AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನಲ್ಲಿ ವಿಶ್ವದರ್ಜೆ ಲ್ಯಾಪ್​ಟಾಪ್ ನಿರ್ಮಾಣಕ್ಕೆ ಹೊಸ ಘಟಕ; ಕೇಂದ್ರ ಸಚಿವ ಎ ವೈಷ್ಣವ್​ರಿಂದ ಅಡಿಗಲ್ಲು

Union minister Ashwini Vaishnaw lays foundation stone for laptop assembly line: ತೈವಾನ್ ಮೂಲದ ಎಂಎಸ್​ಐ ಸಂಸ್ಥೆಯ ಸಹಯೋಗದಲ್ಲಿ ಭಾರತದ ಸಿರ್ಮಾ ಎಸ್​ಜಿಎಸ್ ಟೆಕ್ನಾಲಜಿ ಸಂಸ್ಥೆಯು ಚೆನ್ನೈನಲ್ಲಿ ಲ್ಯಾಪ್​ಟಾಪ್ ಅಸೆಂಬ್ಲಿಂಗ್ ಘಟಕ ಆರಂಭಿಸುತ್ತಿದೆ. ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಎ ವೈಷ್ಣವ್ ಜನವರಿ 10ರಂದು ಹೊಸ ಅಸೆಂಬ್ಲಿಂಗ್ ಲೈನ್​ನ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಿರ್ಮಾ ಎಸ್​ಜಿಎಸ್ ಸಂಸ್ಥೆ ಚೆನ್ನೈನಲ್ಲಿ ಬೃಹತ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿದೆ.

ತಮಿಳುನಾಡಿನಲ್ಲಿ ವಿಶ್ವದರ್ಜೆ ಲ್ಯಾಪ್​ಟಾಪ್ ನಿರ್ಮಾಣಕ್ಕೆ ಹೊಸ ಘಟಕ; ಕೇಂದ್ರ ಸಚಿವ ಎ ವೈಷ್ಣವ್​ರಿಂದ ಅಡಿಗಲ್ಲು
ಸಿರ್ಮಾ ಎಸ್​ಜಿಎಸ್ ಟೆಕ್ನಾಲಜಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2025 | 11:06 AM

Share

ಚೆನ್ನೈ, ಜನವರಿ 11: ಎಲೆಕ್ಟ್ರಾನಿಕ್ಸ್ ಸಿಸ್ಟಮ್​ಗಳ ಡಿಸೈನಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಮಾಡುವ ಭಾರತದ ಸಿರ್ಮಾ ಎಸ್​ಜಿಎಸ್ ಟೆಕ್ನಾಲಜಿ ಸಂಸ್ಥೆ ತನ್ನ ತಮಿಳುನಾಡು ಘಟಕದಲ್ಲಿ ಲ್ಯಾಪ್​ಟಾಪ್​ಗಳ ತಯಾರಿಕೆಗೆ ಹೊಸ ಅಸೆಂಬ್ಲಿ ಲೈನ್ ಸಿದ್ಧಪಡಿಸುತ್ತಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವನಿ ವೈಷ್ಣವ್ ಈ ಅಸೆಂಬ್ಲಿ ಲೈನ್​ನ ಶಂಕುಸ್ಥಾಪನೆ ಮಾಡಿದ್ದಾರೆ. ಲ್ಯಾಪ್​ಟಾಪ್ ಅಸೆಂಬ್ಲಿ ಘಟಕ ಚೆನ್ನೈನಲ್ಲಿದೆ. ಎಐ ಶಕ್ತ ಪರ್ಸನಲ್ ಕಂಪ್ಯೂಟರ್​ಗಳು ಮತ್ತು ವಿಶ್ವದರ್ಜೆ ಗೇಮಿಂಗ್ ಲ್ಯಾಪ್​ಟಾಪ್​ಗಳ ತಯಾರಿಕೆಗೆ ಹೆಸರುವಾಸಿಯಾದ ತೈವಾನ್ ಮೂಲದ ಎಂಎಸ್​ಐ ಸಂಸ್ಥೆಯು ಭಾರತದ ಸಿರ್ಮಾ ಎಸ್​ಜಿಎಸ್ ಟೆಕ್ನಾಲಜಿ ಜೊತೆ ಸೇರಿ ಈ ಲ್ಯಾಪ್​ಟಾಪ್ ಅಸೆಂಬ್ಲಿಂಗ್ ನಡೆಸುತ್ತಿದೆ.

ಚೆನ್ನೈನ ಈ ಘಟಕದಲ್ಲಿ ತಯಾರಾಗುವ ಲ್ಯಾಪ್​ಟಾಪ್​ಗಳನ್ನು ಭಾರತದ ಮಾರುಕಟ್ಟೆಗಳಿಗೆ ವಿನಿಯೋಗಿಸುವ ನಿರೀಕ್ಷೆ ಇದೆ. ಸಿರ್ಮಾ ಮತ್ತು ಎಂಎಸ್​ಐ ಸಂಸ್ಥೆಗಳು ದೀರ್ಘಾವಧಿಗೆ ಸಹಯೋಗ ಹೊಂದಲು ನಿರ್ಧರಿಸಿದ್ದು, ಉನ್ನತ ಗುಣಮಟ್ಟದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಮಾಡುವತ್ತ ಗಮನ ಕೊಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ

ಶುಕ್ರವಾರ ಹೊಸ ಲ್ಯಾಪ್​ಟಾಪ್ ಅಸೆಂಬ್ಲಿಂಗ್ ಲೈನ್​ನ ಶಂಕುಸ್ಥಾಪನೆ ಮಾಡಿದ ಸಚಿವ ಎ ವೈಷ್ಣವ್ ಅವರು ಸಿರ್ಮಾ ಎಸ್​ಜಿಎಸ್ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು. ಸ್ವಾವಲಂಬಿ ಭಾರತದ ನಿರ್ಮಾಣ ಮಾಡುವ ಗುರಿಗೆ ಇಂತಹ ಉಪಕ್ರಮಗಳು ಬಹಳ ಮುಖ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಲ್ಯಾಪ್​ಟಾಪ್​ಗಳ ಅಸೆಂಬ್ಲಿಂಗ್ ಕಾರ್ಯ ಮಾತ್ರವಲ್ಲ, ಅದರ ಬಿಡಿಭಾಗಗಳು ಸೇರಿದಂತೆ ಇಡೀ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಭಾರತದಲ್ಲಿ ನಿರ್ಮಾಣವಾಗಲಿ ಎಂದು ಸಚಿವರು ಕರೆ ನೀಡಿದರು. ಇದೇ ವೇಳೆ, ಸಿರ್ಮಾ ಘಟಕದಲ್ಲಿ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಬಂದ ವ್ಯಕ್ತಿಗಳು ಕೆಲಸ ಮಾಡುತ್ತಿದ್ದು ಅವರ ಮೊಗದಲ್ಲಿರುವ ಖುಷಿ ಕಂಡು ತನಗೆ ಖುಷಿಯಾಯಿತು ಎಂದು ವೈಷ್ಣವ್ ಅವರು ಪತ್ರಿಕಾಗೋಷ್ಠಿ ವೇಳೆ ಹೇಳಿದರು.

ಇದನ್ನೂ ಓದಿ: ಉದ್ಯೋಗಿ ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು ಹೇಳುತ್ತೆ? ಇಲ್ಲಿದೆ ವಿವರ

ಸಿರ್ಮಾ ಎಸ್​ಜಿಎಸ್ ಟೆಕ್ನಾಲಜಿ ಸಂಸ್ಥೆ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದೆ. ವಿಶ್ವಾದ್ಯಂತ 20 ದೇಶಗಳಲ್ಲಿ 270 ಗ್ರಾಹಕರಿಗೆ ಅದು ಸೇವೆ ನೀಡುತ್ತಿದೆ. ದೊಡ್ಡ ಮಟ್ಟದಲ್ಲಿ ಮ್ಯಾನುಫ್ಯಾಕ್ಚರಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣಕ್ಕೆ ಆ ಸಂಸ್ಥೆ ಜೊತೆ ಎಂಎಸ್​ಐ ಒಪ್ಪಂದ ಮಾಡಿಕೊಂಡಿದೆ. 2023-24ರ ಹಣಕಾಸು ವರ್ಷದಲ್ಲಿ ಎಸ್​ಜಿಎಸ್ ಸಂಸ್ಥೆಯ ಒಟ್ಟಾರೆ ಆದಾಯ 3,212 ಕೋಟಿ ರೂ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ