ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅಕ್ಟೋಬರ್ 4ನೇ ತಾರೀಕಿನ ಸೋಮವಾರದಂದು SREI ಇನ್ಫ್ರಾ ಮತ್ತು SREI ಎಕ್ವಿಪ್ಮೆಂಟ್ ಫೈನಾನ್ಸ್ ಲಿಮಿಟೆಡ್ ಮಂಡಳಿ ನಿರ್ದೇಶಕರನ್ನು ಸೂಪರ್ಸೀಡ್ ಮಾಡಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ ಹಾಗೂ SREI ಸಮೂಹ ಕಂಪೆನಿಯು ಬಾಕಿ ಉಳಿಸಿಕೊಂಡ ಹಣ ಪಾವತಿ ಮಾಡದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಮಾಜಿ ಚೀಫ್ ಮ್ಯಾನೇಜರ್ ರಜನೀಶ್ ಶರ್ಮಾ ಅವರನ್ನು ಆರ್ಬಿಐನಿಂದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಶೀಘ್ರದಲ್ಲೇ ಆರ್ಬಿಐನಿಂದ ಎನ್ಬಿಎಫ್ಸಿಗಳ ತೀರುವಳಿ ಪ್ರಕ್ರಿಯೆಯನ್ನು ಈಬಿಸಿ ನಿಯಮಾವಳಿ 2019ರ ಅಡಿಯಲ್ಲಿ ಇತ್ಯರ್ಥಗೊಳಿಸಲು ಪ್ರಕ್ರಿಯೆ ಆರಂಭಿಸಲಾಗುವುದು ಮತ್ತು ಆಡಳಿತಾಧಿಕಾರಿಯನ್ನು ಸಾಲ ತೀರುವಳಿ ವೃತ್ತಿಪರರನ್ನಾಗಿ ನೇಮಕ ಮಾಡುವಂತೆ ಎನ್ಸಿಎಲ್ಟಿಗೆ (ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ) ಅರ್ಜಿ ಹಾಕಲಾಗುವುದು.
ಆರ್ಬಿಐನಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934ರ ಸೆಕ್ಷನ್ 45-IE(1)ರ ಅಡಿಯಲ್ಲಿ ನೀಡಿರುವ ಆಧಿಕಾರವನ್ನು ಬಳಸಿಕೊಂಡು, ಆರ್ಬಿಐನಿಂದ SREI iನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ (SIFL) ಮತ್ತು SREI ಎಕ್ವಿಪ್ಮೆಂಟ್ ಫೈನಾನ್ಸ್ ಲಿಮಿಟೆಡ್ (SEFL) ಮಂಡಳಿ ನಿರ್ದೇಶಕರನ್ನು ಸೂಪರ್ಸೀಡ್ ಮಾಡಲಾಗಿದೆ. ಈ ಕಂಪೆನಿಗಳಿಂದ ವಿವಿಧ ಪಾವತಿಗಳನ್ನು ನೀಡದೆ ಇರುವ ಕಾರಣಕ್ಕೆ ಮತ್ತು ಆಡಳಿತಾತ್ಮಕ ಸಮಸ್ಯೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.
SREI ಸಮೂಹದ ಸಾಲಗಾರರು ಕಂಪೆನಿಯ ಟಾಪ್ ಮ್ಯಾನೇಜ್ಮೆಂಟ್ ಇಟ್ಟಿದ್ದ ಪ್ರಸ್ತಾವವನ್ನು ತಿರಸ್ಕರಿಸಿದ ಮೇಲೆ ಈ ಬೆಳವಣಿಗೆ ಆಗಿದೆ. ಅಂದಹಾಗೆ ಅಂದಾಜು 35,000 ಕೋಟಿ ರೂಪಾಯಿಗಳ ಬಾಕಿ ಮೊತ್ತದ ವಸೂಲಿಗಾಗಿ ಯಾವುದೇ ಕ್ರಮ, ಕಾನೂನು ಅಥವಾ ಮತ್ತ್ಯಾವುದಾರೂ ಸರಿ, ತೆಗೆದುಕೊಳ್ಳದಂತೆ ಒಂದು ವರ್ಷಗಳ ಸಮಯ ನೀಡಬೇಕಾಗಿ ವಾರದ ಹಿಂದಷ್ಟೇ ಕೇಳಿಕೊಳ್ಳಲಾಗಿತ್ತು. SREI ಸಮೂಹವು ಕ್ಯುಮ್ಯುಲೇಟಿವ್ ಆಗಿ ಬ್ಯಾಂಕ್ಗಳಿಗೆ 30,000 ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿದೆ. ಡಿಎಚ್ಎಫ್ಎಲ್ ಅನ್ನು ಹೇಗೆ ಪಿರಾಮಲ್ ಸಮೂಹದಿಂದ 38,000 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಂಡು ಹೇಗೆ ತೀರುವಳಿ ಪರಿಹಾರ ನೀಡಲಾಯಿತೋ ಅಂಥದ್ದೇ ಪರಿಹಾರಕ್ಕೆ ಆರ್ಬಿಐ ಅನ್ನು SREI ಸಂಪರ್ಕಿಸಿತ್ತು.
ಇದನ್ನೂ ಓದಿ: Bank Holidays in October 2021: ಅಕ್ಟೋಬರ್ನಲ್ಲಿ ವಿವಿಧ ರಾಜ್ಯಗಳೆಲ್ಲ ಸೇರಿ 21 ಬ್ಯಾಂಕ್ ರಜಾ ದಿನಗಳು
Published On - 5:26 pm, Mon, 4 October 21