ಕ್ಯಾಷ್ ಇಲ್ಲ, ಇಂಟರ್ನೆಟ್ ಇಲ್ಲ, ಹಣ ಪಾವತಿಸುವುದು ಹೇಗೆ? ಯುಎಸ್​ಎಸ್​ಡಿ ಮೂಲಕ ಯುಪಿಐ ಪೇಮೆಂಟ್ ವಿಧಾನ

|

Updated on: Jan 11, 2025 | 12:47 PM

UPI payment without internet: ಯುಪಿಐ ಮೂಲಕ ಹಣ ಪಾವತಿಸಲು ಮೊಬೈಲ್​ನಲ್ಲಿ ಇಂಟರ್ನೆಟ್ ಅಗತ್ಯ. ಆದರೆ, ಯುಎಸ್​ಎಸ್​​ಡಿ ಕೋಡ್ ಮುಖಾಂತರ ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸಾಧ್ಯ. ನೊಂದಾಯಿತ ನಂಬರ್​ನಿಂದ ಯುಎಸ್​ಎಸ್​ಡಿ ಕೋಡ್ ಅನ್ನು ಡಯಲ್ ಮಾಡಿ ಈ ಸೌಲಭ್ಯ ಬಳಸಬಹುದು. ಇದನ್ನು ಹೇಗೆ ಮಾಡುವುದು ಎನ್ನುವ ಕ್ರಮದ ವಿವರ ಇಲ್ಲಿದೆ...

ಕ್ಯಾಷ್ ಇಲ್ಲ, ಇಂಟರ್ನೆಟ್ ಇಲ್ಲ, ಹಣ ಪಾವತಿಸುವುದು ಹೇಗೆ? ಯುಎಸ್​ಎಸ್​ಡಿ ಮೂಲಕ ಯುಪಿಐ ಪೇಮೆಂಟ್ ವಿಧಾನ
ಯುಪಿಐ
Follow us on

ಇವತ್ತು ಪೇಟಿಎಂ, ಫೋನ್​ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್​ಗಳು ಜನರ ದೈನಂದಿನ ಹಣಕಾಸು ವಹಿವಾಟುಗಳಿಗೆ ಅತ್ಯಗತ್ಯ ಸಾಧನಗಳಾಗಿವೆ. ಅಂಗಡಿ ಮುಂಗಟ್ಟುಗಳಲ್ಲಿ ದಿನಸಿ ವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಪೇಮೆಂಟ್​ವರೆಗೆ ಪ್ರತಿಯೊಂದಕ್ಕೂ ಯುಪಿಐ ಬಳಕೆ ಹೆಚ್ಚಾಗಿದೆ. ಈ ಯುಪಿಐ ಬಳಸಬೇಕೆಂದರೆ ಮೊಬೈಲ್​ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇರಬೇಕು. ಬೇರೆ ಬೇರೆ ಕಾರಣಗಳಿಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಾಗದೇ ಹೋಗಬಹುದು ಅಥವಾ ಕೈಕೊಡಬಹುದು. ಅಂತಹ ಸಂದರ್ಭದಲ್ಲಿ ಆನ್ಲೈನ್​ನಲ್ಲಿ ಹಣ ಪಾವತಿ ಹೇಗೆ?

ಎನ್​ಪಿಸಿಐ ಈ ಸಮಸ್ಯೆಗೆ ಪರಿಹಾರ ಹುಡುಕಿದೆ. ಇಂಟರ್ನೆಟ್ ಅಗತ್ಯ ಇಲ್ಲದೇ ಯುಪಿಐ ಪಾವತಿ ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ರೂಪಿಸಿದೆ. ಅದು ಯುಎಸ್​ಎಸ್​ಡಿ ಮುಖಾಂತರ ಹಣ ಪಾವತಿಸುವ ಹೊಸ ಕ್ರಮ.

ಯುಪಿಐ ಬಳಕೆದಾರರು ತಮ್ಮ ನೊಂದಾಯಿತ ಮೊಬೈಲ್ ನಂಬರ್​ನಿಂದ ಅಧಿಕೃತ ಯುಎಸ್​ಎಸ್​ಡಿ ಕೋಡ್ ಆದ *99# ಅನ್ನು ಡಯಲ್ ಮಾಡಿದಾಗ ವಿವಿಧ ಬ್ಯಾಂಕಿಂಗ್ ಸೇವೆಗಳಿಗೆ ಅವಕಾಶ ಸಿಗುತ್ತದೆ. ಹಣ ರವಾನಿಸುವುದು, ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಯುಪಿಐ ಪಿನ್ ಬದಲಿಸುವುದು ಇತ್ಯಾದಿ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಪಡೆಯಬಹುದು.

ಇದನ್ನೂ ಓದಿ: ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ

ಯುಎಸ್​ಎಸ್​ಡಿ ಕೋಡ್ ಮೂಲಕ ಹಣ ಪಾವತಿಸುವ ಕ್ರಮ

  • ಬ್ಯಾಂಕ್​ನೊಂದಿಗೆ ನೊಂದಾಯಿತವಾಗಿರುವ ಮೊಬೈಲ್ ನಂಬರ್​ನಿಂದ *99# ಅನ್ನು ಡಯಲ್ ಮಾಡಿ.
  • ಇದು ಐವಿ ಕಾಲ್ ಆಗಿದ್ದು, ನಿಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಳ್ಳಿ.
  • ಹಣ ರವಾನೆ, ಬಾಕಿ ಹಣ ಪರಿಶೀಲನೆ, ವಹಿವಾಟು ವಿವರ ವೀಕ್ಷಣೆ ಇತ್ಯಾದಿ ಸೌಲಭ್ಯಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳಬಹುದು.
  • ಹಣ ಕಳುಹಿಸಬೇಕೆಂದಿದ್ದರೆ ‘1’ ಅನ್ನು ಟೈಪ್ ಮಾಡಬಹುದು. ಬಳಿಕ ಸೆಂಡ್ ಅನ್ನು ಒತ್ತಿರಿ.
  • ಆಗ ಮೊಬೈಲ್ ನಂಬರ್, ಯುಪಿಐ ಐಡಿ, ಮೊಬೈಲ್​ನಲ್ಲಿ ಸೇವ್ ಆಗಿರುವ ಕಾಂಟ್ಯಾಕ್ಟ್ ಇತ್ಯಾದಿ ಹಣ ಕಳುಹಿಸುವ ವಿಧಾನಗಳ ಆಯ್ಕೆ ಇರುತ್ತದೆ. ಯಾವುದಾದರೊಂದನ್ನು ಆಯ್ದುಕೊಂಡು, ಸೆಂಡ್ ಒತ್ತಿರಿ.
  • ಮೊಬೈಲ್ ನಂಬರ್ ಅನ್ನು ನೀವು ಆಯ್ದುಕೊಂಡರೆ ಆಗ ನೀವು ಹಣ ಕಳುಹಿಸಬೇಕಾದ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ, ಸೆಂಡ್ ಒತ್ತಿರಿ.
  • ಯುಪಿಐ ಐಡಿ ಆಯ್ಕೆ ಮಾಡಿಕೊಂಡಿದ್ದರೆ ಆಗ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಬೇಕಾಗುತ್ತದೆ.
  • ಈಗ ಎಷ್ಟು ಹಣ ಪಾವತಿಸಬೇಕು, ಆ ಮೊತ್ತವನ್ನು ನಮೂದಿಸಿ, ಸೆಂಡ್ ಒತ್ತಿರಿ.
  • ಆ ಹಣ ಪಾವತಿ ಯಾಕೆಂದು ನೀವು ವಿವರ ಬರೆಯುವ ಅವಕಾಶ ಇರುತ್ತದೆ. ಇದು ಅನಗತ್ಯ ಎನಿಸಿದರೆ ನಿರ್ಲಕ್ಷಿಸಬಹುದು.
  • ಈಗ ಕೊನೆಯ ಕ್ರಮವಾಗಿ ನೀವು ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಎಂಟ್ರ ಮಾಡಬೇಕು. ಆಗ ಹಣ ರವಾನೆ ಕಾರ್ಯ ಪೂರ್ಣಗೊಳ್ಳುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ