AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Donald Trump: ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದ್ರೂ ಶೇ. 25 ಸುಂಕ: ಆ್ಯಪಲ್​​ಗೆ ಟ್ರಂಪ್ ಬೆದರಿಕೆ

US President threatens Apple with 25pc tariffs on iPhone imports: ಅಮೆರಿಕದಿಂದ ಹೊರಗೆ ತಯಾರಿಸುವ ಐಫೋನ್ ಮೇಲೆ ಶೇ. 25ರಷ್ಟು ಆಮದು ಸುಂಕ ಹಾಕುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷರು ಮಾಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದರೂ ಸುಂಕ ಹಾಕಲಾಗುವುದು ಎಂದು ತಾನು ಆ್ಯಪಲ್ ಕಂಪನಿಗೆ ಈ ಹಿಂದೆಯೂ ಹೇಳಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

Donald Trump: ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದ್ರೂ ಶೇ. 25 ಸುಂಕ: ಆ್ಯಪಲ್​​ಗೆ ಟ್ರಂಪ್ ಬೆದರಿಕೆ
ಅಮೆರಿಕ ಅಧ್ಯಕ್ಷ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2025 | 6:28 PM

Share

ವಾಷಿಂಗ್ಟನ್, ಮೇ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಟ್ಯಾರಿಫ್ ಗುಮ್ಮ ಮತ್ತೆ ಎರಗಿ ಬಂದಿದೆ. ಈ ಬಾರಿ ಅಮೆರಿಕದ ಕಂಪನಿಯತ್ತ ಈ ಗುಮ್ಮ ನುಗ್ಗಿದೆ. ಭಾರತದಲ್ಲಿ ತಯಾರಿಸಲಾದ ಆ್ಯಪಲ್ ಫೋನ್​​ಗಳ ಮೇಲೆ ಶೇ. 25ರಷ್ಟು ತೆರಿಗೆ (tariffs) ಹಾಕುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ತಯಾರಿಸಿದರೂ 25 ಪ್ರತಿಶತದಷ್ಟು ಆಮದು ಸುಂಕ ಕಟ್ಟಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರು ಬೆದರಿಸಿದ್ದಾರೆ. ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್​​ಫಾರ್ಮ್​​ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಎಕ್ಸ್​​ನಲ್ಲೂ ಟ್ರಂಪ್ ಈ ವಿಚಾರ ಪ್ರಕಟಿಸಿದ್ದಾರೆ.

‘ಅಮೆರಿಕದಲ್ಲಿ ಮಾರಾಟವಾಗುವ ಐಫೋನ್​​ಗಳು ಅಮೆರಿಕದಲ್ಲೇ ತಯಾರಾಗಬೇಕು. ಭಾರತದಲ್ಲಾಗಲೀ ಮತ್ತೆಲ್ಲಿಯಾಗಲೀ ಅದು ತಯಾರಾಗಿದ್ದರೆ ಆ್ಯಪಲ್ ಕಂಪನಿಯು ಅಮೆರಿಕಕ್ಕೆ ಕನಿಷ್ಠ ಶೇ. 25ರಷ್ಟು ಟ್ಯಾರಿಫ್ ಕಟ್ಟಬೇಕಾಗುತ್ತದೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪೋಸ್ಟ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಕ್ಕೆ ಆರ್​​ಬಿಐನಿಂದ 2.70 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಸಾರ್ವಕಾಲಿಕ ಗರಿಷ್ಠ ಮೊತ್ತ

ಈ ಹಿಂದೆಯೂ ಅಮೆರಿಕ ಅಧ್ಯಕ್ಷರು ಆ್ಯಪಲ್​​ನ ಐಫೋನ್ ವಿಚಾರವಾಗಿ ತಮ್ಮ ಈ ನಿಲುವನ್ನು ಅನೇಕ ಬಾರಿ ಜಾಹೀರುಗೊಳಿಸಿದ್ದಿದೆ. ಹೀಗಾಗಿ, ಅವರ ಈ ಹೇಳಿಕೆ ಅನಿರೀಕ್ಷಿತವಲ್ಲ. ಆದಾಗ್ಯೂ ಕೂಡ ಆ್ಯಪಲ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ಅಚಲ ನಿಲುವನ್ನು ಮುಂದುವರಿಸಿದೆ.

ಆ್ಯಪಲ್ ಕಂಪನಿಯ ಅತಿ ಜನಪ್ರಿಯ ಉತ್ಪನ್ನಗಳಲ್ಲಿ ಐಫೋನ್ ಮೊದಲು ಬರುತ್ತದೆ. ಅಮೆರಿಕದಲ್ಲಿ ಒಂದು ವರ್ಷದಲ್ಲಿ ಆರು ಕೋಟಿ ಐಫೋನ್​​ಗಳನ್ನು ಮಾರಲಾಗುತ್ತದೆ. ಇದರಲ್ಲಿ ಶೇ. 80ರಷ್ಟು ಫೋನ್​​ಗಳು ಚೀನಾದಲ್ಲಿ ನಿರ್ಮಾಣ ಆಗುತ್ತಿವೆ. ಭಾರತದಲ್ಲಿ ಇತ್ತೀಚೆಗೆ ಐಫೋನ್ ತಯಾರಿಕೆ ಹೆಚ್ಚಿಸಲಾಗುತ್ತಿದೆ. ಹೆಚ್ಚಿನ ಮೇಡ್ ಇನ್ ಇಂಡಿಯಾ ಐಫೋನ್​​​ಗಳನ್ನು ಅಮೆರಿಕದ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ.

ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಬೆಳೆಯಬೇಕು, ಉದ್ಯೋಗ ಸೃಷ್ಟಿ ಅಧಿಕ ಆಗಬೇಕು. ಇದು ಡೊನಾಲ್ಡ್ ಟ್ರಂಪ್ ಅವರ ಉದ್ದೇಶ. ಈ ನಿಟ್ಟಿನಲ್ಲಿ ಅವರು ಐಫೋನ್ ತಯಾರಿಕೆಯನ್ನು ಅಮೆರಿಕಕ್ಕೆ ತರಲು ಹರಸಾಹಸ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ಫೋನ್ ತಯಾರಿಸುವುದಾದರೆ ಕಾರ್ಮಿಕ ವೆಚ್ಚ ಅಧಿಕವಾಗುತ್ತದೆ. ಈ ಕಾರಣಕ್ಕೆ ಆ್ಯಪಲ್ ಕಂಪನಿಯು ತನ್ನ ಉತ್ಪನ್ನಗಳ ತಯಾರಿಕೆಯನ್ನು ಚೀನಾದಲ್ಲಿ ಮಾಡುತ್ತಿತ್ತು. 2020ರ ಬಳಿಕ ಚೀನಾದಿಂದ ಆಚೆ ತಯಾರಿಕಾ ಕಾರ್ಯವನ್ನು ವಿಸ್ತರಿಸುತ್ತಿದೆ. ಇದರಲ್ಲಿ ಭಾರತವನ್ನು ಪ್ರಮುಖವಾಗಿ ಆಯ್ದುಕೊಂಡಿದೆ.

ಇದನ್ನೂ ಓದಿ: ಪಾಕಿಸ್ತಾನದ ಮಿತ್ರನಾದರೂ ಭಾರತವನ್ನು ಎದುರುಹಾಕಿಕೊಳ್ಳುವಷ್ಟು ದಡ್ಡನಲ್ಲ ಚೀನಾ; ಯಾಕೆ ಹೀಗೆ?

ಟ್ರಂಪ್ ಹುಚ್ಚಾಟದಿಂದ ಭಾರತಕ್ಕೆ ನಷ್ಟ?

ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಬೆದರಿಕೆಗೆ ಬಗ್ಗೆ ಆ್ಯಪಲ್ ಕಂಪನಿ ತನ್ನ ಮ್ಯಾನುಫ್ಯಾಕ್ಚರಿಂಗ್ ಕಾರ್ಯವನ್ನು ಅಮೆರಿಕಕ್ಕೆ ವರ್ಗಾಯಿಸಿಬಿಟ್ಟರೆ ಭಾರತಕ್ಕೆ ನಷ್ಟವಾಗಬಹುದು. ಆ್ಯಪಲ್ ದೆಸೆಯಿಂದ ಭಾರತದಲ್ಲಿ ಸ್ಮಾರ್ಟ್​​ಫೋನ್ ತಯಾರಿಕೆಯ ಕೆಲಸ ಬಹಳ ಭರ್ಜರಿಯಾಗಿ ನಡೆಯುತ್ತಿದೆ. ಭಾರತದಿಂದ ಅತಿಹೆಚ್ಚು ರಫ್ತಾಗುವ ಸರಕುಗಳಲ್ಲಿ ಸ್ಮಾರ್ಟ್​​ಫೋನ್ ಮೊದಲ ಸ್ಥಾನ ಪಡೆದಿದೆ. ಹೀಗಾಗಿ, ಭಾರತಕ್ಕೆ ಟ್ರಂಪ್ ನಿರ್ಧಾರ ಬಹಳ ಪರಿಣಾಮ ಬೀರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!