Sensex Today: ಸೆನ್ಸೆಕ್ಸ್ 1500 ಪಾಯಿಂಟ್ಸ್ ಜಿಗಿತ, ನಿಫ್ಟಿ 400ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ

| Updated By: Srinivas Mata

Updated on: Apr 04, 2022 | 10:53 AM

Sensex News: ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 4ನೇ ತಾರೀಕಿನ ಸೋಮವಾರದಂದು ಆರಂಭದ ಸೆಷನ್​ನಲ್ಲಿ ಭರ್ಜರಿ ಏರಿಕೆಯನ್ನು ದಾಖಲಿಸಿವೆ. ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Sensex Today: ಸೆನ್ಸೆಕ್ಸ್ 1500 ಪಾಯಿಂಟ್ಸ್ ಜಿಗಿತ, ನಿಫ್ಟಿ 400ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಷೇರುಪೇಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 4ನೇ ತಾರೀಕಿನ ಸೋಮವಾರದ ಬೆಳಗಿನ ಸೆಷನ್​ನಲ್ಲಿ ಭರ್ಜರಿಯಾಗಿ ಏರಿಕೆ ಕಂಡಿವೆ. ಸೆನ್ಸೆಕ್ಸ್ 60 ಸಾವಿರ ಪಾಯಿಂಟ್ಸ್​ ಗಡಿ ದಾಟಿ, ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 18 ಸಾವಿರ ಪಾಯಿಂಟ್ಸ್ ದಾಟಿತ್ತು. ಸೆನ್ಸೆಕ್ಸ್ ಸೂಚ್ಯಂಕ ದಿನದ ಗರಿಷ್ಠ ಮಟ್ಟವಾದ 60,845.10 ಪಾಯಿಂಟ್ಸ್ ತಲುಪಿ, 1500ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ ದಾಖಲಿಸಿತು. ಈ ಹಿಂದಿನ ಸೆಷನ್​ನಲ್ಲಿ 59,276.69 ಪಾಯಿಂಟ್ಸ್​ಗೆ ಅಂತ್ಯ ಕಂಡಿದ್ದು, ಇಂದಿನ ಆರಂಭವನ್ನು 59,764.13 ಪಾಯಿಂಟ್ಸ್​ನೊಂದಿಗೆ ಮಾಡಿತು. ಇನ್ನು ನಿಫ್ಟಿ ಈ ಹಿಂದಿನ ಸೆಷನ್​ನಲ್ಲಿ 17,670.45 ಪಾಯಿಂಟ್ಸ್​ನಲ್ಲಿ ಅಂತ್ಯ ಕಂಡಿತ್ತು. ದಿನದ ಆರಂಭವನ್ನು 17,809.10 ಪಾಯಿಂಟ್ಸ್​ನಲ್ಲಿ ಶುರು ಮಾಡಿದರೆ, ಗರಿಷ್ಠ ಮಟ್ಟ 18,114.65 ತಲುಪಿ, 430 ಪಾಯಿಂಟ್ಸ್​ಗೂ ಹೆಚ್ಚು ಹೆಚ್ಚಳವನ್ನು ಕಂಡಿತ್ತು.

ವಲಯವಾರು ಗಮನಿಸುವುದಾದರೆ, ಬಿಎಸ್​ಇ ಕ್ಯಾಪಿಟಲ್ ಗೂಡ್ಸ್, ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇ 1ಕ್ಕಿಂತ ಹೆಚ್ಚು ಏರಿಕೆ ಕಂಡವು. ಬಿಎಸ್​ಇ ಮಿಡ್​ಕ್ಯಾಪ್ ಶೇ 0.87, ಸ್ಮಾಲ್​ಕ್ಯಾಪ್ ಶೇ 1.31ರಷ್ಟು ಹೆಚ್ಚಳ ಆದವು. ಆದರೆ ರಿಯಾಲ್ಟಿ ಸೂಚ್ಯಂಕ ಶೇ 0.04ರಷ್ಟು ಇಳಿಕೆ ದಾಖಲಿಸಿತು. ಈ ಮಧ್ಯೆ ಇಂದ್ರಪ್ರಸ್ಥ ಗ್ಯಾಸ್ (IGL)ನಿಂದ ದೆಹಲಿಯಲ್ಲಿ ಸಿಎನ್​ಜಿ ಬೆಲೆಯನ್ನು ಕೇಜಿ 2.5 ರೂಪಾಯಿ ಏರಿಸಲಾಗಿದೆ. ಹೊಸ ದರವು ಏಪ್ರಿಲ್ 4ರಿಂದ ಜಾರಿಗೆ ಬರಲಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಎಚ್​ಡಿಎಫ್​ಸಿ ಶೇ 15.61
ಎಚ್​ಡಿಎಫ್​ಸಿ ಬ್ಯಾಂಕ್ ಶೇ 12.60
ಎಚ್​ಡಿಎಫ್​ಸಿ ಲೈಫ್ ಶೇ 6.19
ಎನ್​ಟಿಪಿಸಿ ಶೇ 2.06
ಭಾರ್ತಿ ಏರ್​ಟೆಲ್ ಶೇ 1.91

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಒಎನ್​ಜಿಸಿ ಶೇ -1.16
ಇನ್ಫೋಸಿಸ್ ಶೇ -0.97
ಮಹೀಂದ್ರಾ ಅಂಡ್ ಮಹೀಂದ್ರಾ ಶೇ -0.92
ಮಾರುತಿ ಸುಜುಕಿ ಶೇ -0.55
ರಿಲಯನ್ಸ್ ಶೇ-0.36

ಈ ವರದಿ ಸಿದ್ಧ ಆಗುವ ಹೊತ್ತಿಗೆ ಸೆನ್ಸೆಕ್ಸ್ 1467.35 ಪಾಯಿಂಟ್ಸ್ ಮೇಲೇರಿ 60,744.04 ಪಾಯಿಂಟ್ಸ್ ಮೇಲೇರಿ ವಹಿವಾಟು ನಡೆಸಿದರೆ, ನಿಫ್ಟಿ 389.85 ಪಾಯಿಂಟ್ಸ್​ ಹೆಚ್ಚಳವಾಗಿ 18060.30 ಪಾಯಿಂಟ್ಸ್​ನಲ್ಲಿ ವ್ಯವಹಾರ ಮಾಡುತ್ತಿತ್ತು.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ