3D Printed Post Office: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಗೆ ಎಷ್ಟು ವೆಚ್ಚ? ಇದನ್ನು ನಿರ್ಮಾಣ ಹೇಗೆ? ಇಲ್ಲಿದೆ ಡೀಟೇಲ್ಸ್

3D Printed Post Office Construction Expense: ಬೆಂಗಳೂರಿನ ಅಲಸೂರಿನ ಬಳಿ ನಿರ್ಮಿಸಲಾಗಿರುವ ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಭಾರತದ ಮೊದಲ 3ಡಿ ಪ್ರಿಂಟೆಡ್ ಸರ್ಕಾರಿ ಕಟ್ಟಡ ಎನಿಸಿದೆ. ಈ ತಂತ್ರಜ್ಞಾನ ಬಳಕೆಯಿಂದ ಕಟ್ಟಡ ನಿರ್ಮಾಣ ವೆಚ್ಚ ಮತ್ತು ಸಮಯ ಎರಡೂ ಬಹಳ ಉಳಿತಾಯವಾಗುತ್ತದೆ.

3D Printed Post Office: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಗೆ ಎಷ್ಟು ವೆಚ್ಚ? ಇದನ್ನು ನಿರ್ಮಾಣ ಹೇಗೆ? ಇಲ್ಲಿದೆ ಡೀಟೇಲ್ಸ್
3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ಕಟ್ಟಡ
Follow us
| Updated By: Digi Tech Desk

Updated on:Aug 18, 2023 | 11:40 AM

ಬೆಂಗಳೂರು, ಆಗಸ್ಟ್ 18: ಅಲಸೂರು ಸಮೀಪದ ಜೋಗುಪಾಳ್ಯದ ಬಳಿ ನಿರ್ಮಿಸಲಾಗಿರುವ ಹೊಸ ಅಂಚೆ ಕಚೇರಿಗೆ 3ಡಿ ಮುದ್ರಿತ ತಂತ್ರಜ್ಞಾನ (3D Printed Building) ಬಳಸಲಾಗಿದೆ. ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ ಸಚಿವ ಅಶ್ವಿನಿ ವೈಷ್ಣವ್ (Union IT Minister Ashwini Vaishnaw) ಅವರು ಇಂದು ಆಗಸ್ಟ್ 18ರಂದು ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಎಂದು ಕರೆಯಲಾಗಿರುವ ಇದು ಭಾರತದ ಮೊದಲ 3ಡಿ ಮುದ್ರಿತ ಸರ್ಕಾರಿ ಕಟ್ಟಡ ಎನಿಸಿದೆ. ಗುಣಮಟ್ಟದ ಕಾಮಗಾರಿಗೆ ಹೆಸರುವಾಸಿಯಾದ ಎಲ್ ಅಂಡ್ ಟಿ (L&T- Larsen and Toubro) ಸಂಸ್ಥೆ ಈ ಕಟ್ಟಡದ ನಿರ್ಮಾಣ ಮಾಡಿದೆ. ವರದಿಗಳ ಪ್ರಕಾರ 1,100 ಚದರಡಿ ಅಂಗಳದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ತೆರಿಗೆ ಸೇರಿ 26 ಲಕ್ಷ ರೂ ವೆಚ್ಚವಾಗಿದೆ. ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ 40 ಲಕ್ಷ ರೂ ವೆಚ್ಚವಾಗಿರುವುದು ತಿಳಿದುಬಂದಿದೆ.

3ಡಿ ಮುದ್ರಿತ ಕಟ್ಟಡ ನಿರ್ಮಾಣ ವೆಚ್ಚ ಬಹಳ ಕಡಿಮೆ

3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ 44 ದಿನ ಮಾತ್ರ ಆಗಿದ್ದು. ಮಾರ್ಚ್ 21ರಂದು ಕಾಮಕಾರಿ ಶುರುವಾಗಿ ಮೇ 3ಕ್ಕೆ ಮುಗಿದಿತ್ತು. ಆದರೆ, ಚರಂಡಿ ಮತ್ತು ನೀರಿನ ವ್ಯವಸ್ಥೆ ಮಾಡಲು ಎರಡು ತಿಂಗಳು ಹಿಡಿದಿದೆ. ಕಟ್ಟಡ ನಿರ್ಮಾಣಕ್ಕೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿರುವುದರಿಂದ ನಿರ್ಮಾಣ ವೆಚ್ಚ ಶೇ. 30ರಿಂದ 40ರಷ್ಟು ಮಿಗುತ್ತದೆ. ವೆಚ್ಚ ಮಾತ್ರವಲ್ಲ, ಸಮಯವೂ ಸಾಕಷ್ಟು ಉಳಿತಾಯವಾಗುತ್ತದೆ.

ಇದನ್ನೂ ಓದಿ: 3D Printed Post Office Building: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ; ಇಂದು ಲೋಕಾರ್ಪಣೆ

ಮೊದಲ 3ಡಿ ಮುದ್ರಿತ ಕಟ್ಟಡವಲ್ಲ…

ಭಾರತದಲ್ಲಿ 3ಡಿ ಪ್ರಿಂಟೆಡ್ ಟೆಕ್ನಾಲಜಿಯಲ್ಲಿ ಕಟ್ಟಡಗಳ ನಿರ್ಮಾಣ ಆಗಿದ್ದಿವೆ. 2020ರಲ್ಲಿ ಎಲ್ ಅಂಡ್ ಟಿ ಮೊದಲ ಬಾರಿಗೆ ಈ ತಂತ್ರಜ್ಞಾನದಲ್ಲಿ ಕಟ್ಟಡ ಕಟ್ಟಿತ್ತು. ಆದರೆ, ಸಾರ್ವಜನಿಕ ಕಟ್ಟಡವೊಂದನ್ನು 3ಡಿ ಪ್ರಿಂಟಿಂಗ್​ನಲ್ಲಿ ತಯಾರಿಸಿದ್ದು ಇದೇ ಮೊದಲು. ಅಂತೆಯೇ, ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಭಾರತದ ಮೊದಲ ಥ್ರೀಡಿ ಮುದ್ರಿತ ಸರ್ಕಾರಿ ಕಟ್ಟಡವೆಂಬ ದಾಖಲೆಗೆ ಬಾಜನವಾಗಿದೆ.

ಹೇಗಿರುತ್ತೆ 3ಡಿ ಪ್ರಿಂಟೆಡ್ ಕಟ್ಟಡ?

ಇದರ ಎಲ್ಲಾ ನಿರ್ಮಾಣ ಕಾರ್ಯವೂ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಎಂಥ ಸಂಕೀರ್ಣ ವಿನ್ಯಾಸದಲ್ಲೂ ಕಟ್ಟಡ ನಿರ್ಮಿಸಲು ಇದರಿಂದ ಸಾಧ್ಯ. ಕ್ಯಾಡ್ ಮಾಡೆಲ್ ಅಥವಾ ಡಿಜಿಟಲ್ 3ಡಿ ಮಾಡಲ್ ರೂಪಿಸಿ ಕಂಪ್ಯೂಟರ್ ನಿರ್ದೇಶನದಲ್ಲಿ ಕಾಂಕ್ರೀಟ್ ಇತ್ಯಾದಿ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ.

ಇದನ್ನೂ ಓದಿ: ಸ್ಟಾರ್ಟಪ್ ಮಾತ್ರವಲ್ಲ, ಉದ್ಯೋಗ ಸೃಷ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ ಬೆಂಗಳೂರು; ಅಧ್ಯಯನ ವರದಿ

ಎಲ್ ಅಂಡ್ ಸಂಸ್ಥೆ ತಮಿಳುನಾಡಿನ ಕಾಂಚಿಪುರಂನಲ್ಲಿ 3ಡಿ ಮುದ್ರಿತ ಕಟ್ಟಡ ನಿರ್ಮಾಣ ಘಟಕ ಹೊಂದಿದೆ. ಪೋಸ್ಟ್ ಆಫೀಸ್ ಕಟ್ಟಡದ ವಿವಿಧ ಭಾಗಗಳನ್ನು ಕಾಂಚಿಪುರಂನಲ್ಲೇ ತಯಾರಿಸಿ, ಬಳಿಕ ಅವುಗಳನ್ನು ಬೆಂಗಳೂರಿಗೆ ತಂದು ಅಸೆಂಬಲ್ ಮಾಡಿ ಅಂತಿಮ ಕಟ್ಟಡ ನಿರ್ಮಿಸಲಾಗಿದೆ.

ಕೈಯಿಂದ ನಿರ್ಮಿಸಲು ಕಷ್ಟವಾದ ಆಕಾರವನ್ನು 3ಡಿ ಪ್ರಿಂಟಿಂಗ್ ಮೂಲಕ ಸುಲಭವಾಗಿ ಮಾಡಬಹುದು. ಬೇರೆ ಬೇರೆ ದೇಶಗಳಲ್ಲಿ ಹಲವೆಡೆ ಈ ರೀತಿ ತ್ರೀಡಿ ಮುದ್ರಿತ ಹಲವು ಕಟ್ಟಡಗಳ ನಿರ್ಮಾಣವಾಗಿದೆ. ಮಂಗಳ ಇತ್ಯಾದಿ ಅನ್ಯ ಗ್ರಹಗಳನ್ನು ಮನುಷ್ಯ ವಸಾಹತು ಸ್ಥಾಪಿಸುವುದಾದರೆ ಅಲ್ಲಿ ವಾಸಸ್ಥಳ ನಿರ್ಮಾಣಕ್ಕೆ 3ಡಿ ಪ್ರಿಂಟೆಡ್ ಟೆಕ್ನಾಲಜಿ ಬಳಕೆ ಮಾಡುವ ಆಲೋಚನೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Fri, 18 August 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್