ಡಿಜಿಟಲ್‌ ಹಣಕಾಸಿನೊಂದಿಗೆ ಟಾಟಾ ಏಸ್‌ ಪ್ರೋ ಭಾರತದ ನವ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ: ಡಾ. ಜಯಜಿತ್‌ ಭಟ್ಟಾಚಾರ್ಯ

ಟಾಟಾ ಏಸ್‌ ಪ್ರೊ ಮತ್ತು ಸುಲಭ ಸಾಲ ಆಯ್ಕೆಗಳು ಭಾರತದಲ್ಲಿ ನವ ಉದ್ಯಮಿಗಳ ಪಾಲಿಗೆ ಬೆಳಕಾಗಿದೆ. ಈಗಿನ ಡಿಜಿಟಲ್‌ ಮತ್ತು ಸಲುಭ ಸಾಲ ನೀತಿಗಳು ಸಣ್ಣ ಉದ್ಯಮಿಗಳಿಗೆ ಅವಕಾಶವನ್ನು ಸೃಷ್ಟಿಸುತ್ತಿದೆ. ಗಿಗ್‌ ವರ್ಕರ್ಸ್ ಮತ್ತು ಸಣ್ಣ ವ್ಯಾಪಾರಿಗಳು ಸುಲಭ ಸಾಲಗಳನ್ನು ತೆಗೆದುಕೊಂಡು ತಮ್ಮ ವ್ಯವಹಾರಗಳನ್ನು ಬೆಳೆಸುತ್ತಿದ್ದಾರೆ ಎಂದು ಡಾ. ಜಯಜಿತ್‌ ಭಟ್ಟಾಚಾರ್ಯ ಹೇಳಿದರು.

ಡಿಜಿಟಲ್‌ ಹಣಕಾಸು ಮತ್ತು ಇಂದಿನ ಸಾಲ ಯೋಜನೆಗಳು (Digital finance and inclusive loan schemes) ಭಾರತದ ಉದ್ಯಮಶೀಲ ವಲಯವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತಿದೆ. ಇದರಿಂದಾಗಿ ಸಣ್ಣ ಉದ್ಯಮಿಗಳಿಗೆ ಅವಕಾಶಗಳು ಸೃಷ್ಟಿಯಾಗುತ್ತಿದೆ. ಗಿಗ್‌ ವರ್ಕರ್ಸ್‌, ಸಣ್ಣ ವ್ಯಾಪಾರಿಗಳು ತಮ್ಮ ಉದ್ಯಮವನ್ನು ಬೆಳೆಸಲು ಸುಲಭವಾಗಿ ಅಗತ್ಯವಾದ ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ. ಆಧಾರ್‌ ಲಿಂಕ್ಡ್‌ ಬ್ಯಾಂಕಿಂಗ್‌, ಯುಪಿಐ, ಜಿಎಸ್‌ಟಿ ಮತ್ತು ಡಿಜಿಟಲ್‌ ಪಾವತಿಗಳಂತಹ ವ್ಯವಸ್ಥೆಯಿಂದ ಸುಲಭ ಸಾಲಗಳು ಸಹ ಲಭಿಸುತ್ತಿವೆ. ಹಿಂದೆಲ್ಲಾ ಸಾಲ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದ ಸಣ್ಣ ವ್ಯಾಪಾರಿಗಳು ಈಗ ಸುಲಭ ಸಾಲಗಳನ್ನು ತೆಗೆದುಕೊಂಡು ತಮ್ಮ ವ್ಯವಹಾರಗಳನ್ನು ಬೆಳೆಸುತ್ತಿದ್ದಾರೆ ಎಂದು ಡಾ. ಜಯಜಿತ್‌ ಭಟ್ಟಾಚಾರ್ಯ (Dr. Jaijit Bhattachary) ಹೇಳಿದರು.

ಡಾ. ಜಯಜಿತ್‌ ಭಟ್ಟಾಚಾರ್ಯ ಅವರ ಪ್ರಕಾರ,  MSME ಸಾಲ ಯೋಜನೆಗಳು ಈಗ ವಾಣಿಜ್ಯ ವಾಹನಗಳನ್ನು ವ್ಯಾಪಾರ ಹೂಡಿಕೆಯಾಗಿ ಗುರುತಿಸುತ್ತಿವೆ. ಈ ಬದಲಾವಣೆಯ ಪರಿಣಾಮವಾಗಿ ಟಾಟಾ ಏಸ್‌ ಪ್ರೊನಂತಹ ವಾಹನಗಳು ಉದ್ಯಮಶೀಲತೆಗೆ ಒಂದು ಹೆಬ್ಬಾಗಿಲಾಗಿ ಮಾರ್ಪಟ್ಟಿದೆ. ಇನ್ನೂ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು ಸಹ ಇದರ ಸದುಪಯೋಗವನ್ನು ಬಳಸಿಕೊಳ್ಳುತ್ತಿವೆ. ಈ ಗುಂಪುಗಳು ತನ್ನ ಸ್ಥಳೀಯ ಪೂರೈಕೆದಾರರಿಗೆ ಶಕ್ತಿ ತುಂಬಲು ಟಾಟಾ ಏಸ್‌ ಪ್ರೊ ವಾಹನವನ್ನು ಬಳಸುತ್ತಿದ್ದಾರೆ. ಇದರಿಂದ ಸಮುದಾಯದಲ್ಲಿ ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯ ಸೃಷ್ಟಿಯಾಗುತ್ತಿದೆ.

ಟಾಟಾ ಮೋಟಾರ್ಸ್‌ನ ಸುಲಭ ಹಣಕಾಸು ಮತ್ತು ಸಮಗ್ರ ಸಾಲದ ಬೆಂಬಲ ಸಣ್ಣ ಹಾಗೂ ನವ ಉದ್ಯಮಿಗಳಿಗೆ ತಮ್ಮ ಉದ್ಯಮಕ್ಕೆ ಅನುಕೂಲಕರವಾಗಿರುವ ಟಾಟಾ ಏಸ್‌ ಪ್ರೊನಂತಹ ವಾಹನಗಳನ್ನು ಖರೀದಿಸಲು ಅವಕಾಶವನ್ನು ಒದಗಿಸುತ್ತದೆ.  ಹೀಗೆ ಇದು ಸಣ್ಣ ವ್ಯಾಪಾರಿಗಳು ಮತ್ತು ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಬೆಂಬಲವಾಗಿ ನಿಂತಿದೆ ಎಂದು ಡಾ. ಜಯಜಿತ್‌ ಭಟ್ಟಾಚಾರ್ಯ ಹೇಳಿದ್ದಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ