Stock Market Closing Bell: ಸತತ ಎರಡನೇ ದಿನವೂ ಷೇರುಪೇಟೆ ಕುಸಿತ; ಸೆನ್ಸೆಕ್ಸ್ 566 ಪಾಯಿಂಟ್ಸ್, ನಿಫ್ಟಿ 150 ಪಾಯಿಂಟ್ಸ್ ಇಳಿಕೆ

| Updated By: Srinivas Mata

Updated on: Apr 06, 2022 | 5:29 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಡಿ ಸತತ ಎರಡನೇ ದಿನವಾದ ಬುಧವಾರದಂದು (ಏಪ್ರಿಲ್ 6, 2022) ಕೂಡ ಕುಸಿತ ಕಂಡಿದೆ. ಪ್ರಮುಖವಾಗಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Stock Market Closing Bell: ಸತತ ಎರಡನೇ ದಿನವೂ ಷೇರುಪೇಟೆ ಕುಸಿತ; ಸೆನ್ಸೆಕ್ಸ್ 566 ಪಾಯಿಂಟ್ಸ್, ನಿಫ್ಟಿ 150 ಪಾಯಿಂಟ್ಸ್ ಇಳಿಕೆ
ಸಾಂದರ್ಭಿಕ ಚಿತ್ರ
Follow us on

ಸತತ ಎರಡನೇ ದಿನವಾದ ಏಪ್ರಿಲ್ 6ನೇ ತಾರೀಕಿನ ಬುಧವಾರವೂ ಭಾರತದ ಷೇರುಪೇಟೆ (Stock Market) ಸೂಚ್ಯಂಕಗಳು ಇಳಿಕೆ ಕಂಡವು. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಲಾಭದ ನಗದೀಕರಣ ಕಂಡುಬಂತು. ದಿನಾಂತ್ಯಕ್ಕೆ ಸೆನ್ಸೆಕ್ಸ್ 566.09 ಪಾಯಿಂಟ್ಸ್ ಅಥವಾ ಶೇ 0.94ರಷ್ಟು ಕುಸಿದು, 59,610.41ರಲ್ಲಿ ಮುಕ್ತಾಯ ಕಂಡರೆ, ನಿಫ್ಟಿ 149.70 ಅಥವಾ ಶೇ 0.83ರಷ್ಟು ನೆಲ ಕಚ್ಚಿ, 17,807.20 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾ ಮಾಡಿತು. ಮಾರ್ಚ್ 25ರಿಂದ ಏಪ್ರಿಲ್ 4ನೇ ತಾರೀಕಿನ ಮಧ್ಯೆ ಚೇತರಿಕೆ ಕಾಣುತ್ತಿದ್ದ ಸ್ಥೂಲ ಆರ್ಥಿಕ ದತ್ತಾಂಶಗಳು ಹಾಗೂ ಕುಸಿಯುತ್ತಿದ್ದ ಕಚ್ಚಾ ತೈಲ ಬೆಲೆಯ ಕಾರಣ ಪ್ರಮುಖವಾಗಿ ಮಾರುಕಟ್ಟೆಗಳು ಏರಿಕೆ ಕಂಡಿದ್ದವು. ಈ ಅವಧಿಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ 5.5ರಷ್ಟು ಏರಿಕೆ ದಾಖಲಿಸಿತು. ಅಮೆರಿಕದ ಕೇಂದ್ರೀಯ ಬ್ಯಾಂಕ್ ಗವರ್ನರ್ ಹೇಳಿಕೆ ನೀಡಿದ ನಂತರ ಜಾಗತಿಕ ಮಾರುಕಟ್ಟೆ ವಹಿವಾಟು ಇಳಿಜಾರಿನತ್ತ ಸಾಗಿತು.

ವಲಯವಾರು ನೋಡುವುದಾದರೆ ನಿಫ್ಟಿ ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತ ಕಂಡರೆ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಮತ್ತು ಲೋಹದ ಸೂಚ್ಯಂಕಗಳು ತಲಾ ಶೇ 1ರಷ್ಟು ಇಳಿಕೆ ಕಂಡಿವೆ. “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿ ಹಿನ್ನೆಲೆಯಲ್ಲಿ ಅಲ್ಪಾವಧಿಯಲ್ಲಿ ಏರಿಳಿತವನ್ನು ನಿರೀಕ್ಷೆ ಮಾಡಲಾಗಿದೆ. ದರವನ್ನು ಯಥಾಸ್ಥಿತಿ ಉಳಿಸಿಕೊಳ್ಳಬಹುದು. ಆದರೆ ಹಣದುಬ್ಬರ ದರದ ಅಂದಾಜನ್ನು ಹೆಚ್ಚಿಸಬಹುದು,” ಎಂದು ವಿಶ್ಲೇಷಕರು ಹೇಳುತ್ತಾರೆ. ಬಿಎಸ್​ಇಯಲ್ಲಿ ಟಾಟಾ ಪವರ್, ವೆಲ್​ಸ್ಪನ್​ ಕಾರ್ಪೊರೇಷನ್, ಐಡಿಎಫ್​ಸಿ, ದ್ವಾರಕೀಶ್ ಶುಗರ್ ಇಂಡಸ್ಟ್ರೀಸ್ ಮತ್ತು ಬ್ಯಾಂಕ್ ಆಫ್ ಬರೋಡ ಸೇರಿದಂತೆ 150ರಷ್ಟು ಸ್ಟಾಕ್​ಗಳು 52 ವಾರಗಳ ಗರಿಷ್ಠವನ್ನು ಮುಟ್ಟಿದೆ. ವೈಯಕ್ತಿಕ ಸ್ಟಾಕ್​ಗಳನ್ನು ಗಮನಿಸುವುದಾದರೆ ಕೋಲ್ ಇಂಡಿಯಾ, ನಾಲ್ಕೋ, ಇಂಡಿಯನ್ ಹೋಟೆಲ್ಸ್ ಸ್ಟಾಕ್​ಗಳ ವಾಲ್ಯೂಮ್ ಶೇ 200ರಷ್ಟು ಹೆಚ್ಚಾಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಕೋಲ್ ಇಂಡಿಯಾ ಶೇ 3.17
ಐಒಸಿ ಶೇ 2.77
ಎನ್​ಟಿಪಿಸಿ ಶೇ 2.62
ಟಾಟಾ ಸ್ಟೀಲ್ ಶೇ 1.92
ಪವರ್​ಗ್ರಿಡ್ ಕಾರ್ಪೊರೇಷನ್ ಶೇ 1.54

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಎಚ್​ಡಿಎಫ್​ಸಿ ಬ್ಯಾಂಕ್ ಶೇ -3.57
ಎಚ್​ಡಿಎಫ್​ಸಿ ಶೇ -3.34
ಎಚ್​ಡಿಎಫ್​ಸಿ ಲೈಫ್ ಶೇ -2.42
ಎಚ್​ಸಿಎಲ್​ ಟೆಕ್ ಶೇ -2.09
ಟೆಕ್ ಮಹೀಂದ್ರಾ ಶೇ -1.99

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ