Opening Bell: ಬಜೆಟ್​ ಉತ್ತೇಜನದ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ 700 ಪಾಯಿಂಟ್ಸ್​ಗೂ ಹೆಚ್ಚು ಏರಿಕೆ

| Updated By: Srinivas Mata

Updated on: Feb 01, 2022 | 10:05 AM

ಕೇಂದ್ರ ಬಜೆಟ್ 2022ರ ಮಂಡನೆ ದಿನವಾದ ಫೆಬ್ರವರಿ 1ನೇ ತಾರೀಕಿನಂದು ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ ಕಂಡಿದೆ.

Opening Bell: ಬಜೆಟ್​ ಉತ್ತೇಜನದ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ 700 ಪಾಯಿಂಟ್ಸ್​ಗೂ ಹೆಚ್ಚು ಏರಿಕೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಬಜೆಟ್​ (Union Budget 2022) ಹಿನ್ನೆಲೆಯಲ್ಲಿ ಫೆಬ್ರವರಿ 1ನೇ ತಾರೀಕಿನ ಮಂಗಳವಾರದಂದು ಸೆನ್ಸೆಕ್ಸ್ ಸೂಚ್ಯಂಕವು 718.22 ಪಾಯಿಂಟ್ಸ್ ಅಥವಾ ಶೇ 1.24ರಷ್ಟು ಮತ್ತು ನಿಫ್ಟಿ 50 ಸೂಚ್ಯಂಕವು 191.20 ಪಾಯಿಂಟ್ಸ್ ಅಥವಾ ಶೇ 1.10ರಷ್ಟು ಮೇಲೇರಿತ್ತು. ಇನ್ನು ಈ ದಿನದ ಬಜೆಟ್​ ನಿರೀಕ್ಷೆಯಲ್ಲಿ ಯಾವ ಷೇರಿನ ಮೇಲೆ ಏನು ಬದಲಾವಣೆ ಆಗಿದೆ ಹಾಗೂ ಯಾವ ಸುದ್ದಿಯ ಹಿನ್ನೆಲೆಯಲ್ಲಿ ಹೀಗಾಗಿದೆ ಎಂಬುದರ ಬಗ್ಗೆ ಪ್ರಮುಖಾಂಶಗಳು ಇಲ್ಲಿವೆ.

* ಶೂನ್ಯ ಬಂಡವಾಳ ಕೃಷಿಗೆ ಕೇಂದ್ರ ಹಣಕಾಸು ಸಚಿವೆ ಒತ್ತು ನೀಡಬಹುದು ಎಂಬ ಕಾರಣಕ್ಕೆ ರಸಗೊಬ್ಬರ ಷೇರುಗಳು ಶೇ 1ರಿಂದ ಶೇ 1ರ ತನಕ ಕುಸಿತ ಕಂಡಿವೆ.

* ನಿರೀಕ್ಷೆಗಿಂತ ಕಡಿಮೆ ಸುಂಕ ಏರಿಕೆ ಹಿನ್ನೆಲೆಯಲ್ಲಿ ಸಿಗರೇಟ್​ ಉತ್ಪಾದಕರ ಷೇರುಗಳು ಶೇ 1ರಿಂದ ಶೇ 2ರಷ್ಟು ಏರಿಕೆ ಕಂಡಿವೆ.

* ಚಿನ್ನದ ಮೇಲಿನ ಮೇಲಿನ ಆಮದು ಸುಂಕ ಏರಿಕೆ ಪ್ರಸ್ತಾವ ಇರುವುದರಿಂದ ಆಭರಣದ ಸ್ಟಾಕ್​ಗಳು ಶೇ 2ರಿಂದ 7ರಷ್ಟು ಕುಸಿದಿವೆ.

* ಸರ್ಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಪ್ರಸ್ತಾವ ಇರುವುದರಿಂದ ಎಚ್​ಪಿಸಿಎಲ್​, ಬಿಪಿಸಿಎಲ್​, ಐಒಸಿ ಷೇರುಗಳು ಶೇ 5ರಿಂದ 6ರಷ್ಟು ಇಳಿಕೆ ಆಗಿತ್ತು.

* ಸರ್ಕಾರದಿಂದ ಪ್ರವರ್ತಕ ಷೇರು ಪ್ರಮಾಣ ಇಳಿಸುವ ಪ್ರಸ್ತಾವ ಇರುವುದರಿಂದ 700ರಷ್ಟು ಕಂಪೆನಿಗಳ ಮೇಲೆ ಪ್ರಭಾವ ಆಗಬಹುದು.

* ಬೇಡಿಕೆಗೆ ಉತ್ತೇಜನ ದೊರಕಿಸುವುದಕ್ಕೆ ನಿರ್ಮಲಾ ಸೀತಾರಾಮನ್ ಅವರು ಏನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಪೊರೇಟ್ಸ್​ಗಳು ಇದ್ದಾರೆ.

* ಮೂಲಸೌಕರ್ಯ ಯೋಜನೆಗಳ ಮೇಲೆ ವೆಚ್ಚ ಮಾಡುವುದು, ಕೊರೊನಾದಿಂದ ಹೊಡೆತ ಬಿದ್ದಿರುವ ಎಂಎಸ್​ಎಂಇಯಂಥ ವಲಯಕ್ಕೆ ಉತ್ತೇಜನ ನೀಡಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?