ಡಿಜಿಟಲ್ ಯುಗದಲ್ಲಿ ಹೂಡಿಕೆ ಎಂಬುದು ಅತಿ ಅವಶ್ಯಕವಾಗಿದೆ. ಇದಕ್ಕಾಗಿ ಹಲವಾರು ವೇದಿಕೆಗಳು ಹುಟ್ಟಿಕೊಂಡಿವೆ. ಹೀಗೆ ಹುಟ್ಟಿಕೊಂಡ ಕಂಪನಿಗಳಲ್ಲಿ ಹೂಡಿಕೆ(Investment)ಯಿಂದ ಲಾಭ ಪಡೆದವರೂ ಇದ್ದಾರೆ, ನಷ್ಟ ಅನುಭವಿಸಿದವರೂ ಇದ್ದಾರೆ. ಆದರೆ, ನಾವು ಇನ್ವೆಸ್ಟ್(Invest) ಮಾಡುವಾಗ ಕಂಪನಿಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಅಯ್ಯೋ ದುರ್ವಿಧಿಯೇ, ಈ ಸ್ಟಾಕ್ ಮಾರ್ಕೆಟ್(Stock Market)ಗಳ ಸಹವಾಸವೇ ಸಾಕು ಎಂದು ಅನಿಸಿ ಬಿಡುತ್ತದೆ. ಇದಕ್ಕಾಗಿ ನಾವು ನಿಮಗೆ ಈ ಸ್ಟೋರಿಯಲ್ಲಿ ಒಂದಷ್ಟು ಸಲಹೆಗಳನ್ನು ನೀಡುತ್ತೇವೆ. ಸಂಪೂರ್ಣವಾಗಿ ಓದಿ.
3ಜಿ, 4ಜಿ ಸಾಗಿ 5ಜಿ ದುನಿಯಾದತ್ತ ಜಗತ್ತು ಸಾಗುತ್ತಿದೆ. ಇಂಥ ದುಬಾರಿ ಡಿಜಿಟಲ್ ಯುಗದಲ್ಲಿ ಹೂಡಿಕೆ ಮಾಡುವಾಗ ಕಂಪನಿ ಅಥವಾ ಸಂಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲೇಬೇಕು. ಇಲ್ಲದಿದ್ದರೆ, ಓರ್ವ ವ್ಯಕ್ತಿ ಸ್ಟಾಕ್ ಮಾರ್ಕೆಟ್ನಲ್ಲಿ ಬ್ಯಾಂಕ್ವೊಂದರಲ್ಲಿ ದೊಡ್ಡ ಸಂಖ್ಯೆ ಹೂಡಿಕೆ ಮಾಡಿದ್ದಾನೆ ಎಂದು ತಿಳಿದುಕೊಳ್ಳಿ. ಈ ವೇಳೆಗೆ ಆ ಬ್ಯಾಂಕ್ ಮುಚ್ಚುವ ಹಂತಕ್ಕೆ ಬಂದುಬಿಟ್ಟರೆ ಆ ವ್ಯಕ್ತಿಗೆ ಸಾಕಪ್ಪಾ ಸಾಕು ಈ ಸ್ಟಾಕ್ ಮಾರ್ಕೆಟ್ ಸಹವಾಸ ಎಂಬಂತಾಗಿಬಿಡುತ್ತದೆ.
ಹಾಗಿದ್ದರೆ ಹೂಡಿಕೆದಾರರು ಹೂಡಿಕೆ ಮಾಡುವ ಕಂಪನಿ ಬಗ್ಗೆ ತಿಳಿದುಕೊಳ್ಳುವುದು ಹೇಗೆ? ಅವ್ಯವಹಾರ ನಡಿತಿದೆಯಾ? ಅದನ್ನು ತಿಳಿದುಕೊಳ್ಳಬಹುದಾ? ಎಂಬ ಪ್ರಶ್ನೆಗೆ ಖಂಡಿತಾ ಉತ್ತರವಿದೆ. ಮೊದಲು ನೀವು ಕಂಪನಿಯ ವಾರ್ಷಿಕ ವರದಿಯಲ್ಲಿರುವ ಕ್ಯಾಶ್-ಫ್ಲೋ ವಿಶ್ಲೇಷಣೆ ಮತ್ತು ಹಣಕಾಸು ಟಿಪ್ಪಣಿಗಳನ್ನ ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ವಾರ್ಷಿಕ ಆದಾಯ ಓದುವಾಗ ಕ್ಯಾಶ್-ಫ್ಲೋ ಚೆಕ್ ಮಾಡಬೇಕು. ಇಲ್ಲಿ ಕಂಪನಿ ವ್ಯವಹಾರಕ್ಕೆ ಎಲ್ಲಿಂದ ಹಣ ಸಂಗ್ರಹಿಸುತ್ತದೆ, ಯಾವುದಕ್ಕೆ ಖರ್ಚು ಮಾಡುತ್ತದೆ ಎಂಬಿತ್ಯಾದಿ ಮಾಹಿತಿ ಲಭ್ಯವಾಗುತ್ತದೆ ಮತ್ತು ಲಾಭ ಎಷ್ಟು ಎಂದು ತಿಳಿಯುತ್ತದೆ.
ಕೆಲವೊಮ್ಮೆ ಕೆಲವು ಕಂಪನಿಗಳು, ಮಾಡಿರುವ ಲಾಭಕ್ಕೂ ಕ್ಯಾಶ್-ಫ್ಲೋದಲ್ಲಿ ತೋರಿಸಿರುವ ಲಾಭಕ್ಕೂ ಸಂಬಂಧವೇ ಇಲ್ಲದಂತೆ ಮಾಡಿ ಬಿಡುತ್ತವೆ. ಈಗ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಬೇಕು. ಕಂಪನಿ ತನ್ನ ವ್ಯವಹಾರದಿಂದ ಸಾಕಷ್ಟು ಹಣ ಗಳಿಸಿ ತನಗಾಗಿ ಒಂದು ನಗದು ಮೀಸಲು ನಿಧಿಯನ್ನು ಹೊಂದುವ ಸಾಮರ್ಥ್ಯ ಹೊಂದಿದೆಯೇ ಅಥವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಕ್ಯಾಶ್-ಫ್ಲೋ ಸ್ಟೇಟ್ಮೆಂಟ್ ಸಹಾಯ ಮಾಡತ್ತದೆ.
ಕಂಪನಿ ಹಿಂದಿನ 2 ವರ್ಷಗಳಲ್ಲಿ ಲಾಭ ತೋರಿಸಿದ್ದರೆ ಕಂಪನಿ ಆರಂಭದಲ್ಲಿ ಸ್ಥಿರವಾದ ಕ್ಯಾಶ್-ಫ್ಲೋ ಹೊಂದಿತ್ತು ಎಂದು ಅರ್ಥ. ಆದರೆ, ಸ್ವಲ್ಪ ಸಮಯದಲ್ಲಿಯೇ ಅದರ ಲಾಭ ಕುಸಿಯಲು ಆಂರಂಭಿಸಿದೆ ಎಂದಾಗ ನೀವು ಆಲೋಚಿಸಬೇಕಾಗುತ್ತದೆ. ಹಾಗಾದರೆ ಈಗ ಮೊದಲಿನ ಲಾಭಾಂಶ ಯಾಕೆ ಬರುತ್ತಿಲ್ಲ. ಎಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ? ಎಂಬುದನ್ನು ಗಮನಿಸಬೇಕಾಗುತ್ತದೆ. ಕಂಪನಿ ತನ್ನ ವ್ಯವಹಾರವನ್ನೇನಾದರೂ ವಿಸ್ತರಣೆ ಮಾಡುತ್ತಿದೆಯಾ ಎಂದು ತಿಳಿದುಕೊಳ್ಳಬೇಕು. ಇದು ನಿಜವಾಗಿದ್ದರೆ ವ್ಯವಹಾರದಲ್ಲಿ ಎಡವಟ್ಟಾಗಿದೆ ಎಂದು ಅರ್ಥ.
ಹಣಕಾಸು ಟಿಪ್ಪಣಿಗಳು ಹೆಚ್ಚಿನ ಸಂಖ್ಯೆಯ ಮುಖ್ಯವಾದ ಮಾಹಿತಿಗಳನ್ನು ಹೊರಹಾಕಬಹುದು. ಎಲ್ಐಸಿ ಮ್ಯೂಚ್ಯುಯಲ್ ಫಂಡ್ ಅಸೆಟ್ ಮ್ಯಾನೇಜ್ ಮೆಂಟ್ ನ ಹಿರಿಯ ಈಕ್ವಿಟಿ ಸಂಶೋಧನಾ ವಿಶ್ಲೇಷಕ ಹಾಗೂ ಫಂಡ್ ಮ್ಯಾನೇಜರ್ ಕರಣ್ ದೋಷಿ ಹೇಳುವಂತೆ, ಒಂದು ಕಂಪನಿಯ ವಾರ್ಷಿಕ ವರದಿಯನ್ನು ನೋಡುವಾಗ, ಹೂಡಿಕೆದಾರರು ಅದರ ನಿರ್ವಹಣೆ, ಸಂಭಾಷಣೆ, ಹಾಗೂ ವಿಶ್ಲೇಷಣೆ ವಿಭಾಗವನ್ನು ನೋಡಬೇಕು. ಇದು ಉದ್ಯಮದ ಸದ್ಯದ ಸ್ಥಿತಿಯನ್ನು ಹಾಗೂ ಕಂಪನಿಯ ವ್ಯವಹಾರದ ಸಾಗುತ್ತಿರುವ ದಿಕ್ಕನ್ನು ಸ್ಪಷ್ಟವಾಗಿ ತೋರಿಸುತ್ತದೆ.
Published On - 11:48 am, Sun, 15 May 22