ಅತ್ಯಾಧುನಿಕ ಐವಾರ್ನ್, ಸ್ಮಾರ್ಟ್​ಫಾಗ್ ಸೆಕ್ಯೂರಿಟಿ ವ್ಯವಸ್ಥೆ ರೂಪಿಸಿರುವ ಗೋದ್ರೇಜ್​ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್

Godrej Security Gets Central Vista Project: ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಸ್ಥೆ 100 ರೂಗೆ ಸೆಂಟ್ರಲ್ ವಿಸ್ಟಾ ಭದ್ರತಾ ವ್ಯವಸ್ಥೆಯ ಯೋಜನೆಯ ಪಡೆದಿದೆ. ಐ ವಾರ್ನ್ ಸೆನ್ಸಾರ್, ಸ್ಮಾರ್ಟ್ ಫಾಗ್ ಇತ್ಯಾದಿ ಅತ್ಯಾಧುನಿಕ ಸೆಕ್ಯೂರಿಟಿ ವ್ಯವಸ್ಥೆ ಹೊಂದಿರುವ ಗೋದ್ರೇಜ್​ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಬಹಳ ಮಹತ್ವದ್ದಾಗಿದೆ.

ಅತ್ಯಾಧುನಿಕ ಐವಾರ್ನ್, ಸ್ಮಾರ್ಟ್​ಫಾಗ್ ಸೆಕ್ಯೂರಿಟಿ ವ್ಯವಸ್ಥೆ ರೂಪಿಸಿರುವ ಗೋದ್ರೇಜ್​ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್
ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 20, 2023 | 11:12 AM

ನವದೆಹಲಿ, ಆಗಸ್ಟ್ 20: ದೇಶದ ಅತ್ಯಂತ ಹಳೆಯ ಬೀಗದ ಕಂಪನಿ ಎನಿಸಿರುವ ಮತ್ತು ಅತ್ಯಾಧುನಿಕ ಕಟ್ಟಡ ಭದ್ರತಾ ವ್ಯವಸ್ಥೆ ಹೊಂದಿರುವ ಗೋದ್ರೇಜ್ ಸೆಕ್ಯೂರಿಟಿ ಸಿಸ್ಟಮ್ಸ್ ಸಂಸ್ಥೆಗೆ (Godrej Security Solutions) ಬಹಳ ಮಹತ್ವವಾದ ಸೆಂಟ್ರಲ್ ವಿಸ್ಟಾ ಯೋಜನೆ ಸಿಕ್ಕಿದೆ. ಹೊಸ ಸಂಸತ್ ಸೇರಿದಂತೆ ಕೇಂದ್ರ ಸರ್ಕಾರಿ ಯಂತ್ರಗಳ ಕಚೇರಿ ಸಮೂಹ ಇರುವ ಸೆಂಟ್ರಲ್ ವಿಸ್ಟಾಗೆ ಭದ್ರತಾ ವ್ಯವಸ್ಥೆ ಒದಗಿಸುವ ಯೋಜನೆ ಇದಾಗಿದೆ. 100 ಕೋಟಿ ರೂನ ಪ್ರಾಜೆಕ್ಟ್ ಇದಾದರೂ ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಸ್ಥೆಗೆ ಈ ಡೀಲ್ ಬಹಳ ಮಹತ್ವದ್ದು. ಅದರ ಆದಾಯ ಗಣನೀಯವಾಗಿ ಹೆಚ್ಚಲು ಸೆಂಟ್ರಲ್ ವಿಸ್ತಾ ಪುಷ್ಟಿ ಕೊಡುವ ನಿರೀಕ್ಷೆಯಲ್ಲಿ ಗೋದ್ರೇಜ್ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ 850 ಕೋಟಿ ರೂ ಆದಾಯ ಹೊಂದಿದ್ದ ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್​ಗೆ ಈ ವರ್ಷದಲ್ಲಿ ಆದಾಯ 1,000 ಕೋಟಿ ರೂ ಮುಟ್ಟಬಹುದು ಎಂದು ಎಣಿಸಿದೆ.

ನೂರಕ್ಕೂ ಹೆಚ್ಚು ವರ್ಷಗಳಿಂದ ಲಾಕರ್ಸ್, ಡೋರ್ ಲಾಕ್ ಇತ್ಯಾದಿ ಸಾಂಪ್ರದಾಯಿಕ ಬೀಗ ಮತ್ತು ಕೀಲಿಗಳನ್ನು ತಯಾರಿಸುತ್ತಿದ್ದ ಗೋದ್ರೇಜ್ ಸೆಕ್ಯೂರಿಟಿ ಸಂಸ್ಥೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರ ಡಿಜಿಟಲ್ ಸೆಕ್ಯೂರಿಟಿ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು 12,000 ಕೋಟಿ ರೂ ದೈತ್ಯ ಸಂಸ್ಥೆಯಾಗಿ ಬೆಳೆದಿದೆ.

ತಾಜ್ ಮಹಲ್, ಕುತುಬ್ ಮಿನಾರ್, ಅಜಂತಾ ಎಲ್ಲೋರಾ ಗುಹೆ ಇತ್ಯಾದಿ ಐತಿಹಾಸಿಕ ಸ್ಥಳಗಳ ಭದ್ರತಾ ವ್ಯವಸ್ಥೆಯ ಪ್ರಾಜೆಕ್ಟ್ ಸಿಕ್ಕಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಮುತ್ತೂಟ್ ಫೈನಾನ್ಸ್ ಇತ್ಯಾದಿ ಹಣಕಾಸು ಸಂಸ್ಥೆಗಳೂ ಕೂಡ ಗೋದ್ರೇಜ್ ಸಿಸ್ಟಮ್ಸ್ ಅನ್ನು ಅಳವಡಿಸಿಕೊಂಡಿವೆ. ಇಸ್ರೋದ ಪ್ರಯೋಗ ಅಂಗಳವಾದ ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ಸುಧಾರಿತ ಕೀ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಒದಗಿಸುವ ಒಪ್ಪಂದ ಗೋದ್ರೇಜ್​ಗೆ ಸಿಕ್ಕಿದೆ.

ಇದನ್ನೂ ಓದಿ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್

ಗೋದ್ರೇಜ್ ಸ್ಮಾರ್ಟ್​ಫಾಗ್, ಐ ವಾರ್ನ್ ಸೆನ್ಸರ್ ಇತ್ಯಾದಿ ಅತ್ಯಾಧುನಿಕ ಸೆಕ್ಯೂರಿಟಿ ಸಿಸ್ಟಮ್ಸ್

ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಶೋಧನೆಗೆ ಸಾಕಷ್ಟು ಒತ್ತುಕೊಟ್ಟ ಪರಿಣಾಮ ಅತ್ಯಾಧುನಿಕ ಸೆಕ್ಯೂರಿಟಿ ಸಿಸ್ಟಮ್ಸ್ ರೂಪಿಸಲು ಸಾಧ್ಯವಾಗಿದೆ. ಫೇಸ್ ರೆಕಗ್ನಿಶನ್ ಡಿವೈಸ್, ಸ್ಮಾರ್ಟ್​ಫಾಗ್, ಐ ವಾರ್ನ್ ಸೆನ್ಸರ್ ಇರುವ ಮ್ಯಾಟ್ರಿಕ್ಸ್ ಲಾಕರ್, ಆ್ಯಕುಗೋಲ್ಡ್ ಇತ್ಯಾದಿ ಬಹಳಷ್ಟು ಸೆಕ್ಯೂರಿಟಿ ಉತ್ಪನ್ನಗಳನ್ನು ಗೋದ್ರೇಜ್ ಹೊಂದಿದೆ. ಸೆಂಟ್ರಲ್ ವಿಸ್ಟಾದಲ್ಲಿ ಅತ್ಯುಚ್ಚ ಭದ್ರತಾ ವ್ಯವಸ್ಥೆ ರೂಪಿಸಲು ಗೋದ್ರೇಜ್ ಕಟಿಬದ್ಧವಾಗಿದೆ. ಈ ಯೋಜನೆಯ ಬಳಿಕ ಕಂಪನಿಯ ವ್ಯವಹಾರ ಇನ್ನಷ್ಟು ಏರುವ ನಿರೀಕ್ಷೆಯಲ್ಲಿ ಅದು ಇದೆ.

ಇದನ್ನೂ ಓದಿ: Most Expensive City: ಮನೆ ಖರೀದಿಗೆ ಮುಂಬೈ ದುಬಾರಿ, ಅಹ್ಮದಾಬಾದ್ ಅಗ್ಗ; ನೈಟ್ ಫ್ರಾಂಕ್ ಪಟ್ಟಿಯಲ್ಲಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?

ಕಳ್ಳರ ದಿಕ್ಕೆಡಿಸುವ ಸ್ಮಾರ್ಟ್​ಫಾಗ್ ಟೆಕ್ನಾಲಜಿ

ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಸ್ಥೆಯ ಪ್ರಮುಖ ಉತ್ಪನ್ನಗಳಲ್ಲಿ ಸ್ಮಾರ್ಟ್​ಫಾಗ್ ಒಂದು. ಇದು ಯಾರಾದರೂ ಕಳ್ಳತನ ಮಾಡಲು ಬಂದಾಗ ನಿಖರವಾಗಿ ಗುರುತಿಸುತ್ತದೆ. ಕೇವಲ ಅಲಾರ್ಮ್ ಕೊಡುವುದಕ್ಕೆ ಮಾತ್ರ ಇದು ಸೀಮಿತವಾಗುವುದಿಲ್ಲ. ಕಳ್ಳತನ ಮಾಡಲು ಯಾರಾದರೂ ಯತ್ನಿಸುತ್ತಿರುವುದು ಗೊತ್ತಾಗುತ್ತಲೇ ಸ್ಮಾರ್ಟ್​ಫಾಗ್ ವ್ಯವಸ್ಥೆ ಸಕ್ರಿಯಗೊಂಡು, ಆ ಸ್ಥಳದಲ್ಲಿ ದಟ್ಟಹೊಗೆ ಕಾರುತ್ತದೆ. ಇದರಿಂದ ಕಳ್ಳ ಅಥವಾ ಕಳ್ಳರಿಗೆ ಯಾವುದೂ ಗೋಚರಿಸುವುದಿಲ್ಲ. ಅಲ್ಲಿಂದ ಮುಂದೆ ಅವರು ಕಳ್ಳತನ ಮಾಡುವುದು ಇರಲಿ, ಪಲಾಯನ ಮಾಡಲೂ ಕಷ್ಟವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Sun, 20 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್