AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬದ ಸದಸ್ಯ ಮೃತಪಟ್ಟ ಬಳಿಕ ಮಾಡ್ಲೇಬೇಕಾದ ಆರ್ಥಿಕ ಕೆಲಸಗಳು ಇವೆ ನೋಡಿ

ಮನೆಯ ಸದಸ್ಯರೊಬ್ಬರು ಮೃತ ಪಟ್ಟರೆ ಅದು ಇಡೀ ಕುಟುಂಬಕ್ಕೆ ದೊಡ್ಡ ಹೊಡೆತ ಮತ್ತೊಂದಿಲ್ಲ. ಹಾಗಂತ ಈ ಸಮಯದಲ್ಲಿ ಕೆಲವು ಅಗತ್ಯ ಕಾನೂನು ಹಾಗೂ ಆರ್ಥಿಕ ಕೆಲಸಗಳನ್ನು ಮುಂದಕ್ಕೆ ಹಾಕುವಂತಿಲ್ಲ. ಮೃತ ವ್ಯಕ್ತಿಯ ಹೆಸರಿನಲ್ಲಿ ಆಧಾರ್ ಕಾರ್ಡ್ , ವೋಟರ್ ಐಡಿ ನಿಷ್ಕ್ರಿಯಗೊಳಿಸುವುದರಿಂದ ಹಿಡಿದು ವಿಮಾ ಕ್ಲೈಮ್, ಸಾಲ ಪ್ರಮಾಣಪತ್ರ ಪಡೆಯುವುದು ಹೀಗೆ ಅನೇಕ ಹಣಕಾಸಿನ ವ್ಯವಹಾರಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ರೆ ಇದರಿಂದ ಭವಿಷ್ಯಕ್ಕೆ ತೊಂದರೆಯಾಗಬಹುದು.

ಕುಟುಂಬದ ಸದಸ್ಯ ಮೃತಪಟ್ಟ ಬಳಿಕ ಮಾಡ್ಲೇಬೇಕಾದ ಆರ್ಥಿಕ ಕೆಲಸಗಳು ಇವೆ ನೋಡಿ
ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ Image Credit source: shutterstock.com/whatsmovingindia.com
ಸಾಯಿನಂದಾ
|

Updated on: Nov 17, 2026 | 6:10 PM

Share

ಮುಖ್ಯಾಂಶಗಳು

  • ಮನೆಯಲ್ಲಿ ಯಾರಾದ್ರೂ ಮೃತ ಪಟ್ಟರೆ ಆ ದುಃಖದಲ್ಲೇ ನಾವೆಲ್ಲಾ ಮುಳುಗಿ ಹೋಗುತ್ತೇವೆ
  • ಕೆಲವು ಕಾನೂನು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಬಹಳ ಮುಖ್ಯ
  • ಆರ್ಥಿಕ ವ್ಯವಹಾರಗಳನ್ನು ಪೋರ್ಣಗೊಳಿಸದೇ ಇದ್ದಲ್ಲಿ ಭವಿಷ್ಯದಲ್ಲಿ ತೊಂದರೆಯಾಗಬಹುದು

ಮನೆಯಲ್ಲಿ ಯಾರಾದ್ರೂ ಮೃತ ಪಟ್ಟರೆ ಆ ದುಃಖದಲ್ಲೇ ನಾವೆಲ್ಲಾ ಮುಳುಗಿ ಹೋಗುತ್ತೇವೆ. ಆದರೆ ಭಾವನಾತ್ಮಕ ಸನ್ನಿವೇಶದಲ್ಲಿ ಕೆಲವು ಕಾನೂನು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಬಹಳ ಮುಖ್ಯ. ಇಲ್ಲದಿದ್ರೆ ಇದುವೇ ನಿಮಗೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಹೌದು, ಮೃತ ವ್ಯಕ್ತಿಯ ಪ್ರಮುಖ ದಾಖಲೆಗಳನ್ನು (documents) ನಿಷ್ಕ್ರಿಯಗೊಳಿಸುವುದು ಹಾಗೂ ಹಣಕಾಸಿನ ವ್ಯವಹಾರಗಳನ್ನು  ಪೂರ್ಣಗೊಳಿಸಬೇಕು. ಹಾಗಾದ್ರೆ ಏನೆಲ್ಲಾ ಆರ್ಥಿಕ ಹಾಗೂ ಕಾನೂನು ವ್ಯವಹಾರಗಳನ್ನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಮೃತ ಪಟ್ಟ ವ್ಯಕ್ತಿಯ ಕುಟುಂಬಸ್ಥರು ಈ ಆರ್ಥಿಕ ಕೆಲ್ಸಗಳನ್ನು ಮೊದ್ಲು ಮಾಡಿ

  • ಮೃತರ ಹೆಸರಿನಲ್ಲಿ ಸಾಲ ಪ್ರಮಾಣ ಪತ್ರ ಪಡೆಯಬೇಕು. ಮೃತರ ಹೆಸರಿನಲ್ಲಿ ಹೂಡಿಕೆಗಳು, ಆಸ್ತಿಗಳು ಮತ್ತು ವಿಮಾ ಹಣವನ್ನು ಪಡೆಯಲು ಈ ಪ್ರಮಾಣಪತ್ರ ಅಗತ್ಯವಾಗಿ ಬೇಕು.
  • ಮರಣ ಹೊಂದಿದ ವ್ಯಕ್ತಿಯ ವಿಮಾ ಪಾಲಿಸಿಗಳು ಇದ್ದರೆ ಅವುಗಳನ್ನು ಮರೆಯದೇ ಪಡೆದುಕೊಳ್ಳಿ.
  • ಮೃತ ಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆಗಳು ಮತ್ತು ಪಿಪಿಫ್ ನಂತಹ ಯೋಜನೆಗಳಿಗೆ ಸೂಕ್ತ ದಾಖಲೆ ಸಲ್ಲಿಸಿ ಹಣ ಪಡೆದುಕೊಳ್ಳಿ.
  • ಕುಟುಂಬಸ್ಥರು ಮೃತರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವುದನ್ನು ಮರೆಯದಿರಿ.
  • ಮರಣ ಹೊಂದಿದ ಆಧಾರ್ ಕಾರ್ಡ್ ಅನ್ನು ತಕ್ಷಣವೇ ನಿಷ್ಕ್ರಿಯಗೊಳಿಸಿ.
  • ಮೃತ ವ್ಯಕ್ತಿಯ ಹೆಸರಿನಲ್ಲಿರುವ ಇಮೇಲ್ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಡಿಲೀಟ್ ಮಾಡಿ.
  • ಮೃತ ಪಟ್ಟ ವ್ಯಕ್ತಿ ತನ್ನ ಆಸ್ತಿಗಳ ಕುರಿತು ಯಾವುದೇ ವಿಲ್ ಮಾಡಿದ್ದರೆ, ಅದಕ್ಕೆ ಅನುಗುಣವಾಗಿ ಮಕ್ಕಳು ಹಂಚಿಕೆ ಮಾಡಿಕೊಳ್ಳಿ.
  • ಮೃತ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕ್ ಸಾಲಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಇಎಂಐಗಳು ಹಾಗೂ ಅಡಮಾನ ಸಾಲಗಳು ಇದ್ದರೆ ಪಾವತಿಸಿ.
  • ದುರುಪಯೋಗ ಪಡಿಸುವುದನ್ನು ತಡೆಯಲು ಮೃತರ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿ ರದ್ದುಗೊಳಿಸಿ.

ಇದನ್ನೂ ಓದಿ: ಗೂಗಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ತೆಗೆದುಹಾಕುವುದು ಹೇಗೆ?

  • ಮರಣ ಹೊಂದಿದ ವ್ಯಕ್ತಿಯ ಮತದಾರರ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್‌ನಂತಹ ದಾಖಲೆಗಳ ರದ್ದುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿ ನಿಷ್ಕ್ರಿಯಗೊಳಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ