ದೆಹಲಿ: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (Indraprastha Gas Limited – IGL) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (Compressed Natural Gas – CNG) ದರವನ್ನು ಪ್ರತಿ ಕೆಜಿಗೆ ₹ 2 ರೂಪಾಯಿಯಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆಯಿಂದಿಗೆ ದೆಹಲಿಯಲ್ಲಿ ಒಂದು ಕೆಜಿ ಸಿಎನ್ಜಿ ಬೆಲೆ ₹ 73.61, ನೊಯ್ಡಾದಲ್ಲಿ ₹ 76.17 ಮತ್ತು ಗುರುಗ್ರಾಮದಲ್ಲಿ ₹ 81.94 ಆಗುತ್ತದೆ. ಬೆಂಗಳೂರಿನಲ್ಲಿ ಒಂದು ಕೆಜಿ ಸಿಎನ್ಸಿ ಬೆಲೆ ₹ 83ಕ್ಕೆ ಮಾರಾಟವಾಗುತ್ತಿದೆ. ಮೇ ತಿಂಗಳಿನಿಂದ ಈಚೆಗೆ ಸಿಎನ್ಜಿ ಬೆಲೆ ₹ 8ರಷ್ಟು ಹೆಚ್ಚಾಗಿದೆ.
ದೇಶದ ವಿವಿಧ ನಗರಗಳಲ್ಲಿಯೂ ಸಿಎನ್ಜಿ ದರವನ್ನು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಹೆಚ್ಚಿಸಿದೆ. ರೇವಾರಿಯಲ್ಲಿ ₹ 84.07, ಕರ್ನಾಲ್ನಲ್ಲಿ ₹ 82.27, ಕೈತಾಲ್ನಲ್ಲಿ ₹ 85.40ಕ್ಕೆ ಒಂದು ಕೆಜಿ ಸಿಎನ್ಜಿ ಸಿಗುತ್ತಿದೆ. ಕಾನ್ಪುರ್, ಹಮಿರ್ಪುರ್ ಮತ್ತು ಫತೇಪುರ್ನಲ್ಲಿ ಸಿಎನ್ಜಿ ದರ ₹ 83.88 ಇದ್ದರೆ, ಅಜ್ಮೇರ್, ಪಾಲಿ ಮತ್ತು ರಾಜಸಮಂದ್ನಲ್ಲಿ ₹ 83.88ಕ್ಕೆ ಒಂದು ಕೆಜಿ ಸಿಎನ್ಜಿ ಸಿಗುತ್ತಿದೆ.
ಕಳೆದ ಅಕ್ಟೋಬರ್ನಿಂದ ದೇಶದ ವಿವಿಧೆಡೆ ಸಿಎನ್ಜಿ ದರ ನಿಯಮಿತವಾಗಿ ಹೆಚ್ಚಾಗುತ್ತಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದರಗಳ ಹೆಚ್ಚಳಕ್ಕೆ ಅನುಗುಣವಾಗಿ ಸಿಎನ್ಜಿ ದರವೂ ಏರಿಳಿತ ಕಾಣುತ್ತಿದೆ.
ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಪೆಟ್ರೋಲ್ ದರ ಏರಿಕೆ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:16 am, Sun, 15 May 22