ಕ್ಯಾಷ್ ಇಲ್ಲ, ಇಂಟರ್ನೆಟ್ ಇಲ್ಲ, ಹಣ ಪಾವತಿಸುವುದು ಹೇಗೆ? ಯುಎಸ್ಎಸ್ಡಿ ಮೂಲಕ ಯುಪಿಐ ಪೇಮೆಂಟ್ ವಿಧಾನ
UPI payment without internet: ಯುಪಿಐ ಮೂಲಕ ಹಣ ಪಾವತಿಸಲು ಮೊಬೈಲ್ನಲ್ಲಿ ಇಂಟರ್ನೆಟ್ ಅಗತ್ಯ. ಆದರೆ, ಯುಎಸ್ಎಸ್ಡಿ ಕೋಡ್ ಮುಖಾಂತರ ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸಾಧ್ಯ. ನೊಂದಾಯಿತ ನಂಬರ್ನಿಂದ ಯುಎಸ್ಎಸ್ಡಿ ಕೋಡ್ ಅನ್ನು ಡಯಲ್ ಮಾಡಿ ಈ ಸೌಲಭ್ಯ ಬಳಸಬಹುದು. ಇದನ್ನು ಹೇಗೆ ಮಾಡುವುದು ಎನ್ನುವ ಕ್ರಮದ ವಿವರ ಇಲ್ಲಿದೆ...
ಇವತ್ತು ಪೇಟಿಎಂ, ಫೋನ್ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್ಫಾರ್ಮ್ಗಳು ಜನರ ದೈನಂದಿನ ಹಣಕಾಸು ವಹಿವಾಟುಗಳಿಗೆ ಅತ್ಯಗತ್ಯ ಸಾಧನಗಳಾಗಿವೆ. ಅಂಗಡಿ ಮುಂಗಟ್ಟುಗಳಲ್ಲಿ ದಿನಸಿ ವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಪೇಮೆಂಟ್ವರೆಗೆ ಪ್ರತಿಯೊಂದಕ್ಕೂ ಯುಪಿಐ ಬಳಕೆ ಹೆಚ್ಚಾಗಿದೆ. ಈ ಯುಪಿಐ ಬಳಸಬೇಕೆಂದರೆ ಮೊಬೈಲ್ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇರಬೇಕು. ಬೇರೆ ಬೇರೆ ಕಾರಣಗಳಿಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಾಗದೇ ಹೋಗಬಹುದು ಅಥವಾ ಕೈಕೊಡಬಹುದು. ಅಂತಹ ಸಂದರ್ಭದಲ್ಲಿ ಆನ್ಲೈನ್ನಲ್ಲಿ ಹಣ ಪಾವತಿ ಹೇಗೆ?
ಎನ್ಪಿಸಿಐ ಈ ಸಮಸ್ಯೆಗೆ ಪರಿಹಾರ ಹುಡುಕಿದೆ. ಇಂಟರ್ನೆಟ್ ಅಗತ್ಯ ಇಲ್ಲದೇ ಯುಪಿಐ ಪಾವತಿ ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ರೂಪಿಸಿದೆ. ಅದು ಯುಎಸ್ಎಸ್ಡಿ ಮುಖಾಂತರ ಹಣ ಪಾವತಿಸುವ ಹೊಸ ಕ್ರಮ.
ಯುಪಿಐ ಬಳಕೆದಾರರು ತಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ ಅಧಿಕೃತ ಯುಎಸ್ಎಸ್ಡಿ ಕೋಡ್ ಆದ *99# ಅನ್ನು ಡಯಲ್ ಮಾಡಿದಾಗ ವಿವಿಧ ಬ್ಯಾಂಕಿಂಗ್ ಸೇವೆಗಳಿಗೆ ಅವಕಾಶ ಸಿಗುತ್ತದೆ. ಹಣ ರವಾನಿಸುವುದು, ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಯುಪಿಐ ಪಿನ್ ಬದಲಿಸುವುದು ಇತ್ಯಾದಿ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಪಡೆಯಬಹುದು.
ಇದನ್ನೂ ಓದಿ: ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ
ಯುಎಸ್ಎಸ್ಡಿ ಕೋಡ್ ಮೂಲಕ ಹಣ ಪಾವತಿಸುವ ಕ್ರಮ
- ಬ್ಯಾಂಕ್ನೊಂದಿಗೆ ನೊಂದಾಯಿತವಾಗಿರುವ ಮೊಬೈಲ್ ನಂಬರ್ನಿಂದ *99# ಅನ್ನು ಡಯಲ್ ಮಾಡಿ.
- ಇದು ಐವಿ ಕಾಲ್ ಆಗಿದ್ದು, ನಿಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಳ್ಳಿ.
- ಹಣ ರವಾನೆ, ಬಾಕಿ ಹಣ ಪರಿಶೀಲನೆ, ವಹಿವಾಟು ವಿವರ ವೀಕ್ಷಣೆ ಇತ್ಯಾದಿ ಸೌಲಭ್ಯಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳಬಹುದು.
- ಹಣ ಕಳುಹಿಸಬೇಕೆಂದಿದ್ದರೆ ‘1’ ಅನ್ನು ಟೈಪ್ ಮಾಡಬಹುದು. ಬಳಿಕ ಸೆಂಡ್ ಅನ್ನು ಒತ್ತಿರಿ.
- ಆಗ ಮೊಬೈಲ್ ನಂಬರ್, ಯುಪಿಐ ಐಡಿ, ಮೊಬೈಲ್ನಲ್ಲಿ ಸೇವ್ ಆಗಿರುವ ಕಾಂಟ್ಯಾಕ್ಟ್ ಇತ್ಯಾದಿ ಹಣ ಕಳುಹಿಸುವ ವಿಧಾನಗಳ ಆಯ್ಕೆ ಇರುತ್ತದೆ. ಯಾವುದಾದರೊಂದನ್ನು ಆಯ್ದುಕೊಂಡು, ಸೆಂಡ್ ಒತ್ತಿರಿ.
- ಮೊಬೈಲ್ ನಂಬರ್ ಅನ್ನು ನೀವು ಆಯ್ದುಕೊಂಡರೆ ಆಗ ನೀವು ಹಣ ಕಳುಹಿಸಬೇಕಾದ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ, ಸೆಂಡ್ ಒತ್ತಿರಿ.
- ಯುಪಿಐ ಐಡಿ ಆಯ್ಕೆ ಮಾಡಿಕೊಂಡಿದ್ದರೆ ಆಗ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಬೇಕಾಗುತ್ತದೆ.
- ಈಗ ಎಷ್ಟು ಹಣ ಪಾವತಿಸಬೇಕು, ಆ ಮೊತ್ತವನ್ನು ನಮೂದಿಸಿ, ಸೆಂಡ್ ಒತ್ತಿರಿ.
- ಆ ಹಣ ಪಾವತಿ ಯಾಕೆಂದು ನೀವು ವಿವರ ಬರೆಯುವ ಅವಕಾಶ ಇರುತ್ತದೆ. ಇದು ಅನಗತ್ಯ ಎನಿಸಿದರೆ ನಿರ್ಲಕ್ಷಿಸಬಹುದು.
- ಈಗ ಕೊನೆಯ ಕ್ರಮವಾಗಿ ನೀವು ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಎಂಟ್ರ ಮಾಡಬೇಕು. ಆಗ ಹಣ ರವಾನೆ ಕಾರ್ಯ ಪೂರ್ಣಗೊಳ್ಳುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ