Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಆರ್ಥಿಕತೆ ಮಾದರಿ ಮತ್ತೆ ಕೆಲಸ ಮಾಡಲು ಸಾಧ್ಯ ಇಲ್ಲ: ಹಿರಿಯ ಹೂಡಿಕೆದಾರನ ಅನಿಸಿಕೆ

China Economic Model: ಚೀನಾ ಆರ್ಥಿಕವಾಗಿ ಸಂಕಷ್ಟಗಳ ಮೇಲೆ ಸಂಕಷ್ಟ ಅನುಭವಿಸುತ್ತಿದೆ. ಹಣದುಬ್ಬರ ಕುಸಿತ, ನಿರುದ್ಯೋಗಿ, ಉದ್ಯಮಪತನ ಇತ್ಯಾದಿ ಸಮಸ್ಯೆಗಳು ಚೀನಾವನ್ನು ಬಾಧಿಸುತ್ತಿವೆ. ಈ ಸಂದರ್ಭದಲ್ಲಿ ಚೀನಾದ ಎಕನಾಮಿಕ್ ಮಾಡಲ್ ಮತ್ತೆ ಕೆಲಸ ಮಾಡೋದಿಲ್ಲ ಎಂದು ಹಿರಿಯ ಹೂಡಿಕೆದಾರರೊಬ್ಬರು ಹೇಳಿದ್ದಾರೆ.

ಚೀನಾದ ಆರ್ಥಿಕತೆ ಮಾದರಿ ಮತ್ತೆ ಕೆಲಸ ಮಾಡಲು ಸಾಧ್ಯ ಇಲ್ಲ: ಹಿರಿಯ ಹೂಡಿಕೆದಾರನ ಅನಿಸಿಕೆ
ಚೀನಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2023 | 5:01 PM

ನವದೆಹಲಿ, ಆಗಸ್ಟ್ 20: ಅಮೆರಿಕವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಕಳೆದ ಕೆಲ ದಶಕಗಳಿಂದ ಗಣನೀಯ ಆರ್ಥಿಕ ವೃದ್ಧಿ ಕಾಣುತ್ತಾ ಬಂದಿದ್ದ ಚೀನಾ ಕಳೆದ ಎರಡು ವರ್ಷಗಳಿಂದ ಬೆಳವಣಿಗೆ ವಿಚಾರದಲ್ಲಿ ಪರದಾಡುತ್ತಿದೆ. ಸಂಕಷ್ಟಗಳ ಮೇಲೆ ಸಂಕಷ್ಟಗಳು ಚೀನಾವನ್ನು ಕಿತ್ತುತಿನ್ನತೊಡಗಿವೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿದ ಚೀನಾದಲ್ಲಿ ನಿರುದ್ಯೋಗ ಸಿಕ್ಕಾಪಟ್ಟೆ ಇದೆ. ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ದಿಮೆಗಳು ನೆಲಕಚ್ಚಿವೆ. ಚೀನಾದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಪಾಶ್ಚಿಮಾತ್ಯ ಸಂಸ್ಥೆಗಳು ಪರ್ಯಾಯ ದೇಶಗಳತ್ತ ಮುಖ ಮಾಡುತ್ತಿವೆ. ಇದೆಲ್ಲದರ ಮಧ್ಯೆ ಹೆಸರಾಂತ ಹೂಡಿಕೆದಾರ ಡೇವಿಡ್ ರೋಚೆ ಅವರು ಚೀನಾದ ಆರ್ಥಿಕ ಮಾದರಿ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ದಾರೆ.

‘ಚೀನಾದ ಆರ್ಥಿಕ ಮಾದರಿಯು ಸವೆದುಹೋಗಿದ್ದು (Washed on the beach), ಸಾಕಷ್ಟು ದೋಷಗಳನ್ನು ಒಳಗೊಂಡಿದೆ. ಅದು ಮತ್ತೆ ಚೇತರಿಸಿಕೊಳ್ಳುತ್ತದೆ ಎನ್ನಲು ಸಾಧ್ಯ ಇಲ್ಲ’ ಎಂದು ಇಂಡಿಪೆಂಡೆಂಟ್ ಸ್ಟ್ರಾಟಿಜಿ ಸಂಸ್ಥೆಯ ಅಧ್ಯಕ್ಷರೂ ಆದ ಡೇವಿಡ್ ರೋಚೆ ಹೇಳಿದ್ದಾರೆ.

ಇದನ್ನೂ ಓದಿ: Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್​ಗೆ ಪ್ರಶಸ್ತಿ

ಚೀನಾದಲ್ಲಿ ಹಣದುಬ್ಬರ ಶೂನ್ಯಕ್ಕಿಂತ ಕೆಳಗೆ ಕುಸಿದಿದೆ. ಅಂದರೆ ಡೀಫ್ಲೇಶನ್ ಸ್ಥಿತಿಗೆ ಚೀನಾ ಬಂದಿದೆ. ಜುಲೈ ತಿಂಗಳಲ್ಲಿ ಚೀನಾದಲ್ಲಿ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಶೇ. 0.3ರಷ್ಟು ಡೀಫ್ಲೇಶನ್ ಕಂಡಿದೆ. ಚೀನಾದ ಯುಆನ್ ಕರೆನ್ಸಿ ಡಾಲರ್ ಎದುರು ಕುಸಿತ ಕಾಣುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ಈಗ ಆರ್ಥಿಕತೆಗೆ ಪುಷ್ಟಿ ಕೊಡಬೇಕೋ ಅಥವಾ ಕರೆನ್ಸಿಗೆ ಚೇತರಿಕೆ ಕೊಡಬೇಕೋ ಎಂಬ ಗೊಂದಲಕ್ಕೆ ಸಿಲುಕಿದೆ. ಆಗಸ್ಟ್ 15ರಂದು ಬಡ್ಡಿದರ ಕಡಿತ ಮಾಡಿ ಅಚ್ಚರಿ ಹುಟ್ಟಿಸಿತು.

‘ಕೆಟ್ಟ ಸಾಲಗಳು ಮತ್ತು ಕೆಟ್ಟ ಆಸ್ತಿಗಳನ್ನು ಸಮರ್ಪಕವಾಗಿ ತೊಡೆದುಕೊಳ್ಳಲು ಅವರಿಗೆ ಸರಿಯಾದ ಮಾರ್ಗ ಇಲ್ಲ. ಅದೇ ಹೊತ್ತಿನಲ್ಲಿ ಅವರ ಸಾಂಪ್ರದಾಯಿಕ ಬೆಳವಣಿಗೆ ಮಾಪನಗಳ ಮೇಲೆ ಅವಲಂಬಿರಾಗಲೂ ಅವರಿಗೆ ಸಾಧ್ಯ ಇಲ್ಲ. ಅದು ಈಗ ದೊಡ್ಡ ಸಮಸ್ಯೆ ಆಗಿರುವುದು’ ಎಂದು ಡೇವಿಡ್ ರೋಚೆ ಹೇಳಿದ್ದಾರೆ.

ಇದನ್ನೂ ಓದಿ: ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮೊದಲ ಬಾರಿಗೆ ಉಚಿತ ನೆಟ್​ಫ್ಲಿಕ್ಸ್ ಸಬ್ಸ್​ಕ್ರಿಪ್ಷನ್; ರಿಲಾಯನ್ಸ್ ಜಿಯೋದಲ್ಲಿ ಭರ್ಜರಿ ಆಫರ್

ಚೀನಾದ ಬಹುತೇಕ ಸಮಸ್ಯೆಗಳಿಗೆ ಅದರ ರಿಯಲ್ ಎಸ್ಟೇಟ್ ಉದ್ಯಮದ ಕೊಂಡಿ ಇದೆ. ಚೀನಾದ ಐದನೇ ಒಂದು ಭಾಗದ ಆರ್ಥಿಕತೆಗೆ ರಿಯಲ್ ಎಸ್ಟೇಟ್ ಕಾರಣವಾಗಿದೆ. ಆ ಉದ್ಯಮದಲ್ಲಿರುವ ಭಾರೀ ಸಾಲಗಳು ಚೀನಾ ಆರ್ಥಿಕತೆಯನ್ನು ನಲುಗಿಸುತ್ತಿವೆ. ಆದರೆ, ಡೇವಿಡ್ ರೋಚೆ ಇದೇ ವೇಳೆ ಚೀನಾ ಆರ್ಥಿಕ ಅಧಃಪತನದಿಂದ ಜಾಗತಿಕ ಮಾರುಕಟ್ಟೆಗಳಿಗೆ ಸಮಸ್ಯೆಯಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ