Kodi Mutt Swamiji: ಲೋಕಕ್ಕೆ ಜಲ ವಾಯು ಗಂಡಾಂತರ, ಮತ್ತೆ ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
Kodi Mutt Swamiji Predictions: ಕೊರೊನಾ ವೈರಸ್, ಯುದ್ಧ, ಪ್ರಾಕೃತಿಕ ವಿಕೋಪಗಳ ಸಂಬಂಧ ಕೋಡಿಮಠ ಸ್ವಾಮೀಜಿ ಬೆಳಗಾವಿಯಲ್ಲಿ ಭಯಾನಕ ಭವಿಷ್ಯ ನುಡಿದಿದ್ದಾರೆ. ಮತ್ತೆ ಯುದ್ಧಾತಂಕದ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ. ಕೆಲವು ಮಂದಿ ರಾಜಕೀಯ ನಾಯಕರ ಸಾವಾಗಲಿದೆ ಎಂದೂ ಅವರು ಹೇಳಿದ್ದಾರೆ. ಕೋಡಿಶ್ರೀ ಹೇಳಿದ್ದೇನೆಂಬ ವಿವರ ಹಾಗೂ ವಿಡಿಯೋ ಇಲ್ಲಿದೆ.
ಬೆಳಗಾವಿ, ಮೇ 24: ಲೋಕಕ್ಕೆ ಜಲ ಹಾಗೂ ವಾಯು ಗಂಡಾಂತರವಿದೆ. ಮತ್ತೆ ಯುದ್ಧ ಭೀತಿ ಇದ್ದು ಕೆಲವು ದೇಶಗಳು ನಾಶವಾಗಲಿವೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೊವಿಡ್ ಕುರಿತು ಕೂಡ ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರೋದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ ಐದು ವರ್ಷ ಗಂಡಾಂತರವಿದೆ ಎಂದು ಅವರು ಹೇಳಿದ್ದಾರೆ.
ಹಿಮಾಲಯ ಕರಗಿ ದೆಹಲಿ ತಲುಪಲಿದೆ: ಕೋಡಿ ಶ್ರೀ
ಹಿಮಾಲಯ ಕರಗಿ ದೆಹಲಿ ವರೆಗೆ ತಲುಪಲಿದೆ. ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ. ಮತೀಯ ಗಲಭೆಗಳು ಹೆಚ್ಚಾಗಲಿವೆ. ರಾಜಕೀಯವಾಗಿ ಅರಸನ ಮನೆಗೆ ಕಾರ್ಮೋಡ ಕವಿದಿತ್ತು. ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ರಾಜಕೀಯ ಮುಖಂಡರಿಗೆ ಸಾವು!
ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯವಿದೆ. ಮುಂದಿನ ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಎನಾಗುತ್ತದೆಯೋ ನೋಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ

ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ

ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!

ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
