ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಖರೀದಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಶ್ರೀಲಂಕಾಗೆ ಯುಎಸ್ಡಿ 1 ಶತಕೋಟಿ ಅಥವಾ ಭಾರತದ ರೂಪಾಯಿ ಲೆಕ್ಕದಲ್ಲಿ ಇವತ್ತಿಗೆ 7613 ಕೋಟಿ ಮೊತ್ತದ ಸಾಲ ಸೌಲಭ್ಯವನ್ನು ಒದಗಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 17ನೇ ತಾರೀಕಿನ ಗುರುವಾರ ಹೇಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
ಸಚಿವರು ಈ ವಿಷಯಗಳ ಕುರಿತು ವ್ಯಾಪಕವಾಗಿ ಚರ್ಚಿಸಿದರು ಎಂದು ಅದು ಸೇರಿಸಿದೆ. “ಶ್ರೀಲಂಕಾಕ್ಕೆ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಯುಎಸ್ಡಿ 1 ಶತಕೋಟಿ ಸಾಲ ಸೌಲಭ್ಯಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಶ್ರೀಲಂಕಾ ಸರ್ಕಾರದ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ,” ಎಂದು ಸಚಿವಾಲಯ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.
Union Finance Minister Smt. @nsitharaman and Union External Affairs Minister Shri @DrSJaishankar met Sri Lanka Finance Minister Mr. Basil Rajapaksa in New Delhi today. The Ministers discussed wide ranging issues of #MutualInterest and #EconomicCooperation. (1/2) pic.twitter.com/Mcy2ppmdxz
— Ministry of Finance (@FinMinIndia) March 17, 2022
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರವಾದ ಶ್ರೀಲಂಕಾಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿ ಮಾಡುವುಕ್ಕೆ ಹಣಕಾಸು ಒದಗಿಸಲು ಎಕ್ಸ್ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (ಎಕ್ಸಿಮ್ ಬ್ಯಾಂಕ್) ಯುಎಸ್ಡಿ 500 ಮಿಲಿಯನ್ ಸಾಲವನ್ನು ಈ ಹಿಂದೆ ವಿಸ್ತರಿಸಿತ್ತು.
ಇದನ್ನೂ ಓದಿ: State Bank Of India: ಎಸ್ಬಿಐ ಯೋನೋ ಆ್ಯಪ್ ಮೂಲಕ ಚೆಕ್ ಪಾವತಿ ನಿಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
Published On - 1:59 pm, Fri, 18 March 22