ಎಸ್.ಎಂ. ಕೃಷ್ಣ ನಿಧನಕ್ಕೆ ಶೋಕ; ಕರ್ನಾಟಕದ ಬ್ಯಾಂಕುಗಳಿಗೂ ಬುಧವಾರ ರಜೆಯಾ? ಇಲ್ಲಿದೆ ಡೀಟೇಲ್ಸ್

|

Updated on: Dec 10, 2024 | 5:57 PM

Bank holidays in Karnataka: ಇವತ್ತು ಇಹಲೋಕ ತ್ಯಜಿಸಿದ ಮಾಜಿ ಸಿಎಂ ಎಸ್ಸೆಂ ಕೃಷ್ಣ ಅವರಿಗೆ ಗೌರವಾರ್ಥವಾಗಿ ಡಿ. 11ರಂದು ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿರುವ ಬ್ಯಾಂಕುಗಳಿಗೆ ರಜೆ ಇದೆ ಎಂದು ಆರ್​ಬಿಐನಿಂದ ಯಾವುದೇ ಪ್ರಕಟಣೆ ಬಂದಿಲ್ಲ. ಬ್ಯಾಂಕುಗಳು ಯಥಾಪ್ರಕಾರ ಕಾರ್ಯನಿರ್ವಹಿಸುತ್ತವೆ.

ಎಸ್.ಎಂ. ಕೃಷ್ಣ ನಿಧನಕ್ಕೆ ಶೋಕ; ಕರ್ನಾಟಕದ ಬ್ಯಾಂಕುಗಳಿಗೂ ಬುಧವಾರ ರಜೆಯಾ? ಇಲ್ಲಿದೆ ಡೀಟೇಲ್ಸ್
ಬ್ಯಾಂಕ್
Follow us on

ಬೆಂಗಳೂರು, ಡಿಸೆಂಬರ್ 10: ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನ ಶೋಚಾರಣೆ ಘೋಷಿಸಿದೆ. ನಾಳೆ ಬುಧವಾರ ಒಂದು ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ಡಿ. 11ರಂದು ರಜೆ ನೀಡಲಾಗಿದೆ. ಖಾಸಗಿ ಶಾಲೆಗಳೂ ನಾಳೆ ಬಂದ್ ಆಗಿರುತ್ತವೆ. ಇದೇ ವೇಳೆ ಬ್ಯಾಂಕುಗಳಿಗೂ ರಜೆ ಇರುತ್ತದಾ? ಈ ಬಗ್ಗೆ ಅಧಿಕೃತ ಘೋಷಣೆಗಳು ಆಗಿಲ್ಲ.

ಬ್ಯಾಂಕ್​ನ ರಜಾ ದಿನಗಳನ್ನು ಆರ್​ಬಿಐ ನಿಗದಿ ಮಾಡುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಈ ಬಗ್ಗೆ ಯಾವುದೇ ಪ್ರಕಟಣೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರುವ ಸಾಧ್ಯತೆ ಇಲ್ಲ. ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕರ್ನಾಟಕದಲ್ಲೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುತ್ತವೆ.

ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 17 ದಿನ ಬ್ಯಾಂಕ್ ರಜೆ ಇರುತ್ತದೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಸೋಮವಾರದ ರಜೆಗಳು ಸೇರಿವೆ. ಇದು ಬಿಟ್ಟರೆ ಸಾರ್ವತ್ರಿಕ ರಜೆ ಇರುವುದು ಡಿಸೆಂಬರ್ 25ರಂದು, ಕ್ರಿಸ್ಮಸ್ ಹಬ್ಬಕ್ಕೆ. ಇನ್ನುಳಿದವು ಪ್ರಾದೇಶಿಕ ರಜೆಗಳೇ ಆಗಿವೆ.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 17 ದಿನ ರಜೆ; ಕರ್ನಾಟಕದಲ್ಲಿ 8 ದಿನ ಮಾತ್ರ; ಇಲ್ಲಿದೆ ರಜಾದಿನಗಳ ಪಟ್ಟಿ

ಡಿಸೆಂಬರ್ 11ರಿಂದ 31ರವರೆಗೆ ಬ್ಯಾಂಕ್ ರಜಾದಿನಗಳ ಪಟ್ಟಿ

  • ಡಿಸೆಂಬರ್ 12, ಗುರುವಾರ: ಪಾ ತೋಗನ್ ನೆಂಗ್​ಮಿಂಜಾ ಸಾಂಗ್ಮಾ (ಮೇಘಾಲಯದಲ್ಲಿ ರಜೆ)
  • ಡಿಸೆಂಬರ್ 14: ಎರಡನೇ ಶನಿವಾರದ ರಜೆ
  • ಡಿಸೆಂಬರ್ 15: ಭಾನುವಾರದ ರಜೆ
  • ಡಿಸೆಂಬರ್ 18, ಬುಧವಾರ: ಗುರು ಘಾಸಿದಾಸ್ ಜಯಂತಿ, ಉ ಸೋಸೋ ತಾಮ್ ಪುಣ್ಯತಿಥಿ (ಪಂಜಾಬ್, ಹರ್ಯಾಣದಲ್ಲಿ, ಹಾಗು ಮೇಘಾಲಯದಲ್ಲಿ ರಜೆ)
  • ಡಿಸೆಂಬರ್ 19, ಗುರುವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
  • ಡಿಸೆಂಬರ್ 22: ಭಾನುವಾರದ ರಜೆ
  • ಡಿಸೆಂಬರ್ 24, ಮಂಗಳವಾರ: ಕ್ರಿಸ್ಮಸ್, ಗುರು ತೇಗ್ ಬಹದೂರ್ ಬಲಿದಾನ ದಿನ (ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹಾಗೂ ಪಂಜಾಬ್, ಹರ್ಯಾಣದಲ್ಲಿ ರಜೆ)
  • ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬಕ್ಕೆ ದೇಶಾದ್ಯಂತ ಎಲ್ಲೆಡೆ ರಜೆ
  • ಡಿಸೆಂಬರ್ 26, ಗುರುವಾರ: ಮೇಘಾಲಯ, ನಾಗಾಲ್ಯಾಂಡ್ ಮೊದಲಾದ ಕೆಲವೆಡೆ ರಜೆ
  • ಡಿಸೆಂಬರ್ 27, ಶುಕ್ರವಾರ: ನಾಗಾಲ್ಯಾಂಡ್​ನಲ್ಲಿ ರಜೆ
  • ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
  • ಡಿಸೆಂಬರ್ 29: ಭಾನುವಾರದ ರಜೆ
  • ಡಿಸೆಂಬರ್ 30, ಸೋಮವಾರ: ಟಮು ಲೋಸರ್, ಯು ಕಿಯಾಂಗ್ ನಾಂಗ್​ಬಾ (ಸಿಕ್ಕಿಂ, ಮೇಘಾಲಯದಲ್ಲಿ ರಜೆ)
  • ಡಿಸೆಂಬರ್ 31, ಮಂಗಳವಾರ: ಹೊಸ ವರ್ಷಾಚರಣೆ ಪ್ರಯುಕ್ತ ಮಿಜೋರಾಂನಲ್ಲಿ ರಜೆ

ಡಿಸೆಂಬರ್ 11ರಿಂದ 31ರವರೆಗೆ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

  1. ಡಿಸೆಂಬರ್ 14: ಎರಡನೇ ಶನಿವಾರದ ರಜೆ
  2. ಡಿಸೆಂಬರ್ 15: ಭಾನುವಾರದ ರಜೆ
  3. ಡಿಸೆಂಬರ್ 22: ಭಾನುವಾರದ ರಜೆ
  4. ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ
  5. ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
  6. ಡಿಸೆಂಬರ್ 29: ಭಾನುವಾರದ ರಜೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ