AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax Notice: ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದಿದೆಯಾ? ಭಯ ಬೀಳದೆ ಹೀಗೆ ಮಾಡಿ…

What to do if got incomet tax notice: ಏಳು ಕೋಟಿಗೂ ಅಧಿಕ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆ ಮಾಡಿದ್ದಾರೆ. ಕೆಲವರಿಗೆ ಇಲಾಖೆಯಿಂದ ನೋಟೀಸ್ ಬಂದಿರಬಹುದು. ರಿಟರ್ನ್ಸ್ ಸರಿಯಾಗಿ ಫೈಲ್ ಆಗದೇ ಇದ್ದರೆ, ಅಥವಾ ಫೈಲ್​ನಲ್ಲಿ ಮಾಹಿತಿ ಕೊರತೆ ಇದ್ದರೆ, ಅಥವಾ ತೆರಿಗೆ ಪಾವತಿ ಆಗದೇ ಇದ್ದರೆ, ಇನ್ಯಾವುದಾದರೂ ಕಾರಣಕ್ಕೆ ನೋಟೀಸ್ ಬರಬಹುದು. ನೋಟೀಸ್​ಗೆ ಗಾಬರಿಯಾಗದೇ ಅದರಲ್ಲಿ ತಿಳಿಸಿರುವ ಅಂಶಗಳನ್ನು ಓದಿ ಸರಿಪಡಿಸಲು ಯತ್ನಿಸಿ.

Income Tax Notice: ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದಿದೆಯಾ? ಭಯ ಬೀಳದೆ ಹೀಗೆ ಮಾಡಿ...
ಐಟಿಆರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2024 | 12:39 PM

Share

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಡೆಡ್​ಲೈನ್ ಇತ್ತು. ಏಳು ಕೋಟಿಗೂ ಹೆಚ್ಚು ಜನರು ಐಟಿಆರ್ ಸಲ್ಲಿಸಿದ್ದಾರೆ. ಇದೀಗ ಕೆಲ ಮಂದಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರತೊಡಗಿದೆ. ನೋಟೀಸ್ ಎಂದಾಕ್ಷಣ ಯಾವುದೋ ಪ್ರಮಾದ ನಡೆದಿದೆ, ಅಥವಾ ನಡೆಯಲಿದೆ ಎಂದು ಭಾವಿಸಬೇಕಿಲ್ಲ. ಹಲವಾರು ಕಾರಣಗಳಿಗೆ ಐಟಿ ವತಿಯಿಂದ ತೆರಿಗೆ ಪಾವತಿದಾರರಿಗೆ ನೋಟೀಸ್ ಬರಬಹುದು. ಸರಿಯಾಗಿ ಐಟಿ ರಿಟರ್ನ್ ಸಲ್ಲಿಸಿಲ್ಲದಿದ್ದರೆ, ಅಥವಾ ಪ್ರಮುಖ ಆದಾಯ ಮುಚ್ಚಿಟ್ಟದ್ದರೆ, ತೆರಿಗೆ ಪಾವತಿಸಿಲ್ಲದೇ ಇದ್ದರೆ ಹೀಗೆ ಬೇರೆ ಬೇರೆ ಕಾರಣಗಳಿಗೆ ಐಟಿ ಇಲಾಖೆ ನೋಟೀಸ್ ಕೊಡಬಹುದು.

ನಿಮಗೆ ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದರೆ ಏನು ಮಾಡಬೇಕು?

ಸಾಮಾನ್ಯವಾಗಿ ಐಟಿ ಇಲಾಖೆ ಇಮೇಲ್ ಮೂಲಕ ನಿಮಗೆ ನೋಟೀಸ್ ನೀಡುತ್ತದೆ. ಹಾಗೆಯೇ, ಬಹಳಷ್ಟು ವಂಚಕರೂ ಕೂಡ ಐಟಿ ಇಲಾಖೆ ಹೆಸರಿನಲ್ಲಿ ನಿಮಗೆ ಇಮೇಲ್ ಕಳುಹಿಸಬಹುದು. ಆದ್ದರಿಂದ ಎಚ್ಚರದಿಂದಿರಿ.

ನಿಮಗೆ ಬಂದ ಇಮೇಲ್ ಆದಾಯ ತೆರಿಗೆ ಇ ಇಲಾಖೆಯದ್ದಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಹೋಗಿ ‘ಕ್ವಿಕ್ ಲಿಂಕ್ಸ್’ ಅಡಿಯಲ್ಲಿ ‘ಅಥೆಂಟಿಕೇಟ್ ದಿ ನೋಟೀಸ್ ಇಷ್ಯೂಡ್ ಬೈ ಐಟಿಡಿ’ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಇಮೇಲ್​ಗೆ ಬಂದಿರುವ ನೋಟೀಸ್​ನ ವಿವರವನ್ನು ಅಲ್ಲಿ ಹಾಕಿ ಪರಿಶೀಲಿಸಿ.

ಒಂದು ವೇಳೆ ಇನ್ಕಮ್ ಟ್ಯಾಕ್ಸ್ ಇಲಾಖೆಯಿಂದ ಇಮೇಲ್ ಬಂದಿದ್ದರೂ ಅದರಲ್ಲಿ ನಮೂದಾಗಿರುವ ಪ್ಯಾನ್ ಇತ್ಯಾದಿ ವಿವರ ನಿಮ್ಮದಾ ಎಂಬುದನ್ನು ಪರಿಶೀಲಿಸಿ. ಹಾಗೆಯೇ, ನೋಟೀಸ್​ನಲ್ಲಿ ಹೇಳಿರುವ ಅಂಶಗಳನ್ನು ಸೂಕ್ಷ್ಮವಾಗಿ ಓದಿ ಅರ್ಥೈಸಿಕೊಳ್ಳಿ.

ಇದನ್ನೂ ಓದಿ: ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?

ಸಾಮಾನ್ಯವಾಗಿ ಈ ನೋಟೀಸ್​ಗೆ ಉತ್ತರಿಸಲು ಇಲಾಖೆ ಡೆಡ್​ಲೈನ್ ಕೊಟ್ಟಿರುತ್ತದೆ. ಅಷ್ಟರೊಳಗೆ ನೀವು ಉತ್ತರ ಕೊಡಬೇಕು. ನೋಟೀಸ್​ನಲ್ಲಿರುವ ಅಂಶಗಳನ್ನು ಓದಿ ಸೂಕ್ತ ಸಮಜಾಯಿಷಿಯನ್ನು ಬೇಗನೇ ಕೊಡಲು ಯತ್ನಿಸಿ.

ಸಮಸ್ಯೆ ಸಂಕೀರ್ಣವಾಗಿದ್ದರೆ ತೆರಿಗೆ ಸಲಹೆಗಾರರೊಬ್ಬರನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ