AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?

Indexation benefit and capital gain tax: ಆಸ್ತಿ ಮಾರಾಟದಿಂದ ಬಂದ ಲಾಭಕ್ಕೆ ಇಂಡೆಕ್ಸೇಶನ್ ಅನುಕೂಲದೊಂದಿಗೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಬಾರಿಯ ಬಜೆಟ್​ನಲ್ಲಿ ತೆರಿಗೆಯನ್ನು ಶೇ. 12.5ಕ್ಕೆ ಇಳಿಸಲಾಯಿತು. ಆದರೆ, ಇಂಡೆಕ್ಸೇಶನ್ ಫೀಚರ್ ತೆಗೆಯಲಾಯಿತು. ಇದಕ್ಕೆ ಬಹಳಷ್ಟು ವಿರೋಧ ಬಂದಿದೆ. ಸರ್ಕಾರ ಈ ಎರಡನ್ನೂ ಮುಂದುವರಿಸಿದೆ. ಹೂಡಿಕೆದಾರರು ಯಾವುದು ಅನುಕೂಲವೋ ಅದನ್ನು ಬಳಸಬಹುದು.

ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2024 | 12:04 PM

Share

ನವದೆಹಲಿ, ಆಗಸ್ಟ್ 7: ಈ ಬಾರಿಯ ಬಜೆಟ್​ನಲ್ಲಿ ಸಾಕಷ್ಟು ಜನರ ಗಮನ ಸೆಳೆದದ್ದು ಆಸ್ತಿ ಮಾರಾಟದ ಮೇಲಿನ ಎಲ್​ಟಿಸಿಜಿ ತೆರಿಗೆಯಲ್ಲಿನ ಬದಲಾವಣೆ ಮಾಡುವ ಕ್ರಮ. ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆ ಇಳಿಸಿತು. ಅದಕ್ಕೆ ಬದಲಾಗಿ ಹಿಂದೆ ಇದ್ದ ಇಂಡೆಕ್ಸೇಶನ್ ಫೀಚರ್ ಅನ್ನು ತೆಗೆದುಹಾಕಿತು. ಈ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಇಂಡೆಕ್ಸೇಶನ್ ವಿಚಾರದಲ್ಲಿ ವಿನಾಯಿತಿ ತೋರಿದೆ. ಆಸ್ತಿ ಮಾರಾಟಗಾರರು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಅಂದರೆ, ಇಂಡೆಕ್ಸೇಶನ್ ಸೌಲಭ್ಯ ಬೇಕಾದರೆ ಬಳಸಬಹುದು. ಇಲ್ಲದಿದ್ದರೆ ನೇರ ಶೇ. 12.5ರಷ್ಟು ಎಲ್​ಟಿಸಿಜಿ ತೆರಿಗೆ ಪಾವತಿಸಬಹುದು.

ಲಾಭ ಹೆಚ್ಚಳ ತೆರಿಗೆ ಎಂದರೇನು?

ಒಂದು ವಸ್ತುವನ್ನು ಖರೀದಿಸಿ ಬಳಿಕ ಅದನ್ನು ಲಾಭಕ್ಕೆ ಮಾರಿದರೆ ಅದು ಕ್ಯಾಪಿಟಲ್ ಗೇಯ್ನ್ ಆಗುತ್ತದೆ. ವಸ್ತು ಖರೀದಿಸುವ ಮತ್ತು ಮಾರುವ ಅವಧಿಯ ಆಧಾರದ ಮೇಲೆ ದೀರ್ಘಾವಧಿ ಲಾಭ ಹೆಚ್ಚಳ ಮತ್ತು ಅಲ್ಪಾವಧಿ ಲಾಭ ಹೆಚ್ಚಳ ಎಂದು ವರ್ಗೀಕರಿಸಲಾಗುತ್ತದೆ. ಈ ಲಾಭದ ಮೇಲೆ ಸರ್ಕಾರ ತೆರಿಗೆ ಹಾಕುತ್ತದೆ. ನೀವು 5 ಲಕ್ಷ ರೂ ಆಸ್ತಿಯನ್ನು 8 ಲಕ್ಷಕ್ಕೆ ಮಾರಿದರೆ ನಿಮಗೆ 3 ಲಕ್ಷ ರೂ ಲಾಭ ಬರುತ್ತದೆ. ಈ 3 ಲಕ್ಷ ರೂಗೆ ಸರ್ಕಾರ ನಿರ್ದಿಷ್ಟ ತೆರಿಗೆ ಹಾಕುತ್ತದೆ.

ಇಂಡೆಕ್ಸೇಶನ್ ಎಂದರೇನು?

ಇದು ರಿಯಲ್ ಎಸ್ಟೇಟ್ ಆಸ್ತಿ ಮಾರಾಟಕ್ಕೆ ಅನ್ವಯ ಆಗುವ ಫೀಚರ್. ಹತ್ತು ವರ್ಷದ ಹಿಂದೆ ನೀವು ಹೂಡಿಕೆ ಮಾಡಿದ ಆಸ್ತಿಯ ಮೌಲ್ಯ ಈಗ ಎರಡು ಪಟ್ಟು ಆಗಿದೆ ಎಂದಿಟ್ಟುಕೊಳ್ಳಿ. 5 ಲಕ್ಷ ರೂ ಮೌಲ್ಯ ಇದ್ದ ಆಸ್ತಿ ಬೆಲೆ ಈಗ 10 ಲಕ್ಷ ರೂ ಆಗಿದೆ. ಆದರೆ, ಹಣದುಬ್ಬರದ ಕಾರಣಕ್ಕೆ ಹಣದ ಮೌಲ್ಯ ದಿನೇ ದಿನೇ ಕಡಿಮೆ ಆಗುತ್ತಾ ಹೋಗುತ್ತಿರುತ್ತದೆ. ಹೀಗಾಗಿ, ಅಂತಿಮವಾಗಿ ನಿಮಗೆ ಸಿಗುವ ನೈಜ ಲಾಭ ಕಡಿಮೆಯೇ ಎನ್ನುವ ಲೆಕ್ಕಾಚಾರದಲ್ಲಿ ಇಂಡೆಕ್ಸೇಶನ್ ಕ್ರಮವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಇನ್ಫೋಸಿಸ್​ಗೆ ಜಿಎಸ್​ಟಿ ನೋಟೀಸ್; ಸರ್ಕಾರದಿಂದ ಇಲ್ಲ ವಿನಾಯಿತಿ

ಇಲ್ಲಿ ನಿಮ್ಮ ಆಸ್ತಿ ಮೌಲ್ಯ 5ರಿಂದ 10 ಲಕ್ಷಕ್ಕೆ ಹೆಚ್ಚಾಗಿದೆಯಾದರೂ ಇಂಡೆಕ್ಸೇಶನ್ ಪರಿಗಣಿಸಿದರೆ ಲಾಭ ಹೆಚ್ಚಳವನ್ನು 5 ಲಕ್ಷ ಬದಲು 2 ಲಕ್ಷ ರೂ ಎಂದು ಪರಿಗಣಿಸಲಾಗುತ್ತದೆ. ಅಂದರೆ ನೀವು 5 ಲಕ್ಷಕ್ಕೆ ತೆರಿಗೆ ಕಟ್ಟುವ ಬದಲು 2 ಲಕ್ಷ ರೂಗೆ ತೆರಿಗೆ ಕಟ್ಟಿದರೆ ಸಾಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ