Tata Power EV Stations: ದೇಶದಾದ್ಯಂತ ಟಾಟಾ ಪವರ್​ನ 1000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳು

| Updated By: Srinivas Mata

Updated on: Oct 26, 2021 | 12:37 AM

ಟಾಟಾ ಪವರ್​ 1000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳನ್ನು ಸೋಮವಾರ ದಾಟಿದೆ ಎಂದು ಮಾಹಿತಿಯನ್ನು ನೀಡಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Tata Power EV Stations: ದೇಶದಾದ್ಯಂತ ಟಾಟಾ ಪವರ್​ನ 1000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳು
ಪ್ರಾತಿನಿಧಿಕ ಚಿತ್ರ
Follow us on

ಟಾಟಾ ಪವರ್ ದೇಶಾದ್ಯಂತ 1,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ಹೊಂದಿದೆ ಎಂದು ಸೋಮವಾರ ಹೇಳಿದೆ. 1,000 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಈ ನೆಟ್‌ವರ್ಕ್ ಟಾಟಾ ಪವರ್‌ನ ಗ್ರಾಹಕರಿಗೆ ಕಚೇರಿಗಳು, ಮಾಲ್‌ಗಳು, ಹೋಟೆಲ್‌ಗಳು, ರೀಟೇಲ್ ಮಾರಾಟ ಮಳಿಗೆಗಳು ಮತ್ತು ಸಾರ್ವಜನಿಕ ಪ್ರವೇಶದ ಸ್ಥಳಗಳಲ್ಲಿ ವಿನೂತನ ಮತ್ತು ತಡೆರಹಿತ ಇವಿ ಚಾರ್ಜಿಂಗ್ ಅನುಭವ ಒದಗಿಸುತ್ತದೆ. ಇದು ಶುದ್ಧ ಮೊಬೈಲಿಟಿ ಮತ್ತು ದೂರ ವ್ಯಾಪ್ತಿಯಲ್ಲಿ ಸಾಗುವಾಗ ಆತಂಕದಿಂದ ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರ ಜೊತೆಯಲ್ಲಿ 10,000 ಹೋಮ್ ಇವಿ ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇದು ಇವಿ ಚಾರ್ಜಿಂಗ್ ಅನ್ನು ವಾಹನ ಮಾಲೀಕರಿಗೆ ಅತ್ಯಂತ ಅನುಕೂಲಕರ ಆಗಿಸುತ್ತದೆ ಎಂದು ಕಂಪೆನಿ ಹೇಳಿದೆ. ಟಾಟಾ ಪವರ್ ಇಝಡ್ ಚಾರ್ಜರ್ಸ್ ಎಕೋ ಸಿಸ್ಟಮ್ ಸಾರ್ವಜನಿಕ, ಕ್ಯಾಪ್ಟಿವ್, ಬಸ್/ಫ್ಲೀಟ್ ಮತ್ತು ಹೋಮ್ ಚಾರ್ಜರ್‌ಗಳ ಸಂಪೂರ್ಣ ಮೌಲ್ಯ ಜಾಲವನ್ನು ಒಳಗೊಂಡಿದೆ.

ಮುಂಬೈನಲ್ಲಿ ಸ್ಥಾಪಿಸಲಾದ ಮೊದಲ ಚಾರ್ಜರ್‌ಗಳಿಂದ ಪ್ರಾರಂಭಿಸಿ, ಟಾಟಾ ಪವರ್ ಇವಿ ಚಾರ್ಜಿಂಗ್ ಪಾಯಿಂಟ್‌ಗಳು ಈಗ ಸುಮಾರು 180 ನಗರಗಳಲ್ಲಿವೆ. ಕಂಪೆನಿಯು 10,000 ಚಾರ್ಜಿಂಗ್ ಕೇಂದ್ರಗಳ ನೆಲೆಯನ್ನು ಹೊಂದಲು ಯೋಜಿಸುತ್ತಿದೆ ಮತ್ತು ದೇಶಾದ್ಯಂತ ಇ-ಹೆದ್ದಾರಿಗಳನ್ನು ಸಂಪೂರ್ಣವಾಗಿ ಹೆದ್ದಾರಿಗಳಲ್ಲಿ ಸಕ್ರಿಯಗೊಳಿಸಲು ಇದು ಯೋಜಿಸುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: Tata Power- HPCL Partnership: ಟಾಟಾ ಪವರ್ ಹಾಗೂ ಎಚ್​ಪಿಸಿಎಲ್​ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್