Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್​ಗೆ ಪ್ರಶಸ್ತಿ

|

Updated on: Aug 20, 2023 | 3:33 PM

Indian Family Business Awards 2022: ಮನಿಕಂಟ್ರೋಲ್​ನ ಇಂಡಿಯನ್ ಫ್ಯಾಮಿಲಿ ಬಿಸಿನೆಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಸನ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆಯ ಸಂಸ್ಥಾಪಕ ದಿಲೀಪ್ ಶಾಂಘವಿ ಅವರಿಗೆ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಎಚ್​ಸಿಎಲ್ ಟೆಕ್ನಾಲಜೀಸ್​ನ ರೋಷನಿ ನಾದರ್ ಸೇರಿದಂತೆ ಹಲವರಿಗೆ ವಿವಿಧ ವಿಭಾಗಗಳ ಫ್ಯಾಮಿಲಿ ಬಿಸಿನೆಸ್ ಅವಾರ್ಡ್ ಸಿಕ್ಕಿದೆ.

Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್​ಗೆ ಪ್ರಶಸ್ತಿ
ರೋಷನಿ ನಾದರ್
Follow us on

ನವದೆಹಲಿ, ಆಗಸ್ಟ್ 20: ಮಾಧ್ಯಮ ಸಂಸ್ಥೆ ಮನಿಕಂಟ್ರೋಲ್​ನ 2022ರ ಸಾಲಿನ ಇಂಡಿಯನ್ ಫ್ಯಾಮಿಲಿ ಬ್ಯುಸಿನೆಸ್ ಅವಾರ್ಡ್​ನಲ್ಲಿ (Indian Family Business Awards 2022) ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಬಹಳ ಸಂಖ್ಯೆಯಲ್ಲಿ ಇರುವ ಫ್ಯಾಮಿಲಿ ಬ್ಯುಸಿನೆಸ್​ಗಳಲ್ಲಿರುವ ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಎಚ್​ಸಿಎಲ್ ಟೆಕ್ನಾಲಜೀಸ್​ನ ಅಧ್ಯಕ್ಷೆ ರೋಷನಿ ನಾದರ್ ಮಲ್ಹೋತ್ರಾ (Roshni Nadar Malhotra) ಅವರು ಉದಯೋನ್ಮುಖ ಮಹಿಳಾ ಉದ್ಯಮನಾಯಕಿ ಪ್ರಶಸ್ತಿ ಗೆದ್ದಿದ್ದಾರೆ. ಟಿವಿಎಸ್ ಮೋಟಾರ್ ಕಂಪನಿಯ ಎಕ್ಸಿಕ್ಯೂಟಿವ್ ಸುದರ್ಶನ್ ವೇಣು ಅವರು ಮುಂದಿನ ಪೀಳಿಗೆ ನಾಯಕ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇನ್ನು, ಸನ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆಯ ಸ್ಥಾಪಕ ದಿಲೀಪ್ ಶಾಂಘವಿ ಅವರನ್ನು ಜೀವಿತಾವಧಿ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೇಂದ್ರ ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಆಗಸ್ಟ್ 19ರಂದು ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಿದರು.

ಮನಿಕಂಟ್ರೋಲ್​ನಿಂದ ಆಯೋಜಿಸಲಾದ ಇಂಡಿಯನ್ ಫ್ಯಾಮಿಲಿ ಬ್ಯುಸಿನೆಸ್ ಅವಾರ್ಡ್ಸ್ ಇದು ಎರಡನೇ ಆವೃತ್ತಿದ್ದಾಗಿದೆ. 17 ವಿಭಾಗಗಳಲ್ಲಿರುವ ಕುಟುಂಬ ಉದ್ದಿಮೆಗಳನ್ನು ಅವಲೋಕಿಸಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಈ ಕುಟುಂಬ ವ್ಯವಹಾರಸ್ಥರ ಪಾತ್ರದ ಬಗ್ಗೆ ಮೆಚ್ಚುಗೆ ಮಾಡಲಾಗಿದೆ. ಭಾರತದಲ್ಲಿ ಫ್ಯಾಮಿಲಿ ಬಿಸಿನೆಸ್​ಗಳು ಶೇ. 70ರಷ್ಟು ಜಿಡಿಪಿಗೆ ಕೊಡುಗೆ ನೀಡಿವೆ. ಶೇ. 60ರಷ್ಟು ಉದ್ಯೋಗಸೃಷ್ಟಿಗೆ ಕಾರಣವಾಗಿರುವ ಸಂಗತಿಯನ್ನು ಎತ್ತಿತೋರಿಸಲಾಗಿದೆ.

ಇಂಡಿಯನ್ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ 2022

ಇಂಡಿಯನ್ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ ಸೂಪರ್ ಕೆಟಗರಿ

ಮೋಸ್ಟ್ ಇನ್ನೋವೇಟಿವ್, ಡಿಸ್ರಪ್ಟಿವ್ ಅಂಡ್ ಟ್ರಾನ್ಸ್​ಫಾರ್ಮೇಶನಲ್ ಬಿಸಿನೆಸ್ ಪ್ರಶಸ್ತಿ: ಟೆಗಾ ಇಂಡಸ್ಟ್ರೀಸ್ ಲಿ

ಬೆಸ್ಟ್ ಗವರ್ನೆನ್ಸ್ ಪ್ರಶಸ್ತಿ: ಆಪ್ಕೋಟೆಕ್ಸ್ ಇಂಡಸ್ಟ್ರೀಸ್

ಮಹಿಳಾ ನೇತೃತ್ವದ ಅತ್ಯುತ್ತಮ ಉದ್ದಿಮೆ: ಮೆಟ್ರೋ ಬ್ರಾಂಡ್ಸ್

ಅತ್ಯುತ್ತಮ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ: ಬೋರೋಸಿಲ್ ಲಿ

ಇದನ್ನೂ ಓದಿ: ಯಾರನ್ನೋ ಮೆಚ್ಚಿಸಲು ರಾಜನ್​ರಿಂದ ಗಾಳಿಯಲ್ಲಿ ಗುದ್ದುವ ಕೆಲಸ: ಮಾಜಿ ಆರ್​​ಬಿಐ ಗವರ್ನರ್​ಗೆ ಕೇಂದ್ರ ಸಚಿವ ಎ ವೈಷ್ಣವ್ ತರಾಟೆ

ಇಂಡಿಯನ್ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ ಮೆಗಾ ಕೆಟಗರಿ

ಮೋಸ್ಟ್ ಇನ್ನೋವೇಟಿವ್, ಡಿಸ್ರಪ್ಟಿವ್ ಅಂಡ್ ಟ್ರಾನ್ಸ್​ಫಾರ್ಮೇಶನಲ್ ಬಿಸಿನೆಸ್ ಪ್ರಶಸ್ತಿ: ಸೆಂಚುರಿ ಪ್ಲೈಬೋರ್ಡ್ಸ್ ಲಿ

ಬೆಸ್ಟ್ ಗವರ್ನೆನ್ಸ್ ಪ್ರಶಸ್ತಿ: ರೂಟ್ ಮೊಬೈಲ್ ಲಿ

ಮಹಿಳಾ ನೇತೃತ್ವದ ಅತ್ಯುತ್ತಮ ಉದ್ದಿಮೆ: ಟಿವಿಎಸ್ ಶ್ರೀಚಕ್ರ

ಅತ್ಯುತ್ತಮ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ: ಮಿಂಡಾ ಕಾರ್ಪೊರೇಶನ್ ಲಿ

ಇಂಡಿಯನ್ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ ಗೀಗಾ ಕೆಟಗರಿ

ಮೋಸ್ಟ್ ಇನ್ನೋವೇಟಿವ್, ಡಿಸ್ರಪ್ಟಿವ್ ಅಂಡ್ ಟ್ರಾನ್ಸ್​ಫಾರ್ಮೇಶನಲ್ ಬಿಸಿನೆಸ್ ಪ್ರಶಸ್ತಿ: ಹಾವೆಲ್ಸ್ ಇಂಡಿಯಾ ಲಿ

ಬೆಸ್ಟ್ ಗವರ್ನೆನ್ಸ್ ಪ್ರಶಸ್ತಿ: ಜಿಎಂಆರ್ ಏರ್​ಪೋರ್ಟ್ಸ್ ಇನ್​ಫ್ರಾಸ್ಟ್ರಕ್ಚರ್

ಮಹಿಳಾ ನೇತೃತ್ವದ ಅತ್ಯುತ್ತಮ ಉದ್ದಿಮೆ: ಥರ್ಮಾಕ್ಸ್ ಲಿ.

ಅತ್ಯುತ್ತಮ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ: ಮುತ್ತೂಟ್ ಫೈನಾನ್ಸ್ ಲಿ

ಇದನ್ನೂ ಓದಿ: ಅತ್ಯಾಧುನಿಕ ಐವಾರ್ನ್, ಸ್ಮಾರ್ಟ್​ಫಾಗ್ ಸೆಕ್ಯೂರಿಟಿ ವ್ಯವಸ್ಥೆ ರೂಪಿಸಿರುವ ಗೋದ್ರೇಜ್​ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್

ಇಂಡಿಯನ್ ಫ್ಯಾಮಿಲಿ ಬಿಸಿನೆಸ್ ಪ್ರಶಸ್ತಿ: ಫಿಲಾಂಥ್ರೋಪಿ ವಿಭಾಗ

ಧೋಲಾಕಿಯಾ ಫೌಂಡೇಶನ್​ಗೆ ಪ್ರಶಸ್ತಿ

ತೀರ್ಪುಗಾರರ ವಿಶೇಷ ಪ್ರಶಸ್ತಿ

ಮೋಸ್ಟ್ ಎಂಡ್ಯೂರಿಂಗ್ ಬಿಸಿನೆಸ್ (ಅತ್ಯಂತ ತಾಳಿಕೆಯ ಉದ್ದಿಮೆ ಪ್ರಶಸ್ತಿ): ಗುಜರಾತ್ ಟೀ ಪ್ರೋಸಸರ್ಸ್ ಅಂಡ್ ಪ್ಯಾಕರ್ಸ್ ಲಿ

ಎಡಿಟೋರಿಯಲ್ ಸ್ಪೆಷಲ್ ಪ್ರಶಸ್ತಿಗಳು

ಎಮರ್ಜಿಂಗ್ ವುಮೆನ್ ಬಿಸಿನೆಸ್ ಲೀಡರ್ ಪ್ರಶಸ್ತಿ: ರೋಷನಿ ನಾದರ್ ಮಲ್ಹೋತ್ರಾ, ಎಚ್​ಸಿಎಲ್ ಟೆಕ್ಲಾಲಜೀಸ್

ನೆಕ್ಸ್ಟ್ ಜನವರೇಶನ್ ಲೀಡರ್ ಅವಾರ್ಡ್: ಟಿವಿಎಸ್ ಮೋಟಾರ್ ಕಂಪನಿಯ ಸುದರ್ಶನ್ ವೇಣು

ಲೈಫ್​ಟೈಮ್ ಅಚೀವ್​ಮೆಂಟ್ ಅವಾರ್ಡ್: ದಿಲೀಪ್ ಶಾಂಘವಿ, ಸನ್ ಫಾರ್ಮಸ್ಯೂಟಿಕಲ್ಸ್​ನ ಸಂಸ್ಥಾಪಕರು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ