ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮೊದಲ ಬಾರಿಗೆ ಉಚಿತ ನೆಟ್​ಫ್ಲಿಕ್ಸ್ ಸಬ್ಸ್​ಕ್ರಿಪ್ಷನ್; ರಿಲಾಯನ್ಸ್ ಜಿಯೋದಲ್ಲಿ ಭರ್ಜರಿ ಆಫರ್

Reliance Jio and Netflix: ರಿಲಾಯನ್ಸ್ ಜಿಯೋ ಮತ್ತು ನೆಟ್​ಫ್ಲಿಕ್ಸ್ ನಡುವಿನ ಒಪ್ಪಂದದ ಭಾಗವಾಗಿ ಜಿಯೋದ ಎರಡು ಪ್ರೀಪೇಯ್ಡ್ ಪ್ಲಾನ್​ಗಳಲ್ಲಿ ಉಚಿತ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಅನ್ನು ಒದಗಿಸಲಾಗಿದೆ. 1,099 ರೂ ಮತ್ತು 1,499 ರೂಗಳ ಈ ಎರಡೂ ಪ್ಲಾನ್​ಗಳು 84 ದಿನಗಳ ವ್ಯಾಲಿಡಿಟಿ ಹೊಂದಿವೆ.

ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮೊದಲ ಬಾರಿಗೆ ಉಚಿತ ನೆಟ್​ಫ್ಲಿಕ್ಸ್ ಸಬ್ಸ್​ಕ್ರಿಪ್ಷನ್; ರಿಲಾಯನ್ಸ್ ಜಿಯೋದಲ್ಲಿ ಭರ್ಜರಿ ಆಫರ್
ರಿಲಾಯನ್ಸ್ ಜಿಯೋ
Follow us
|

Updated on:Aug 20, 2023 | 4:15 PM

ನವದೆಹಲಿ, ಆಗಸ್ಟ್ 20: ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಎರಡು ಪ್ರೀಪೇಡ್ ಪ್ಲಾನ್​ನಲ್ಲಿ ಉಚಿತ ನೆಟ್​ಫ್ಲಿಕ್ಸ್ ಚಂದಾದಾರಿಕೆ ಸೇವೆ (Netflix subscription) ಒದಗಿಸುತ್ತಿದೆ. 1,099 ರೂ ಮತ್ತು 1,499 ರೂ ಪ್ಲಾನ್​ನಲ್ಲಿ ಜಿಯೋ ಬಳಕೆದಾರರು 84 ದಿನಗಳ ಕಾಲ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಕೊಡುತ್ತಿದೆ. ಅತ್ಯಂತ ಜನಪ್ರಿಯ ಎಂಟರ್ಟೈನ್ಮೆಂಟ್ ಒಟಿಟಿಯಾದ ನೆಟ್​ಫ್ಲಿಕ್ಸ್​ನ ಸಬ್​ಸ್ಕ್ರಿಪ್ಷನ್ ಅನ್ನು ಪ್ರೀಪೇಯ್ಡ್ ಗ್ರಾಹಕರಿಗೆ ಒದಗಿಸುತ್ತಿರುವುದು ಇದೇ ಮೊದಲು. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಇದ್ದ ಈ ಸೌಲಭ್ಯ ಪ್ರೀಪೇಯ್ಡ್ ಗ್ರಾಹಕರಿಗೂ ಸಿಕ್ಕಿದೆ. ಈ ನೆಟ್​ಫ್ಲಿಕ್ಸ್ ಆಫರ್ ಮೇಲೆ ತಿಳಿಸಿದ ಎರಡು ಪ್ಲಾನ್​ಗಳಿಂದ ಮಾತ್ರ ಸಿಗುತ್ತಿದೆ. ಅ ಎರಡೂ ಪ್ಲಾನ್​ಗಳು 84 ದಿನಗಳ ವ್ಯಾಲಿಡಿಟಿ ಪೀರಿಯಡ್ ಹೊಂದಿವೆ. ನೆಟ್​ಫ್ಲಿಕ್ಸ್​ನ ಮಾಸಿಕ ಸಬ್ಸ್​ಕ್ರಿಪ್ಷನ್ 149 ರೂ ಇದೆ.

1,099 ರೂ ಜಿಯೋ ಪ್ಲಾನ್

ರಿಲಾಯನ್ಸ್ ಜಿಯೋದ 1,099 ರೂಗಳ ಪ್ರೀಪೇಯ್ಡ್ ಪ್ಲಾನ್ 84 ದಿನಗಳ ಅವಧಿಯದ್ದಾಗಿದ್ದು ಅನ್​ಲಿಮಿಟೆಡ್ 5ಜಿ ಡಾಟಾ ಮತ್ತು ವಾಯ್ಸ್ ಕಾಲ್ ಆಫರ್ ಮಾಡುತ್ತದೆ. ದಿನಕ್ಕೆ 2ಜಿಬಿಯಷ್ಟು ಡಾಟಾ ಬಳಕೆಯ ಅವಕಾಶ ಇರುತ್ತದೆ. ಜೊತೆಗೆ ತಿಂಗಳಿಗೆ 149 ರೂ ಮೌಲ್ಯದ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಒದಗಿಸುತ್ತದೆ.

1,499 ರೂ ಜಿಯೋ ಪ್ಲಾನ್

1,499 ರೂಗಳ ಜಿಯೋ ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮಾಸಿಕ 199 ರೂಗಳ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. 84 ದಿನಗಳ ವ್ಯಾಲಿಡಿಟಿ ಇದ್ದು ದಿನಕ್ಕೆ 3ಜಿಬಿಯಷ್ಟು ಡಾಟಾ ಒದಗಿಸುತ್ತದೆ.

ಇದನ್ನೂ ಓದಿ: Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್​ಗೆ ಪ್ರಶಸ್ತಿ

ನೆಟ್​ಫ್ಲಿಕ್ಸ್ ಮತ್ತು ರಿಲಾಯನ್ಸ್ ಜಿಯೋ ಮಧ್ಯೆ ವ್ಯಾವಹಾರಿಕ ಹೊಂದಾಣಿಕೆ ಆಗಿದ್ದರಿಂದ ಜಿಯೋ ಪ್ರೀಪೇಡ್ ಪ್ಲಾನ್​ನಲ್ಲಿ ನೆಟ್​ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ಕೊಡಲಾಗುತ್ತಿದೆ.

ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಐಪಿಎಲ್ ಸ್ಟಾರ್​ಗಳು
ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಐಪಿಎಲ್ ಸ್ಟಾರ್​ಗಳು
ಹೋಳಿ ಬಣ್ಣದಲ್ಲಿ ಮಿಂದೆದ್ದ ನಟಿ ರಾಗಿಣಿ ದ್ವಿವೇದಿ
ಹೋಳಿ ಬಣ್ಣದಲ್ಲಿ ಮಿಂದೆದ್ದ ನಟಿ ರಾಗಿಣಿ ದ್ವಿವೇದಿ
ಹೋಳಿ ಬಣ್ಣ ಆಡುವ ಮುನ್ನ ನಿಮ್ಮ ಮುಖದ ಕಾಂತಿ ಬಗ್ಗೆ ಎಚ್ಚರಿಕೆ ವಹಿಸಿ
ಹೋಳಿ ಬಣ್ಣ ಆಡುವ ಮುನ್ನ ನಿಮ್ಮ ಮುಖದ ಕಾಂತಿ ಬಗ್ಗೆ ಎಚ್ಚರಿಕೆ ವಹಿಸಿ
ಹೋಳಿ ಆಡಿ ಕೊಳೆಯಾದ ಬಟ್ಟೆಗಳನ್ನು ಹೀಗೆ ಸ್ವಚ್ಛಗೊಳಿಸಿ
ಹೋಳಿ ಆಡಿ ಕೊಳೆಯಾದ ಬಟ್ಟೆಗಳನ್ನು ಹೀಗೆ ಸ್ವಚ್ಛಗೊಳಿಸಿ

‘ನಮ್ಮ ಬಳಕೆದಾರರಿಗೆ ವಿಶ್ವದರ್ಜೆಯ ಸೇವೆಗಳನ್ನು ಕೊಡಲು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರೀಪೇಡ್ ಪ್ಲಾನ್​ನಲ್ಲಿ ನೆಟ್​ಫ್ಲಿಕ್ಸ್ ಆಫರ್ ಮಾಡಿದ್ದೇವೆ’ ಎಂದು ಜಿಯೋ ಪ್ಲಾಟ್​ಫಾರ್ಮ್ಸ್ ಲಿ ಸಂಸ್ಥೆಯ ಸಿಇಒ ಕಿರಣ್ ಥಾಮಸ್ ಹೇಳಿದ್ದಾರೆ.

ಇದನ್ನೂ ಓದಿ: 3 ವರ್ಷಗಳಿಂದ ಮಲ್ಟಿಬ್ಯಾಗರ್ ಆದ ಬಜಾಬ್ ಫೈನಾನ್ಸ್; ಷೇರುಮೌಲ್ಯದ ಜೊತೆಗೆ ಠೇವಣಿಗಳೂ ಅಗಾಧ ಬೆಳವಣಿಗೆ

‘ಹಲವು ವರ್ಷಗಳಲ್ಲಿ ನಾವು ಭಾರತದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಹಲವು ಸ್ಥಳೀಯ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಹಾಗೂ ಚಲನಚಿತ್ರಗಳನ್ನು ನಿರ್ಮಿಸಿದ್ದೇವೆ… ಜಿಯೋದೊಂದಿಗೆ ನಮ್ಮ ಹೊಂದಾಣಿಕೆಯಿಂದಾಗಿ ಹೆಚ್ಚಿನ ಗ್ರಾಹಕರಿಗೆ ನಮ್ಮ ಕಾರ್ಯಕ್ರಮಗಳು ತಲುಪಲು ಸಾಧ್ಯವಾಗುತ್ತದೆ’ ಎಂದು ನೆಟ್​ಫ್ಲಿಕ್ಸ್​ನ ಟೋನಿ ಝಮೆಕೋವಸ್ಕಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sun, 20 August 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್