ನವದೆಹಲಿ, ಆಗಸ್ಟ್ 7: ಆಷಾಡದ ಕೊಡುಗೆಯಾಗಿ ಎಲ್ಲಾ ಉಡುಪಿಗಳಿಗೂ ಶೇ. 50ರವರೆಗೂ ರಿಯಾಯಿತಿ ಸೇಲ್ ಇಟ್ಟಿದ್ದ ಸುದರ್ಶನ್ ಸಿಲ್ಕ್ಸ್ ಇದೀಗ ಈ ಆಫರ್ ಅನ್ನು ಇನ್ನಷ್ಟು ಕಾಲ ಮುಂದುವರಿಸಲು ನಿರ್ಧರಿಸಿದೆ. ಆಗಸ್ಟ್ 18ರವರೆಗೂ ಈ ಆಫರ್ ಇರಲಿದೆ. ಆಷಾಡಕ್ಕೆಂದು ಇಟ್ಟ ಈ ಕೊಡುಗೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕ ಬೆನ್ನಲ್ಲೇ ಸುದರ್ಶನ್ ಸಿಲ್ಕ್ಸ್ ತನ್ನ ಮಲ್ಲೇಶ್ವರಂ ಶೋರೂಮಿನಲ್ಲಿ ಈ ರಿಯಾಯಿತಿ ದರ ಮಾರಾಟವನ್ನು ಈ ತಿಂಗಳ 18ರವರೆಗೆ ಮುಂದುವರಿಸುತ್ತಿದೆ.
ಶೇ. 50ರವರೆಗೂ ಡಿಸ್ಕೌಂಟ್ ಇಡಲಾಗಿದ್ದು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿ ಲಾಭ ಪಡೆದಿದ್ದಾರೆ. ಆಷಾಢ ಕಳೆದು ಶ್ರಾವಣ ಬಂದಿದೆ. ಹಬ್ಬ ಹರಿದಿನ, ಮದುವೆ ಮುಹೂರ್ತ ಆರಂಭವಾಗಿದೆ. ಗ್ರಾಹಕರ ಉಪಯೋಗಕ್ಕಾಗಿ ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್ ಈ ಆಷಾಢ ಕೊಡುಗೆಯನ್ನು ಆಗಸ್ಟ್ 18ರವರೆಗೂ ವಿಸ್ತರಿಸಲು ಮುಂದಾಗಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಕರ್ನಾಟಕದ 8, ಮೈ ಹೋಂ ಇಂಡಸ್ಟ್ರೀಸ್ನ 2 ಸೇರಿ 68 ಗಣಿಗಳಿಗೆ ಫೈವ್ ಸ್ಟಾರ್ ರೇಟಿಂಗ್
ಆಷಾಢ ಮಾಸ ಕಳೆದು ನಿನ್ನೆಯಿಂದ (ಆಗಸ್ಟ್ 6) ಶ್ರಾವಣ ಆರಂಭವಾಗಿದೆ. ಸಾಕಷ್ಟು ಹಬ್ಬ ಹರಿದಿನಗಳು ಈ ಮಾಸದಲ್ಲಿ ಬರುತ್ತಿವೆ. ಬಟ್ಟೆ ಬರೆ ಖರೀದಿ ಹೆಚ್ಚಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ