Most Expensive City: ಮನೆ ಖರೀದಿಗೆ ಮುಂಬೈ ದುಬಾರಿ, ಅಹ್ಮದಾಬಾದ್ ಅಗ್ಗ; ನೈಟ್ ಫ್ರಾಂಕ್ ಪಟ್ಟಿಯಲ್ಲಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?

Knight Frank Affordability Index 2023: ಒಂದು ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆ, ಗೃಹಸಾಲ ದರಗಳು ಹಾಗೂ ಜನರ ಸರಾಸರಿ ಆದಾಯ ಇವೆಲ್ಲವನ್ನೂ ಪರಿಗಣಿಸಿ ನೈಟ್ ಫ್ರಾಂಕ್ ಸಂಸ್ಥೆ ಅಫಾರ್ಡಬಿಲಿಟಿ ಇಂಡೆಕ್ಸ್ ಪಟ್ಟಿ ತಯಾರಿಸಿದೆ. ಅದರ ಪ್ರಕಾರ ಮುಂಬೈ ಅತ್ಯಂತ ದುಬಾರಿ ನಗರ ಎನಿಸಿದೆ.

Most Expensive City: ಮನೆ ಖರೀದಿಗೆ ಮುಂಬೈ ದುಬಾರಿ, ಅಹ್ಮದಾಬಾದ್ ಅಗ್ಗ; ನೈಟ್ ಫ್ರಾಂಕ್ ಪಟ್ಟಿಯಲ್ಲಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?
ಮುಂಬೈ
Follow us
| Updated By: Digi Tech Desk

Updated on:Aug 18, 2023 | 12:52 PM

ನವದೆಹಲಿ, ಆಗಸ್ಟ್ 18: ಆರ್​ಬಿಐನ ಬಡ್ಡಿದರ ಏರಿಕೆಯಿಂದ ದೇಶದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ? ನೈಟ್ ಫ್ರಾಂಕ್ (Knight Frank India) ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಬಿಡುಗಡೆ ಮಾಡಿದ ಅಫಾರ್ಡಬಿಲಿಟಿ ಇಂಡೆಕ್ಸ್ ಪಟ್ಟಿಯಲ್ಲಿ (Affordability Index 2023) ವಿವಿಧ ನಗರಗಳಲ್ಲಿ ಗೃಹಸಾಲಗಳ ಏರಿಕೆಯಿಂದ ಮನೆ ಖರೀದಿದಾರರಿಗೆ ಎಂಥ ಪರಿಣಾಮ ಬೀರಿದೆ ಎಂಬುದು ಅನಾವರಣಗೊಂಡಿದೆ. ಆರ್​ಬಿಐನ ಹೆಚ್ಚಿನ ಮಟ್ಟದ ರೆಪೋ ದರದ ಬಳಿಕ ವಿವಿಧ ನಗರಗಳಲ್ಲಿ ಗೃಹ ನಿರ್ಮಾಣ ವಲಯ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಈ ಪಟ್ಟಿ ತೋರ್ಪಡಿಸಿದೆ. ಅದರ ಪ್ರಕಾರ ಮುಂಬೈ ಅತ್ಯಂತ ದುಬಾರಿ ನಗರವೆನಿಸಿದರೆ, ಎಂಟು ಪ್ರಮುಖ ನಗರಗಳ ಪೈಕಿ ಅಹ್ಮದಾಬಾದ್ ಕನಿಷ್ಠ ದುಬಾರಿ ನಗರ ಎನಿಸಿದೆ. ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದ್ದು, ಚೆನ್ನೈಗಿಂತಲೂ ಮೇಲಿದೆ.

ಮನೆ ಆದಾಯ ಮತ್ತು ಗೃಹಸಾಲದ ಕಂತು ನಡುವಿನ ವ್ಯತ್ಯಾಸ

ಮನೆ ಖರೀದಿಸುವವರು ಗೃಹ ಸಾಲ ಪಡೆಯುವುದು ಸಾಮಾನ್ಯ. ಗೃಹಸಾಲಕ್ಕೆ ಬಡ್ಡಿದರ ಅಥವಾ ಇಎಂಐ ಎಷ್ಟಿದೆ, ಜನರ ಸರಾಸರಿ ಆದಾಯ ಎಷ್ಟಿದೆ ಎಂಬುದನ್ನು ತುಲನೆ ಮಾಡಿ ನೈಟ್ ಫ್ರಾಂಕ್ ಸಂಸ್ಥೆ ತನ್ನ ಅಫಾರ್ಡಬಿಲಿಟಿ ಇಂಡೆಕ್ಸ್ ಪಟ್ಟಿ ಪ್ರಕಟಿಸಿದೆ. ಅಂದರೆ ಮನೆ ಖರೀದಿಸಿರುವ ಒಂದು ಕುಟುಂಬದ ಆದಾಯದಲ್ಲಿ ಗೃಹಸಾಲದ ಇಎಂಐ ಪಾಲು ಎಷ್ಟು ಎಂಬುದನ್ನು ಪ್ರತಿಶತ ಲೆಕ್ಕದಲ್ಲಿ ಕೊಡಲಾಗಿದೆ. ಅಂದರೆ, ರಿಯಲ್ ಎಸ್ಟೇಟ್ ಮಾರುಕಟ್ಟೆ ಎಷ್ಟಿದೆ, ಬ್ಯಾಂಕ್ ಬಡ್ಡಿದರ ಎಷ್ಟಿದೆ ಮತ್ತು ನಗರವಾಸಿಗಳ ತಲಾದಾಯ ಎಷ್ಟಿದೆ ಎಂಬುವು ಈ ಇಂಡೆಕ್ಸ್​ನಲ್ಲಿ ತೋರ್ಪಡುತ್ತವೆ.

ಇದನ್ನೂ ಓದಿ: ಸ್ಟಾರ್ಟಪ್ ಮಾತ್ರವಲ್ಲ, ಉದ್ಯೋಗ ಸೃಷ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ ಬೆಂಗಳೂರು; ಅಧ್ಯಯನ ವರದಿ

ಈ ಇಂಡೆಕ್ಸ್​ನಲ್ಲಿ ಮುಂಬೈ ನಗರದಲ್ಲಿ ಜನರ ಆದಾಯದಲ್ಲಿ ಗೃಹಸಾಲದ ಇಎಂಐ ಅನುಪಾತ ಶೇ. 55ರಷ್ಟಿದೆ. ಅಂತೆಯೇ ಮುಂಬೈ ಮನೆಖರೀದಿಸಲು ಅತ್ಯಂತ ದುಬಾರಿ ನಗರ ಎನಿಸಿದೆ. ಅಚ್ಚರಿ ಎಂಬಂತೆ ಮುಂಬೈ ನಂತರದ ಸ್ಥಾನ ಹೈದರಾಬಾದ್​ನದ್ದಾಗಿದೆ. ಹೈದರಾಬಾದ್, ದೆಹಲಿ, ಬೆಂಗಳೂರು ಮತ್ತು ಚೆನ್ನೈ ನಗರಗಳು ಕ್ರಮವಾಗಿ ಶೇ. 31, ಶೇ. 30, ಶೇ. 28, ಶೇ. 28ರಷ್ಟು ಅನುಪಾತ ಹೊಂದಿವೆ. ಎಂಟು ನಗರಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಅಹ್ಮದಾಬಾದ್ ನಗರದಲ್ಲಿ ಇಎಂಐ ಟು ಇನ್ಕಮ್ ರೇಷಿಯೋ ಶೇ. 23 ಮಾತ್ರ ಇದೆ.

ನೈಟ್ ಫ್ರಾಂಕ್ ಅಫಾರ್ಡಬಿಲಿಟಿ ಇಂಡೆಕ್ಸ್​ನಲ್ಲಿ ದುಬಾರಿ ನಗರಗಳು

  1. ಮುಂಬೈ: ಶೇ. 55
  2. ಹೈದರಾಬಾದ್: ಶೇ. 31
  3. ದೆಹಲಿ ಎನ್​ಸಿಆರ್: ಶೇ. 30
  4. ಬೆಂಗಳೂರು: ಶೇ. 28
  5. ಚೆನ್ನೈ: ಶೇ. 28
  6. ಪುಣೆ: ಶೇ. 26
  7. ಕೋಲ್ಕತಾ: ಶೇ. 26
  8. ಅಹ್ಮದಾಬಾದ್: ಶೇ. 23

ಇದನ್ನೂ ಓದಿ: 3D Printed Post Office: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಗೆ ಎಷ್ಟು ವೆಚ್ಚ? ಇದನ್ನು ನಿರ್ಮಾಣ ಹೇಗೆ? ಇಲ್ಲಿದೆ ಡೀಟೇಲ್ಸ್

ದಶಕದ ಹಿಂದೆ ಮುಂಬೈ ಇನ್ನೂ ಬಹಳ ದುಬಾರಿ

2010ರಕ್ಕೆ ಹೋಲಿಸಿದರೆ ನಗರಗಳು ಕಡಿಮೆ ದುಬಾರಿ ಎನಿಸಿವೆ. ರಿಯಲ್ ಎಸ್ಟೇಟ್ ಬೆಲೆಗಳು ಏರುವುದಕ್ಕಿಂತ ವೇಗವಾಗಿ ಜನರ ಆದಾಯ ಹೆಚ್ಚಾಗಿರುವುದು ಕಂಡು ಬಂದಿದೆ. ಗೃಹಸಾಲ ದರ ಮತ್ತು ಆದಾಯ ನಡುವಿನ ಅನುಪಾತದ ವಿಚಾರದಲ್ಲಿ 2010ರಲ್ಲಿ ಮುಂಬೈ ಶೇ. 93ರಷ್ಟು ದುಬಾರಿ ಎನಿಸಿತ್ತು. ಅಂದರೆ ಆಗ ಮುಂಬೈನಲ್ಲಿ ಮನೆ ಖರೀದಿಸಬೇಕಾದರೆ ಜನರು ತಮ್ಮ ಆದಾಯದಲ್ಲಿ ಶೇ. 93ರಷ್ಟು ಹಣವನ್ನು ಇಎಂಐಗೆ ಮೀಸಲಿರಿಸಬೇಕಿತ್ತು. ಅಹ್ಮದಾಬಾದ್ ನಗರ ಶೇ. 46ರಷ್ಟಿತ್ತು. ಬೆಂಗಳೂರು ಶೇ. 48ರಷ್ಟು ದುಬಾರಿ ಎನಿಸಿತ್ತು. ಈಗ ಅದು ಶೇ. 28ಕ್ಕೆ ಇಳಿದಿದೆ.

ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಜನರು ಮನೆ ಖರೀದಿಸಲು ಹೆಚ್ಚು ಕಷ್ಟಪಡಬೇಕಾಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Fri, 18 August 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ