Tata Sons and Singapore Airlines: ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ ವಿಲೀನ
ಟಾಟಾ ಸನ್ಸ್, ಸಿಂಗಾಪುರ್ ಏರ್‌ಲೈನ್ಸ್ ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ (Vistara Airline) ಏರ್ಲೈನ್ ಬ್ರ್ಯಾಂಡ್ಗಳನ್ನು ವಿಲೀನಗೊಳ್ಳಿಸಿದೆ.
ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾದೊಂದಿಗೆ ಮಾರ್ಚ್ 2024ಕ್ಕೆ ವಿಸ್ತಾರ (Vistara Airline) ಏರ್ಲೈನ್ನ್ನು ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್‌ಲೈನ್ಸ್ ತಿಳಿಸಿದೆ. ಟಾಟಾ ಸಮೂಹವು ವಿಸ್ತಾರಾದಲ್ಲಿ 51 ಪ್ರತಿಶತ ಪಾಲನ್ನು ಹೊಂದಿದೆ ಮತ್ತು ಉಳಿದ 49 ಶೇಕಡಾ ಷೇರುಗಳು ಸಿಂಗಾಪುರ್ ಏರ್‌ಲೈನ್ಸ್ (ಎಸ್‌ಐಎ) ನಲ್ಲಿದೆ. ವಹಿವಾಟಿನ ಭಾಗವಾಗಿ, ಎಸ್‌ಐಎ ಏರ್ ಇಂಡಿಯಾದಲ್ಲಿ 2,058.5 ಕೋಟಿ ರೂ. ಹೂಡಿಕೆ ಮಾಡಿದೆ.
ಟಾಟಾ ಸನ್ಸ್, ಸಿಂಗಾಪುರ್ ಏರ್‌ಲೈನ್ಸ್ ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ (Vistara Airline) ಏರ್ಲೈನ್ ಬ್ರ್ಯಾಂಡ್ಗಳನ್ನು ವಿಲೀನಗೊಳ್ಳಲಿದೆ. ವಿಸ್ತಾರ ಏರ್ಲೈನ್ ಬ್ರ್ಯಾಂಡ್ ಅನ್ನು ರದ್ದುಗೊಳಿಸುವುದು ಮತ್ತು ನಾಲ್ಕು ಏರ್ಲೈನ್ಗಳನ್ನು ಏರ್ ಇಂಡಿಯಾದೊಂದಿಗೆ (Air India) ವಿಲೀನಗೊಳಿಸಲು ಟಾಟಾ ಸಮೂಹ (Tata Group) ಚಿಂತನೆ ನಡೆಸಿದೆ. ಈ ಮೂಲಕ ತನ್ನ ಕುಂಟುತ್ತಾ ಸಾಗುತ್ತಿರುವ ವಿಮಾನಯಾನ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡಲು ಮತ್ತು ವಿಸ್ತರಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಸಿಂಗಾಪುರ ಏರ್ಲೈನ್ಸ್ನ ದಕ್ಷಿಣ ಏಷ್ಯಾದ ಸ್ಥಳೀಯ ಸಂಸ್ಥೆಯಾದ ವಿಸ್ತಾರ ಬ್ರ್ಯಾಂಡ್ ಅನ್ನು ರದ್ದುಗೊಳಿಸಲೂ ಟಾಟಾ ಚಿಂತನೆ ನಡೆಸಿತ್ತು. ಸಂಯೋಜಿತ ಏರ್ಲೈನ್ಸ್ನ ಎಷ್ಟು ಷೇರುಗಳನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಸಿಂಗಾಪುರ ಏರ್‌ಲೈನ್ಸ್ ಮೌಲ್ಯಮಾಪನ ಮಾಡುತ್ತಿದೆ.
ಇದನ್ನು ಓದಿ: Tata Group: ನಾಲ್ಕು ಏರ್ಲೈನ್ಗಳನ್ನು ಏರ್ ಇಂಡಿಯಾ ಅಡಿ ವಿಲೀನಗೊಳಿಸಲಿದೆ ಟಾಟಾ; ವರದಿ
ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಗೆ ಮುಂದಾಗಿದೆ. 300 ಸಣ್ಣ ಜೆಟ್ಗಳ ಖರೀದಿಗೆ ಚಿಂತನೆ ನಡೆಸಿದೆ. ಇದು ಸಾಕಾರಗೊಂಡಲ್ಲಿ ವಿಮಾನಯಾನ ಇತಿಹಾಸದಲ್ಲೇ ಅತಿದೊಡ್ಡ ಖರೀದಿಯಾಗಲಿದೆ ಎಂದು ಹೇಳಲಾಗಿದೆ. ಈಗ ವಿಮಾನಯಾನ ಸಂಸ್ಥೆಯು 113 ವಿಮಾನಗಳನ್ನು ಹೊಂದಿದ್ದು, ಇದನ್ನು ಮುಂದಿನ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಲ ಚಾಂಪ್ಬೆಲ್ ವಿಲ್ಸನ್ ಇತ್ತೀಚೆಗೆ ಹೇಳಿದ್ದರು.
5 ಶತಕೋಟಿ ಡಾಲರ್ ಮೌಲ್ಯದ ಕ್ಯಾರಿಯರ್ಗಳನ್ನು ಹೊಂದುವ ಸಲುವಾಗಿ 1 ಶತಕೋಟಿ ಡಾಲರ್ ಫಡಿಂಗ್ ಸಂಗ್ರಹಿಸುವ ಬಗ್ಗೆಯೂ ಏರ್ ಇಂಡಿಯಾ ಚಿಂತನೆ ನಡೆಸಿದೆ ಎಂದು ಬೆಳವಣಿಗೆಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ಮೂಲಗಳು ಹೇಳಿವೆ. 25 ಏರ್ಬಸ್ ಎಸ್ಇ ಮತ್ತು 5 ಬೋಯಿಂಗ್ ಏರ್ಕ್ರಾಫ್ಟ್ಗಳನ್ನು ಹೊಂದುವ ಗುರಿಯನ್ನೂ ಏರ್‌ಲೈನ್ಸ್ ಹೊಂದಿದೆ ಎನ್ನಲಾಗಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Tue, 29 November 22