AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 8, ಮೈ ಹೋಂ ಇಂಡಸ್ಟ್ರೀಸ್​ನ 2 ಸೇರಿ 68 ಗಣಿಗಳಿಗೆ ಫೈವ್ ಸ್ಟಾರ್ ರೇಟಿಂಗ್

68 Mines get 5 star rating: 2022-23ನೇ ಸಾಲಿನಲ್ಲಿ ದೇಶದ 68 ಗಣಿಗಳಿಗೆ ಸರ್ಕಾರ 5 ಸ್ಟಾರ್ ರೇಟಿಂಗ್ ನೀಡಿದೆ. ಗಣಿ ಕಂಪನಿಯ ಪರಿಸರ ಕಾಳಜಿ, ಸಾಮಾಜಿಕ ಹೊಣೆ ಇತ್ಯಾದಿ ಅಂಶಗಳನ್ನು ರೇಟಿಂಗ್​ಗೆ ಬಳಸಲಾಗಿದೆ. ಕರ್ನಾಟಕದ 7 ಗಣಿಗಳಿಗೆ ಪೂರ್ಣಾಂಕ ಭಾಗ್ಯ ಸಿಕ್ಕಿದೆ. ಆಂಧ್ರದ ಮೈ ಹೋಂ ಇಂಡಸ್ಟ್ರೀಸ್​ನ ಎರಡು ಗಣಿಗಳಿಗೆ 5 ಸ್ಟಾರ್ ರೇಟಿಂಗ್ ಬಂದಿದೆ.

ಕರ್ನಾಟಕದ 8, ಮೈ ಹೋಂ ಇಂಡಸ್ಟ್ರೀಸ್​ನ 2 ಸೇರಿ 68 ಗಣಿಗಳಿಗೆ ಫೈವ್ ಸ್ಟಾರ್ ರೇಟಿಂಗ್
5 ಸ್ಟಾರ್ ಮೈನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2024 | 3:02 PM

Share

ನವದೆಹಲಿ, ಆಗಸ್ಟ್ 7: ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಪ್ರತೀ ವರ್ಷ ದೇಶಾದ್ಯಂತ ಗಣಿಗಳಿಗೆ ಸ್ಟಾರ್ ರೇಟಿಂಗ್ ಕೊಡಲಾಗುತ್ತದೆ. 2022-23ರ ಸಾಲಿನಲ್ಲಿ 68 ಗಣಿಗಳಿಗೆ ಪೂರ್ಣಾಂಕ ಸಿಕ್ಕಿದೆ. ಅಂದರೆ, 5 ಸ್ಟಾರ್ ರೇಟಿಂಗ್ ಕೊಡಲಾಗಿದೆ. ಇದರಲ್ಲಿ ಕರ್ನಾಟಕದ ಏಳು ಗಣಿಗಳು ಒಳಗೊಂಡಿವೆ. ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಸತೀಶ್ ಚಂದ್ರ ದುಬೆ ಅವರು ಇಂದು ಬುಧವಾರ ಪ್ರಶಸ್ತಿ ಪ್ರದಾನ ಮಾಡಿದರು. ಆಂಧ್ರ ಮತ್ತು ತೆಲಂಗಾಣದಲ್ಲಿರುವ ಮೈ ಹೋಂ ಇಂಡಸ್ಟ್ರೀಸ್ (My Home Industries), ಜಯಜ್ಯೋತಿ ಸಿಮೆಂಟ್ಸ್ ಸಂಸ್ಥೆಗಳ ಮೂರು ಗಣಿಗಳಿಗೂ ಫೈವ್ ಸ್ಟಾರ್ ರೇಟಿಂಗ್ ಸಿಕ್ಕಿದೆ.

ಜೆ.ಕೆ. ಸಿಮೆಂಟ್ಸ್, ಜೆಎಸ್​ಡಬ್ಲ್ಯು ಸಿಮೆಂಟ್ಸ್, ಜೆಎಸ್​ಡಬ್ಲ್ಯು ಸ್ಟೀಲ್, ಎಂಎಸ್​ಪಿಎಲ್, ಕುಮಾರಸ್ವಾಮಿ ಮಿನರಲ್ ಎಕ್ಸ್​ಪೋರ್ಟ್ಸ್, ಸಂಡೂರ್ ಮ್ಯಾಂಗನೀಸ್ ಮೊದಲಾದ ಸಂಸ್ಥೆಗಳ ಕರ್ನಾಟಕದ ಗಣಿಗಳಿಗೆ ಪೂರ್ಣಾಂಕ ಕೊಡಲಾಗಿದೆ. ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಯ 12 ಕಲ್ಲು ಗಣಿಗಳಿಗೂ ಪ್ರಶಸ್ತಿ ಕೊಡಲಾಗಿದೆ.

ಫೈವ್ ಸ್ಟಾರ್ ರೇಟಿಂಗ್ ಪಡೆದ ಗಣಿಗಳ ಪೈಕಿ ಕಲ್ಲು ಗಣಿ ಅಥವಾ ಲೈಮ್ ಸ್ಟೋನ್ ಗಣಿಗಳ ಸಂಖ್ಯೆ ಹೆಚ್ಚಿದೆ. ಕಬ್ಬಿಣ ಅದಿರಿನ ಗಣಿಗಳು ನಂತರದ ಸ್ಥಾನ ಪಡೆದಿವೆ. ಬಾಕ್ಸೈಟ್, ಮ್ಯಾಂಗನೀಸ್, ಲೆಡ್ ಜಿಂಕ್ ಗಣಿಗಳಿಗೂ ಪೂರ್ಣಾಂಕ ಸಿಕ್ಕಿದೆ.

ಇದನ್ನೂ ಓದಿ: ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?

5 ಸ್ಟಾರ್ ರೇಟಿಂಗ್ ಪಡೆದ ಕರ್ನಾಟಕ ಗಣಿಗಳು ಮತ್ತು ಮಾಲೀಕರು

  1. ಹದ್ದಿನಪಾದೆ ಕಬ್ಬಿನ ಅದಿರು ಗಣಿ: ಮಾಲೀಕರು ಬಿ. ಕುಮಾರಗೌಡ
  2. ಹಲ್ಕಿ ಕಲ್ಲು ಗಣಿ: ಮಾಲೀಕರು, ಜೆ.ಕೆ. ಸಿಮೆಂಟ್ಸ್
  3. ರಾಮ ಕಬ್ಬಿಣ ಅದಿರು ಗಣಿ: ಮಾಲೀಕರು ಜೆಎಸ್​ಡಬ್ಲ್ಯು ಸಿಮೆಂಟ್ಸ್
  4. ಕಲಬುರ್ಗಿ ಸಿಮೆಂಟ್ ಲೈಮ್​ಸ್ಟೋನ್ ಗಣಿ: ಮಾಲೀಕರು ಕಲಬುರ್ಗಿ ಸಿಮೆಂಟ್ ಪ್ರೈ ಲಿ
  5. ಕರಡಿಕೊಳ್ಳ ಕಬ್ಬಿಣ ಅದಿರು ಗಣಿ: ಎಂಎಸ್​ಪಿಎಲ್
  6. ರಮಣದುರ್ಗ ಕಬ್ಬಿಣ ಅದಿರು ಗಣಿ: ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್​ಪೋರ್ಟ್ಸ್ ಲಿ
  7. ಕಮ್ಮತರು ಕಬ್ಬಿಣ ಅದಿರು ಗಣಿ: ಸಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಸ್ ಲಿ ಸಂಸ್ಥೆ
  8. ರಾಜಶ್ರೀ ಸಿಮೆಂಟ್ಸ್ ಲೈಮ್​ಸ್ಟೋನ್ ಮೈನ್: ಅಲ್ಟ್ರಾಟೆಕ್ ಸಿಮೆಂಟ್

2016ರಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಗಣಿಗಳ ಗುಣಮಟ್ಟದ ಆಧಾರದ ಮೇಲೆ ಶ್ರೇಯಾಂಕ ನೀಡುವ ಕ್ರಮ ಜಾರಿಗೆ ತಂದಿದೆ. 2014-15ರ ವರ್ಷಕ್ಕೆ 9 ಗಣಿಗಳಿಗೆ 5 ಸ್ಟಾರ್ ಸಿಕ್ಕಿತ್ತು. ಹಿಂದಿನ ವರ್ಷದಲ್ಲಿ, ಅಂದರೆ 2021-22ರಲ್ಲಿ 76 ಗಣಿಗಳಿಗೆ ಸ್ಟಾರ್ ರೇಟಿಂಗ್ ಕೊಡಲಾಗಿತ್ತು. 2019-20 ಮತ್ತು 2020-21ರ ವರ್ಷದಲ್ಲಿ ತಲಾ 40 ಗಣಿಗಳಿಗೆ ಫೈವ್ ಸ್ಟಾರ್ ಶ್ರೇಯಾಂಕ ಕೊಡಲಾಗಿತ್ತು.

ಇದನ್ನೂ ಓದಿ: ಇನ್ಫೋಸಿಸ್​ಗೆ ಜಿಎಸ್​ಟಿ ನೋಟೀಸ್; ಸರ್ಕಾರದಿಂದ ಇಲ್ಲ ವಿನಾಯಿತಿ

ಮಾನದಂಡಗಳೇನು?

ಗಣಿಗಾರಿಕೆಯಿಂದ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳು ಉದ್ಭವವಾಗುತ್ತವೆ. ಗಣಿ ನೆಲವನ್ನು ಮೂಲ ಸ್ಥಿತಿಗೆ ತರುವುದು, ಗಣಿಗಾರಿಕೆಯಿಂದ ಆದ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಯತ್ನಿಸುವುದು ಇವೇ ಮುಂತಾದ ಅಂಶಗಳನ್ನು ಪರಿಗಣಿಸಿ ಒಂದು ಗಣಿಗೆ ಶ್ರೇಯಾಂಕ ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ