ಆರು ಕಂಪನಿಗಳ ಒಟ್ಟು ಷೇರುಸಂಪತ್ತು 1,13,703.82 ಕೋಟಿ ರೂನಷ್ಟು ಏರಿದೆ. ಈ ಏರಿಕೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​ನದ್ದು ಸಿಂಹಪಾಲು. ಕಳೆದ ವಾರ (ಜೂನ್ 12-16) ಬಿಎಸ್​ಇ ಬೆಂಚ್​ಮಾರ್ಕ್ 758.95 ಅಂಕಗಳಷ್ಟು ಜಿಗಿತ ಕಂಡಿತ್ತು. ಬಿಎಸ್​ಇ ಸೆನ್ಸೆಕ್ಸ್ ಜೂನ್ 16ಕ್ಕೆ 63,384.58 ಅಂಕಗಳ ಮಟ್ಟ ಮುಟ್ಟಿತ್ತು. ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪ ಇದೆ.

ಟಾಪ್-10 ಕಂಪನಿಗಳ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಟಿಸಿ, ಇನ್ಫೋಸಿಸ್, ಎಚ್​ಡಿಎಫ್​ಸಿ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ಕಳೆದ ವಾರ ಷೇರುಸಂಪತ್ತು ಏರಿಸಿಕೊಂಡಿವೆ. 6 ಕಂಪನಿಗಳ ಒಟ್ಟಾರೆ 1.13 ಲಕ್ಷಕೋಟಿ ಷೇರುಸಂಪತ್ತು ಏರಿಕೆಯಲ್ಲಿ ಆರ್​ಐಎಲ್​ವೊಂದೇ 63,259.05 ಕೋಟಿಯಷ್ಟು ಷೇರುಸಂಪತ್ತು ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ: Rs 500 Notes: ಮುದ್ರಣಗೊಂಡ ಕೋಟ್ಯಂತರ 500 ರೂ ನೋಟುಗಳು ಆರ್​ಬಿಐಗೆ ತಲುಪುವ ಮುನ್ನವೇ ಕಾಣೆಯಾಗಿವೆಯಾ? ಆರ್​ಬಿಐ ಏನು ಹೇಳುತ್ತೆ?

ಇನ್ನುಳಿದ ನಾಲ್ಕು ಅಗ್ರಮಾನ್ಯ ಕಂಪನಿಗಳೆನಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಹೆಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್​ಬಿಐನ ಷೇರುಗಳು ಮೌಲ್ಯಕುಸಿತ ಕಂಡಿವೆ.

ಷೇರುಸಂಪತ್ತು ಏರಿಸಿಕೊಂಡ ಟಾಪ್ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 63,259.05 ಕೋಟಿ ರೂ
  2. ಹಿಂದೂಸ್ತಾನ್ ಯೂನಿಲಿವರ್: 18,737.99 ಕೋಟಿ ರೂ
  3. ಐಟಿಸಿ: 18,331.32 ಕೋಟಿ ರೂ
  4. ಇನ್ಫೋಸಿಸ್: 11,059.41 ಕೋಟಿ ರೂ
  5. ಭಾರ್ತಿ ಏರ್ಟೆಲ್: 2,016.08 ಕೋಟಿ ರೂ
  6. ಎಚ್​ಡಿಎಫ್​ಸಿ: 299.97 ಕೋಟಿ ರೂ

ಇದನ್ನೂ ಓದಿInfosys Warning: ಕಚೇರಿಗೆ ಬಂದು ಕೆಲಸ ಮಾಡಿ, ಇಲ್ಲ ಶಿಸ್ತು ಕ್ರಮ ಎದುರಿಸಿ: ಅಮೆರಿಕ, ಕೆನಡಾ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ

ಷೇರುಸಂಪತ್ತು ಇಳಿಕೆ ಕಂಡ ಕಂಪನಿಗಳು

  • ಟಿಸಿಎಸ್: 12,879.86 ಕೋಟಿ ರೂ
  • ಎಸ್​ಬಿಐ: 6,514.97 ಕೋಟಿ ರೂ
  • ಎಚ್​ಡಿಎಫ್​ಸಿ ಬ್ಯಾಂಕ್: 4,722.95 ಕೋಟಿ ರೂ
  • ಐಸಿಐಸಿಐ ಬ್ಯಾಂಕ್: 1,882.67 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ