AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷಗಳಿಂದ ಮಲ್ಟಿಬ್ಯಾಗರ್ ಆದ ಬಜಾಬ್ ಫೈನಾನ್ಸ್; ಷೇರುಮೌಲ್ಯದ ಜೊತೆಗೆ ಠೇವಣಿಗಳೂ ಅಗಾಧ ಬೆಳವಣಿಗೆ

Mulibabger Bajaj Finance Stock: ಬಜಾಜ್ ಫೈನಾನ್ಸ್ ಸಂಸ್ಥೆಯ ಷೇರು ಕಳೆದ 3 ವರ್ಷಗಳಿಂದ ಶೇ. 300ಕ್ಕಿಂತಲೂ ಹೆಚ್ಚು ಮಟ್ಟದಲ್ಲಿ ಬೆಳೆದಿವೆ. ಗ್ರಾಹಕರ ಠೇವಣಿಗಳ ಸಂಖ್ಯೆ ಮತ್ತು ಮೊತ್ತವೂ ಅಗಾಧವಾಗಿ ಬೆಳೆದಿರುವುದು ಅಂಕಿಅಂಶಗಳಿಂದ ತಿಳಿದು ಬರುತ್ತದೆ. 21 ವರ್ಷಗಳ ಹಿಂದೆ ಇದರ ಷೇರು ಮೇಲೆ ಯಾರಾದರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 15 ಲಕ್ಷ ರೂ ಸಮೀಪ ಇರುತ್ತಿತ್ತು.

3 ವರ್ಷಗಳಿಂದ ಮಲ್ಟಿಬ್ಯಾಗರ್ ಆದ ಬಜಾಬ್ ಫೈನಾನ್ಸ್; ಷೇರುಮೌಲ್ಯದ ಜೊತೆಗೆ ಠೇವಣಿಗಳೂ ಅಗಾಧ ಬೆಳವಣಿಗೆ
ಬಜಾಜ್ ಫಿನ್​ಸರ್ವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2023 | 12:29 PM

ಷೇರುಮಾರುಕಟ್ಟೆಯಲ್ಲಿ ಮಿರಮಿರ ಮಿಂಚುತ್ತಿರುವ ಸ್ಟಾಕ್​ಗಳಲ್ಲಿ ಬಜಾಜ್ ಫೈನಾನ್ಸ್ (Bajaj FinServ) ಒಂದು. ಸಾಕಷ್ಟು ಆರ್ಥಿಕ ಆರೋಗ್ಯದ ಜೊತೆಗೆ ಬಜಾಜ್ ಫೈನಾನ್ಸ್​ನ ಷೇರೂ ಕೂಡ ಭರ್ಜರಿಯಾಗಿ ಬೆಳೆಯುತ್ತದೆ. ಕಳೆದ 3 ವರ್ಷಗಳಿಂದ ಈ ಖಾಸಗಿ ಹಣಕಾಸು ಸಂಸ್ಥೆ ಮಲ್ಟಿಬ್ಯಾಗರ್ ಸ್ಟಾಕ್ (Multibagger Stock) ಆಗಿ ಪರಿಣಮಿಸಿದೆ. 2020ರ ಮೇ 22ರಂದು 1,895 ರೂ ಬೆಲೆ ಇದ್ದ ಬಜಾಜ್ ಫೈನಾನ್ಸ್​ನ ಷೇರುಬೆಲೆ ಇದೀಗ 6,850 ರೂಪಾಯಿಗೆ ಬೆಳೆದಿದೆ. 3 ವರ್ಷದಲ್ಲಿ ಶೇ. 300ಕ್ಕಿಂತಲೂ ಹೆಚ್ಚು ಬೆಳೆದಿದೆ. 21 ವರ್ಷಗಳ ಹಿಂದೆ 4.61 ರೂ ಇದ್ದ ಅದರ ಷೇರುಬೆಲೆ 1,500 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ.

2002ರ ಆಗಸ್ಟ್ 23ರಂದು ಯಾರಾದರೂ ಕೂಡ ಬಜಾಜ್ ಫೈನಾನ್ಸ್ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಸಂಪತ್ತು 14.85 ಲಕ್ಷ ರೂ ಆಗುತ್ತಿತ್ತು. ಅದೇ 2020ರ ಮೇ 22ರಂದು 1 ಲಕ್ಷ ರೂ ಹೂಡಿಕೆ ಮಾಡಿದ್ದರೆ, 3 ವರ್ಷದಲ್ಲಿ ಅದು 3.61 ಲಕ್ಷ ರೂ ಆಗುತ್ತಿತ್ತು. ಅಂದರೆ ಪ್ರತೀ ವರ್ಷವೂ ಹಣ ದ್ವಿಗುಣಗೊಳ್ಳುತ್ತಾ ಹೋಗಿದೆ. ಅಂತೆಯೇ ಬಜಾಜ್ ಫೈನಾನ್ಸ್ ಸಂಸ್ಥೆಯ ಷೇರು ಕಳೆದ 3 ವರ್ಷಗಳಿಂದ ಅಕ್ಷರಶಃ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿರುವುದು ಗಮನಾರ್ಹ.

ಡೆಪಾಸಿಟ್​ಗಳಲ್ಲೂ ಬಜಾಜ್ ಫೈನಾನ್ಸ್ ಸೈ

ಬಜಾಜ್ ಫೈನಾನ್ಸ್ ತನ್ನ ಸ್ಥಿರ ಠೇವಣಿಗಳ (Fixed Deposit) ವಿಭಾಗದಲ್ಲೂ ಬಹಳ ತ್ವರಿತ ಬೆಳವಣಿಗೆಯನ್ನು ಕಂಡಿದೆ. ಕಳೆದ 8-9 ವರ್ಷದಲ್ಲಿ ಶೇ. 60ರ ಸಿಎಜಿಆರ್ ದರದಲ್ಲಿ ಅದರ ಠೇವಣಿಗಳು ಬೆಳೆದಿವೆ. ಬಹಳ ಕಡಿಮೆ ಅವಧಿಯಲ್ಲಿ ಬಜಾಜ್ ಫೈನಾನ್ಸ್​ನಲ್ಲಿ ಠೇವಣಿಗಳ ಪ್ರಮಾಣ 50,000 ಕೋಟಿ ರೂ ತಲುಪಿದೆ. ಬಜಾಜ್ ಫೈನಾನ್ಸ್ ಸಂಸ್ಥೆಯಲ್ಲಿ 5 ಲಕ್ಷ ಮಂದಿ ಠೇವಣಿದಾರರು, 14 ಲಕ್ಷ ಠೇವಣಿಗಳು ಸ್ಥಾಪನೆಯಾಗಿವೆ. ಅನ್​ಕ್ಲೈಮ್ಡ್ ಡೆಪಾಸಿಟ್​ಗಳೂ ಬಹಳ ಕಡಿಮೆ ಎನ್ನಲಾಗಿದೆ.

ಇದನ್ನೂ ಓದಿ: ಅತ್ಯಾಧುನಿಕ ಐವಾರ್ನ್, ಸ್ಮಾರ್ಟ್​ಫಾಗ್ ಸೆಕ್ಯೂರಿಟಿ ವ್ಯವಸ್ಥೆ ರೂಪಿಸಿರುವ ಗೋದ್ರೇಜ್​ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್

ಡೆಪಾಸಿಟ್​ಗಳಿಗೆ ಶೇ. 8.60ರವರೆಗೂ ಬಡ್ಡಿ ಕೊಡುತ್ತದೆ ಬಜಾಜ್ ಫಿನ್​ಸರ್ವ್

ಗ್ರಾಹಕರ ಠೇವಣಿಗಳಿಗೆ ಅತಿಹೆಚ್ಚು ಬಡ್ಡಿ ಕೊಡುವ ಹಣಕಾಸು ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್ ಒಂದು. ಹಿರಿಯ ನಾಗರಿಕರು 44 ತಿಂಗಳ ಅವಧಿಗೆ ಇಲ್ಲಿ ಇರಿಸುವ ಎಫ್​ಡಿಗಳಿಗೆ ಶೇ. 8.60ರಷ್ಟು ವಾರ್ಷಿಕ ಬಡ್ಡಿ ಪಡೆಯುತ್ತಾರೆ. ಇನ್ನು, ಸಾಮಾನ್ಯ ಗ್ರಾಹಕರಾದರೆ 36ರಿಂದ 60 ತಿಂಗಳ ಅವಧಿ ಠೇವಣಿಗೆ ಶೇ. 8.05ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಒಂದು ವರ್ಷದ ಠೇವಣಿಗೆ ಶೇ. 7.40ರಷ್ಟು ಬಡ್ಡಿ ಸಿಗುತ್ತದೆ. 2 ವರ್ಷವಾದರೆ ಶೇ. 7.55ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್

ಆನ್​ಲೈನ್ ಮೂಲಕ ಹೆಚ್ಚಿನ ಸೇವೆ ಒದಗಿಸುವ ಬಜಾಜ್ ಫೈನಾನ್ಸ್​ನಲ್ಲಿ ಇರುವ ಠೇವಣಿಗಳ ಪೈಕಿ ಶೇ. 40ರಿಂದ 50ರಷ್ಟು ಠೇವಣಿಗಳು ಆನ್​ಲೈನ್ ಮೂಲಕವೇ ರಚಿತವಾಗಿವೆ. ಇದರ ಆ್ಯಪ್ ಅನ್ನು 4 ಕೋಟಿಗೂ ಹೆಚ್ಚು ಮಂದಿ ಬಳಸುತ್ತಾರೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್