ಪಿಸಿ, ಲ್ಯಾಪ್​ಟಾಪ್ ಆಮದು ನಿರ್ಬಂಧ: ಅಮೆರಿಕ ಸರ್ಕಾರದ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯತ್ನ

US Companies on Indian Import Restrictions: ಲ್ಯಾಪ್​ಟಾಪ್, ಪರ್ಸನಲ್ ಕಂಪ್ಯೂಟರ್, ಸರ್ವರ್​ಗಳ ಆಮದಿನ ಮೇಲೆ ನಿರ್ಬಂಧ ವಿಧಿಸಿರುವ ಭಾರತದ ಕ್ರಮದಿಂದ ಎರಡೂ ದೇಶಗಳ ವ್ಯಾಪಾರ ವಹಿವಾಟಿಗೆ ಹಿನ್ನಡೆಯಾಗುತ್ತದೆ. ನಿರ್ಬಂಧವನ್ನು ಸಡಿಲಿಸುವಂತೆ ಭಾರತವನ್ನು ಒತ್ತಾಯಿಸಿ ಎಂದು ಅಮೆರಿಕನ್ ಉದ್ಯಮಗಳು ತಮ್ಮ ಸರ್ಕಾರಕ್ಕೆ ಪತ್ರ ಬರೆದಿವೆ.

ಪಿಸಿ, ಲ್ಯಾಪ್​ಟಾಪ್ ಆಮದು ನಿರ್ಬಂಧ: ಅಮೆರಿಕ ಸರ್ಕಾರದ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯತ್ನ
ಸಾಂದರ್ಭಿಕ ಚಿತ್ರ
Follow us
|

Updated on: Aug 20, 2023 | 6:22 PM

ಕಂಪ್ಯೂಟರ್, ಲ್ಯಾಪ್​ಟಾಪ್, ಸರ್ವರ್​ಗಳ ಆಮದು ಮೇಲೆ ಭಾರತ ಸರ್ಕಾರ ವಿಧಿಸಿರುವ ನಿರ್ಬಂಧಗಳು (Import restrictions) ಅಮೆರಿಕನ್ ಕಂಪನಿಗಳನ್ನು ಒತ್ತಡಕ್ಕೆ ಸಿಲುಕಿಸಿವೆ. ಆ್ಯಪಲ್, ಇಂಟೆಲ್ ಮೊದಲಾದ ಟೆಕ್ ಕಂಪನಿಗಳು ಹಾಗೂ ಅಮೆರಿಕದ ಔದ್ಯಮಿಕ ಸಂಘಟನೆಗಳು ಅಮೆರಿಕ ಸರ್ಕಾರದ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿವೆ. ‘ಲ್ಯಾಪ್​ಟಾಪ್ ಇತ್ಯಾದಿಗಳ ಆಮದು ನಿರ್ಬಂಧ ಮಾಡುವ ಭಾರತದ ಕ್ರಮದಿಂದ ವ್ಯಾಪಾರ ವಹಿವಾಟಿಗೆ ದೊಡ್ಡ ಹಾನಿ ಮಾಡಬಹುದು. ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಭಾರತವನ್ನು ನಿಕಟವಾಗಿ ಒಳಗೊಳ್ಳುವ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ. ಎರಡೂ ದೇಶಗಳ ಉದ್ಯಮಗಳು ಹಾಗೂ ಗ್ರಾಹಕರಿಗೆ ತೊಂದರೆ ಆಗುತ್ತದೆ’ ಎಂದು ಅಮೆರಿಕದ ಟೆಕ್ ಕಂಪನಿಗಳು ಮತ್ತು ಸಂಘಟನೆಗಳು ಅಮೆರಿಕದ ವಾಣಿಜ್ಯ ಇಲಾಖೆಗೆ ಬರೆದ ಪತ್ರದಲ್ಲಿ ದೂರಿವೆ.

ಲ್ಯಾಪ್​ಟಾಪ್, ಪಿಸಿ ಆಮದು ನಿರ್ಬಂಧ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತದ ಮೇಲೆ ಒತ್ತಡ ಹೇರಬೇಕೆಂದು ಅಮೆರಿಕದ ಎಂಟು ವ್ಯಾಪಾರ ಸಂಘಟನೆಗಳು ತಮ್ಮ ಪತ್ರದಲ್ಲಿ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿವೆ. ಅಮೆರಿಕದ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಷಿಯೇಶನ್, ರಾಷ್ಟ್ರೀಯ ತಯಾರಕರ ಸಂಘ, ಐಟಿಐಸಿ ಇತ್ಯಾದಿ ಔದ್ಯಮಿಕ ಗುಂಪುಗಳು ಈ ಪೈಕಿ ಇವೆ. ಭಾರತದ ಈ ನೀತಿಯಿಂದ ಅಮೆರಿಕನ್ ಮೇಡ್ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಭಾರತಕ್ಕೆ ಸಾಗಿಸಲು ಅಡ್ಡಿಯಾಗಬಹುದು ಎಂದು ಈ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ, ಈ ವರ್ಷದ ಕೊನೆಯವರೆಗೂ

ಇತ್ತೀಚೆಗೆ ಕೇಂದ್ರದ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್​ಟಿ- ಡೈರೆಕ್ಟೋರೇಟ್ ಜನರಲ್ ಆಫ್ ಫಾರೀನ್ ಟ್ರೇಡ್) ಹೊರಡಿಸಿದ ಅಧಿಸೂಚನೆ ಪ್ರಕಾರ, ಪರ್ಸನಲ್ ಕಂಪ್ಯೂಟರ್, ಲ್ಯಾಪ್​ಟಾಪ್, ಸರ್ವರ್ ಮೊದಲಾದವುಗಳನ್ನು ಸೂಕ್ತ ಪರವಾನಿಗೆ ಹೊಂದಿದವರು ಮಾತ್ರ ಆಮದು ಮಾಡಿಕೊಳ್ಳಬಹುದು. ಅಂದರೆ, ನಿರ್ಬಂಧಿತ ಆಮದುಗಳಿಗೆ ಲೈಸೆನ್ಸ್ ಇರುವ ಸಂಸ್ಥೆಗಳಿಂದ ಮಾತ್ರ ಇವುಗಳ ಆಮದಿಗೆ ಅವಕಾಶ ಇರುತ್ತದೆ. 2023ರ ನವೆಂಬರ್ 1ಕ್ಕೆ ಈ ಹೊಸ ನಿರ್ಬಂಧ ಜಾರಿಗೆ ಬರುತ್ತದೆ. ಭಾರತದಲ್ಲಿ ಈ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಚೀನಾದ ಆರ್ಥಿಕತೆ ಮಾದರಿ ಮತ್ತೆ ಕೆಲಸ ಮಾಡಲು ಸಾಧ್ಯ ಇಲ್ಲ: ಹಿರಿಯ ಹೂಡಿಕೆದಾರನ ಅನಿಸಿಕೆ

ಅ್ಯಪಲ್, ಹೆಚ್​ಪಿ, ಡೆಲ್ ಮೊದಲಾದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕಂಪನಿಗಳು ಭಾರತ ಸರ್ಕಾರದ ಈ ಹೊಸ ನೀತಿಯನ್ನು ವಿಳಂಬವಾಗಿ ಜಾರಿಗೆ ತರಲು ಒತ್ತಾಯಿಸಿರುವುದು ತಿಳಿದುಬಂದಿದೆ. ಈ ನಿಯಮ ಜಾರಿ ಮಾಡಲು ನವೆಂಬರ್ 1ರ ಬದಲು ಒಂದು ವರ್ಷ ಮುಂದೂಡಿ ಎಂದು ಈ ಕಂಪನಿಗಳು ಕಳೆದ ವಾರ ಒತ್ತಾಯಿಸಿದ್ದವು. ಯಾಕೆಂದರೆ, ಭಾರತ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಥವಾ ಅಸೆಂಬ್ಲಿಂಗ್ ಯೂನಿಟ್​ಗಳನ್ನು ಸ್ಥಾಪಿಸಲು ಕಾಲಾವಕಾಶ ಬೇಕಾಗುತ್ತದೆ ಎಂಬುದು ಈ ಕಂಪನಿಗಳ ವಾದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ