AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಗೂಗಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ತೆಗೆದುಹಾಕುವುದು ಹೇಗೆ?

ನಿಮ್ಮ ಮೊಬೈಲ್ ಸಂಖ್ಯೆ, ಮನೆಯ ವಿಳಾಸ ಅಥವಾ ಇಮೇಲ್ ಐಡಿ ಗೂಗಲ್ ಸರ್ಚ್‌ನಲ್ಲಿ ಕಾಣಿಸುತ್ತಿದೆಯೇ? ಹಾಗಿದ್ದರೆ ಚಿಂತಿಸಬೇಕಿಲ್ಲ. ಗೂಗಲ್‌ನ ಈ ಸೌಲಭ್ಯದ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಸರ್ಚ್ ಫಲಿತಾಂಶಗಳಲ್ಲಿ ಕಾಣಿಸದಂತೆ ಮಾಡಲು ಮನವಿ ಸಲ್ಲಿಸಬಹುದು. ಈ ಆಯ್ಕೆಯನ್ನು ಬಳಸುವುದು ಹೇಗೆ? ಮಾಹಿತಿ ತೆಗೆದುಹಾಕಲು ಅನುಸರಿಸಬೇಕಾದ ಹಂತಗಳೇನು? ಇಲ್ಲಿದೆ ಮಾಹಿತಿ.

Tech Tips: ಗೂಗಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ತೆಗೆದುಹಾಕುವುದು ಹೇಗೆ?
Google
ಮಾಲಾಶ್ರೀ ಅಂಚನ್​
| Edited By: |

Updated on: Nov 16, 2026 | 1:55 PM

Share

ಮುಖ್ಯಾಂಶಗಳು

  • ಗೂಗಲ್‌ನಲ್ಲಿ ನಿಮ್ಮ ಫೋನ್ ನಂಬರ್ ಕಾಣಿಸುತ್ತಿದೆಯೇ?
  • ಗೂಗಲ್ ಸರ್ಚ್‌ನಿಂದ ವೈಯಕ್ತಿಕ ಮಾಹಿತಿ ತೆಗೆದುಹಾಕುವುದು ಹೇಗೆ?
  • ನಿಮ್ಮ ಹೆಸರು ಸರ್ಚ್ ಮಾಡಿದರೆ ವಿಳಾಸವೂ ಕಾಣಿಸುತ್ತಿದೆಯೇ?

ಇತ್ತೀಚಿನ ದಿನಗಳಲ್ಲಿ ಇಂಟರ್‌ನೆಟ್ (Internet) ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಇದೇ ಸೌಲಭ್ಯ ಕೆಲವೊಮ್ಮೆ ನಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ದೊಡ್ಡ ಅಪಾಯವನ್ನೂ ತಂದೊಡ್ಡಬಹುದು. ತಿಳಿದೋ ತಿಳಿಯದೆಯೋ ಹಲವು ವೆಬ್‌ಸೈಟ್‌ಗಳು, ಆನ್‌ಲೈನ್ ಡೈರೆಕ್ಟರಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೊಬೈಲ್ ಸಂಖ್ಯೆ, ಮನೆಯ ವಿಳಾಸ ಹಾಗೂ ಇಮೇಲ್ ಐಡಿ ಸಾರ್ವಜನಿಕವಾಗಿ ಲಭ್ಯವಾಗಿರಬಹುದು. ಇದರಿಂದ ಅಪರಿಚಿತ ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ನಿಮ್ಮ ಹೆಸರನ್ನು ಹುಡುಕುವ ಮೂಲಕ ನಿಮ್ಮ ವೈಯಕ್ತಿಕ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಇಂದಿನ ದಿನಗಳಲ್ಲಿ ಸೈಬರ್ ವಂಚನೆ, ಸ್ಪ್ಯಾಮ್ ಕರೆಗಳು ಮತ್ತು ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಿರುವ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವುದು ಮುಖ್ಯವಾಗಿದೆ. ಉತ್ತಮ ಸಂಗತಿಯೆಂದರೆ, ಗೂಗಲ್ ತನ್ನ ಬಳಕೆದಾರರಿಗೆ ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವಂತೆ ಮನವಿ ಸಲ್ಲಿಸಲು ಅವಕಾಶ ನೀಡುತ್ತದೆ. ಇದಕ್ಕಾಗಿ ಸರಳ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.

Results about you ಟೂಲ್ ಮೂಲಕ ಮಾಹಿತಿ ತೆಗೆದುಹಾಕಿ

ಬಳಕೆದಾರರ ಖಾಸಗಿತನವನ್ನು ಕಾಪಾಡುವ ಉದ್ದೇಶದಿಂದ ಗೂಗಲ್ Results about you ಎಂಬ ಉಪಯುಕ್ತ ಸೌಲಭ್ಯವನ್ನು ಪರಿಚಯಿಸಿದೆ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗಮನಿಸುವುದು ಮತ್ತು ಅದನ್ನು ಗೂಗಲ್ ಸರ್ಚ್ ಫಲಿತಾಂಶಗಳಿಂದ ತೆಗೆದುಹಾಕಲು ಮನವಿ ಸಲ್ಲಿಸುವುದು ಈ ಸೌಲಭ್ಯದ ಉದ್ದೇಶವಾಗಿದೆ.

ಈ ಟೂಲ್‌ನಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಮನೆಯ ವಿಳಾಸವನ್ನು ನಮೂದಿಸಿದರೆ, ಗೂಗಲ್ ಈ ವಿವರಗಳು ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುತ್ತಿವೆಯೇ ಎಂಬುದನ್ನು ಪರಿಶೀಲಿಸಲು ನೆರವಾಗುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಂಡರೆ, ಅದರ ಕುರಿತು ಸೂಚನೆ ಪಡೆಯುವ ವ್ಯವಸ್ಥೆಯೂ ಇದೆ. ಬಳಿಕ ಸಂಬಂಧಪಟ್ಟ ಲಿಂಕ್‌ ಅನ್ನು ತೆಗೆದುಹಾಕುವಂತೆ ಗೂಗಲ್‌ಗೆ ಮನವಿ ಸಲ್ಲಿಸಬಹುದು.

ಜಾಗತಿಕ ಎಐ ಪೂರೈಕೆ ಸರಪಳಿ ವ್ಯವಸ್ಥೆಗೆ ಮೈತ್ರಿ; ಅಮೆರಿಕ ನೇತೃತ್ವದ ಗುಂಪಿಗೆ ಭಾರತ ಸೇರ್ಪಡೆ

ಹಂತ ಹಂತವಾಗಿ ಮಾಹಿತಿ ತೆಗೆದುಹಾಕುವ ವಿಧಾನ

  • ಗೂಗಲ್ ಸರ್ಚ್‌ನಿಂದ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ವಿಳಾಸವನ್ನು ತೆಗೆದುಹಾಕಲು ಮೊದಲು ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಆ್ಯಪ್ ತೆರೆಯಿರಿ. ಅಥವಾ ಕಂಪ್ಯೂಟರ್ ಬ್ರೌಸರ್‌ನಲ್ಲಿ ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಿ.
  • ನಂತರ ಮೇಲಿನ ಬಲಭಾಗದಲ್ಲಿ ಕಾಣಿಸುವ ನಿಮ್ಮ ಪ್ರೊಫೈಲ್ ಫೋಟೊ ಮೇಲೆ ಕ್ಲಿಕ್ ಮಾಡಿ. ಅಲ್ಲಿ ‘Results about you’ ಆಯ್ಕೆಯನ್ನು ಹುಡುಕಿ. ಮೊದಲ ಬಾರಿಗೆ ಈ ಸೌಲಭ್ಯ ಬಳಸುತ್ತಿದ್ದರೆ ‘Get Started’ ಮೇಲೆ ಕ್ಲಿಕ್ ಮಾಡಿ. ಬಳಿಕ ತೆರೆಯುವ ಫಾರ್ಮ್‌ನಲ್ಲಿ ನಿಮ್ಮ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಪ್ರಸ್ತುತ ಮನೆಯ ವಿಳಾಸವನ್ನು ನಮೂದಿಸಿ ಸೇವ್ ಮಾಡಬೇಕು.
  • ನಿರ್ದಿಷ್ಟ ವೆಬ್‌ಸೈಟ್‌ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ಬಯಸಿದರೆ, ಗೂಗಲ್‌ನ ‘Remove outdated content’ ಅಥವಾ ‘Personal info removal request’ ಪುಟಕ್ಕೆ ಭೇಟಿ ನೀಡಿ. ಅಲ್ಲಿ ಸಂಬಂಧಪಟ್ಟ ವೆಬ್‌ಪೇಜ್‌ನ ಯುಆರ್‌ಎಲ್ ನಮೂದಿಸಿ ಮನವಿ ಸಲ್ಲಿಸಬಹುದು. ಬಳಿಕ ಗೂಗಲ್ ನಿಮ್ಮ ಮನವಿಯನ್ನು ಪರಿಶೀಲಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More