ದಾಖಲೆಯ ಸೌರವಿದ್ಯುತ್ ಮತ್ತು ವಾಯುವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತ

India's renewable energy capacity increased: 2024ರಲ್ಲಿ ಭಾರತದಲ್ಲಿ ಸೌರವಿದ್ಯುತ್ ಉತ್ಪಾದನಾ ಸಾಮರ್ಥ್ಯ 24.5 ಗಿಗಾವ್ಯಾಟ್​ನಷ್ಟು ಹೆಚ್ಚಳ ಆಗಿದೆ. ವಾಯುವಿದ್ಯುತ್ ಉತ್ಪಾದನಾ ಸಾಮರ್ಥ್ಯ 3.4 ಗಿಗಾವ್ಯಾಟ್​ನಷ್ಟು ಹೆಚ್ಚಾಗಿದೆ. ವಾಯುವಿದ್ಯುತ್ ಘಟಕಗಳ ಸ್ಥಾಪನೆಯಲ್ಲಿ ಗುಜರಾತ್ ಮತ್ತು ಕರ್ನಾಟಕ ಮುಂಚೂಣಿಯಲ್ಲಿವೆ. ಭಾರತದಲ್ಲಿ ಒಟ್ಟಾರೆ ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯ 209 ಗಿಗಾವ್ಯಾಟ್​ನಷ್ಟಿದೆ.

ದಾಖಲೆಯ ಸೌರವಿದ್ಯುತ್ ಮತ್ತು ವಾಯುವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತ
ಸೌರವಿದ್ಯುತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2025 | 7:08 PM

ನವದೆಹಲಿ, ಜನವರಿ 11: ಪೆಟ್ರೋಲಿಯಂನಂತಹ ಪಳೆಯುಳಿಕೆ ಇಂಧನಗಳ ಬಳಕೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಭಾರತ ಈ ನಿಟ್ಟಿನಲ್ಲಿ ಸಾಕಷ್ಟು ಪರ್ಯಾಯ ಇಂಧನಗಳ ಉತ್ಪಾದನೆಯತ್ತ ಗಮನ ಹರಿಸುತ್ತಿದೆ. ಸೌರಶಕ್ತಿ ಮತ್ತು ವಾಯುಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯವನ್ನು ಹೆಚ್ಚಿಸಿದೆ. ಜೆಎಂಕೆ ರಿಸರ್ಚ್​ನ ವರದಿ ಪ್ರಕಾರ 2024ರಲ್ಲಿ 24.5 ಗೀಗಾವ್ಯಾಟ್​ನಷ್ಟು ಸೌರವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಹಾಗೆಯೇ, ವಾಯುಶಕ್ತಿ ಮೂಲಕ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕಳೆದ ವರ್ಷ 3.4 ಗೀಗಾವ್ಯಾಟ್​ನಷ್ಟು ಹೆಚ್ಚಿಸಿಕೊಂಡಿದೆ. ಇವು ಹೊಸ ದಾಖಲೆಗಳೇ ಆಗಿವೆ.

ಈ ಹೊಸ ಸೇರ್ಪಡೆಗಳೊಂದಿಗೆ ಭಾರತದಲ್ಲಿ ಒಟ್ಟಾರೆ ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯ ಬರೋಬ್ಬರಿ 209.44 ಗಿಗಾವ್ಯಾಟ್​ಗೆ ಏರಿದೆ. ಇದರಲ್ಲಿ ಸೌರಶಕ್ತಿಯ ಪಾಲೇ ಶೇ. 47ರಷ್ಟಿದೆ. ನವೀಕರಣ ಇಂಧನ ಅಥವಾ ಮರುಬಳಕೆ ಇಂಧನ ಮೂಲಗಳಲ್ಲಿ ಸೌರಶಕ್ತಿಯೇ ಅಗ್ರಜ ಆಗಿದೆ.

ದೊಡ್ಡ ಮಟ್ಟದ ಸೌರಶಕ್ತಿ ಉತ್ಪಾದನಾ (Utility Scale Solar) ಸಾಮರ್ಥ್ಯ 2024ರಲ್ಲಿ 18.5 ಗಿಗಾವ್ಯಾಟ್​ನಷ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಈ ರೀತಿಯ ಸೌರಘಟಕಗಳು ಅತಿಹೆಚ್ಚು ಸ್ಥಾಪಿತವಾಗಿವೆ. 2024ರಲ್ಲಿ ಹೊಸದಾಗಿ ಸೇರ್ಪಡೆಯಾದ ಸೌರ ಘಟಕಗಳಲ್ಲಿ ಈ ಮೂರು ರಾಜ್ಯಗಳ ಪಾಲು ಶೇ. 71ರಷ್ಟಿದೆ.

ಇದನ್ನೂ ಓದಿ: ಕಾಶ್ಮೀರ ಕಣಿವೆಯ ದುರ್ಗಮ ಹಾದಿಯಲ್ಲಿ ರೈಲು ಪ್ರಯೋಗ ಯಶಸ್ವಿ; ಶೀಘ್ರದಲ್ಲೇ ಜಮ್ಮು-ಕಾಶ್ಮೀರಕ್ಕೆ ನೇರ ರೈಲು ಸಂಪರ್ಕ

ಮನೆ ಮೇಲ್ಛಾವಣಿ ಸೌರಘಟಕ

ಭಾರತದಲ್ಲಿ ಮೇಲ್ಛಾವಣಿ ಸೌರವಿದ್ಯುತ್ ಘಟಕಗಳ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. 2024ರಲ್ಲಿ 4.59 ಗಿಗಾವ್ಯಾಟ್​ನಷ್ಟು ಹೊಸ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಯಾಗಿದೆ. ಹಿಂದಿನ ವರ್ಷದಕ್ಕಿಂತ ಇದು ಶೇ. 53ರಷ್ಟು ಹೆಚ್ಚಳವಾಗಿದೆ.

ಪಿಎಂ ಸೂರ್ಯಘರ್ ಯೋಜನೆಯು ಈ ಮನೆ ಮೇಲಿನ ಸೌರವಿದ್ಯುತ್ ಸಾಮರ್ಥ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಕೇವಲ 10 ತಿಂಗಳ ಅವಧಿಯಲ್ಲಿ ದೇಶಾದ್ಯಂತ 7 ಲಕ್ಷ ಸೌರಘಟಕಗಳನ್ನು ಮೇಲ್ಛಾವಣಿಗಳ ಮೇಲೆ ಸ್ಥಾಪಿಸಲಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಶ್ವದರ್ಜೆ ಲ್ಯಾಪ್​ಟಾಪ್ ನಿರ್ಮಾಣಕ್ಕೆ ಹೊಸ ಘಟಕ; ಕೇಂದ್ರ ಸಚಿವ ಎ ವೈಷ್ಣವ್​ರಿಂದ ಅಡಿಗಲ್ಲು

ವಾಯುಶಕ್ತಿ ಮೂಲದ ವಿದ್ಯುತ್ ಉತ್ಪಾದನೆ ಶೇ. 21ರಷ್ಟು ಹೆಚ್ಚಳ

2024ರಲ್ಲಿ 3.4 ಗಿಗಾವ್ಯಾಟ್​ನಷ್ಟು ವಾಯು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2024ರಲ್ಲಿ ಸೇರ್ಪಡೆಯಾಗಿದೆ. ಇದರಲ್ಲಿ ಗುಜರಾತ್ ಮತ್ತು ಕರ್ನಾಟಕ ಮುಂಚೂಣಿಯಲ್ಲಿವೆ. 2024ರಲ್ಲಿ ಗುಜರಾತ್​ನಲ್ಲಿ 1,250 ಮೆಗಾವ್ಯಾಟ್, ಕರ್ನಾಟಕದಲ್ಲಿ 1,135 ಮೆಗಾವ್ಯಾಟ್ ಮತ್ತು ತಮಿಳುನಾಡಿನಲ್ಲಿ 980 ಮೆಗಾವ್ಯಾಟ್ ವಿಂಡ್ ಎನರ್ಜಿ ಸಾಮರ್ಥ್ಯ ಸೇರ್ಪಡೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್