ಟಾಟಾ ಏಸ್ ಪ್ರೊ ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಕಾರಿ: ಡಾ. ಎಸ್.ಪಿ ಶರ್ಮಾ
ಟಾಟಾ ಏಸ್ ಪ್ರೊ ಕೇವಲ ವ್ಯಾಪಾರ ಸಾಧನವಲ್ಲ, ಇದು ಒಂದು ಕುಟುಂಬದ ಆಸ್ತಿಯಾಗಿದ್ದು, ಇದು ಆ ಕುಟುಂಬದ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ಈ ಮೂಲಕ ಕುಟುಂಬದ ಹಾಗೂ ದೇಶದ ಆದಾಯವು ವೇಗವಾಗಿ ಮುನ್ನಡೆಯುತ್ತದೆ. ಅದು ಹೇಗೆ ಎಂಬುದನ್ನು ನಿಯೋ ಎಕನಾಮಿಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್ ಪಿ ಶರ್ಮಾ ವಿವರಿಸಿದ್ದಾರೆ.
ಭಾರತದಲ್ಲಿ ಹೈಬ್ರಿಡ್ ಆದಾಯ (Hybrid Income) ಮಾದರಿಗಳು ಜನಪ್ರಿಯವಾಗುತ್ತಿವೆ. ಒಂದೇ ಉದ್ಯೋಗ ಅಥವಾ ಆದಾಯದ ಮೂಲವನ್ನು ಅವಲಂಬಿಸುವ ಬದಲು ಜನ ಬಹು ಆದಾಯದ ಮೂಲವನ್ನು ಅವಲಂಬಿಸುತ್ತಿದ್ದಾರೆ. ಇದಕ್ಕೆ ಟಾಟಾ ಏಸ್ ಪ್ರೊನಂತಹ (Tata ACE Pro) ವಾಹನಗಳು ಸಹಾಯಕವಾಗಿದೆ ಎಂದು ನಿಯೋ ಎಕನಾಮಿಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್ ಪಿ ಶರ್ಮಾ ವಿವರಿಸಿದ್ದಾರೆ.
ಟಾಟಾ ಎಸಿಇ ಪ್ರೊ ಕೇವಲ ವ್ಯಾಪಾರ ಸಾಧನವಲ್ಲ, ಇದು ಕುಟುಂಬದ ಆಸ್ತಿಯಾಗುತ್ತದೆ, ಇದು ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ಒಬ್ಬ ಭದ್ರತಾ ಸಿಬ್ಬಂದಿ ತನ್ನ ಕೆಲಸವನ್ನು ಮಾಡುತ್ತಾ ಟಾಟಾ ಏಸ್ ಪ್ರೊ ವಾಹನವನ್ನು ಬಾಡಿಗೆಗೆ ನೀಡಬಹುದು. ಕುಟುಂಬದ ಒಬ್ಬ ಸದಸ್ಯ ವಾಹನ ಚಲಾಯಿಸುವಾಗಿ ಅದೇ ಕುಟುಂಬದ ಇನ್ನೊಬ್ಬ ಸದಸ್ಯ ತಮಗೆ ಬರುವ ಬುಕಿಂಗ್‌ಗಳನ್ನು ನಿರ್ವಹಿಸಬಹುದು. ಹೀಗೆ ಪ್ರತಿಯೊಂದು ಕುಟುಂಬವು ಒಟ್ಟಾಗಿ ಸುಸ್ಥಿರ ವ್ಯವಹಾರವನ್ನು ನಿರ್ಮಿಸಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




