ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಇಂದು(ಅ.7) ಕೊನೆಯ ದಿನ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆ.30ರಂದು ಈ ಆದೇಶವನ್ನು ಹೊರಡಿಸಿತ್ತು. ಸೆ.30 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನವಾಗಿತ್ತು. ಆದರೆ ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸುವ ನಿರ್ಧಾರವನ್ನು ಆರ್‌ಬಿಐ ಮಾಡಿತ್ತು. ಅದಕ್ಕಾಗಿ ಅ.7ರವರೆಗೆ ಮರಳಿಸಲು ಮತ್ತು ವಿನಿಮಯ ಕಲಾವಕಾಶವನ್ನು ನೀಡಲಾಗಿತ್ತು. ಇಂದು 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಕೊನೆಯ ದಿನವಾಗಿದೆ. ಅ.7ರ ನಂತರ 2,000 ರೂ. ನೋಟುಗಳನ್ನು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಇನ್ನು ಈ 19 ಕಛೇರಿಗಳಲ್ಲಿ 20 ಸಾವಿರದವರೆಗೆ ವಿನಿಮಯ ಮಾಡಿಕೊಳ್ಳಬಹುದು. ಜತೆಗೆ 2 ಸಾವಿರ ನೋಟುಗಳನ್ನು ಜನರು ತಮ್ಮ ಬ್ಯಾಂಕ್ಗಳಲ್ಲಿ ಯಾವುದೇ ಮೊತ್ತಕ್ಕೆ ಕ್ರೆಡಿಟ್ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಆರ್‌ಬಿಐ ಪ್ರಕಾರ 2,000 ರೂ. ನೋಟು ಅ.7ರವರೆಗೆ ಕಾನೂನುಬದ್ಧವಾಗಿ ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ ಈ ನೋಟುಗಳನ್ನು ಯಾವುದೇ ವಹಿವಾಟುಗಳಲ್ಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಅ.7 ನಂತರ ಆರ್‌ಬಿಐ ಸೂಚಿಸಿದ 19 ಕಛೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು.
RBI FAQ ಗಳ ಪ್ರಕಾರ, 2 ಸಾವಿರ ನೋಟುಗಳನ್ನು ವ್ಯಕ್ತಿ ಅಥವಾ ಸಂಸ್ಥೆಗಳು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ 20 ಸಾವಿರದವರೆಗೆ ವಿನಿಮಯ ಮಾಡಿಕೊಳ್ಳಬಹುದು. ಈ ಮೊತ್ತವನ್ನು ಭಾರತದಲ್ಲಿರುವ ಯಾವುದೇ ಬ್ಯಾಂಕ್ಗಳ ಖಾತೆಗಳಿಗೆ ಜಮೆ ಮಾಡಿಕೊಳ್ಳಬಹುದು. ಆದರೆ ಈ 19 ಕಛೇರಿಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮೊದಲು ಅದಕ್ಕೆ ಸರಿಯಾದ ದಾಖಲೆಗಳು ಬೇಕು ಮತ್ತು ಪಾನ್ ಕಾರ್ಡ್, ಆಧಾರ್ ಕಾರ್ಡ್ನಂತಹ ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆಗಳು ಇರಬೇಕು ಎಂದು ಹೇಳಿದೆ.
ಇದನ್ನೂ ಓದಿ: ಚಲಾವಣೆಯಿಂದ ಹಿಂಪಡೆಯಲಾದ 2,000 ರೂ ನೋಟುಗಳಲ್ಲಿ ಈವರೆಗೆ ಮರಳಿರುವುದು ಎಷ್ಟು? ಆರ್‌ಬಿಐ ನೀಡಿದ ಮಾಹಿತಿ ಇದು
ಆರ್‌ಬಿಐ ನಿಗಪಡಿಸಿರುವ 18 ಕಛೇರಿಗಳಲ್ಲಿ 2 ಸಾವಿರದ ನೋಟನ್ನು ವಿನಿಮಯ ಮಾಡಿಕೊಳ್ಳಲು ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂಗಳಲ್ಲಿ ಶಾಖೆಯನ್ನು ಈಗಾಗಲೇ ತೆರೆಯಲಾಗಿದೆ.
ಇದಲ್ಲದೆ ನಿಮ್ಮ ಹತ್ತಿರದ ಬ್ಯಾಂಕ್ಗಳಲ್ಲಿ ಈ ವಿನಿಮಯಗಳನ್ನು ಮಾಡಿಕೊಳ್ಳಬಹುದು. ಆದರೆ ಇದು ಆರ್‌ಬಿಐ ಸೂಚಿಸಿದ 19 ಕಚೇರಿಗಳ ವ್ಯಾಪ್ತಿಯನ್ನು ಹೊಂದಿರಬೇಕು. ಒಂದು ವೇಳೆ ಈ ಕಚೇರಿಗಳು ನಿಮ್ಮ ಬ್ಯಾಂಕ್ಗಳಲ್ಲಿ ಇಲ್ಲವೆಂದರೆ, 2 ಸಾವಿರ ನೋಟುಗಳನ್ನು ಪೋಸ್ಟ್ ಕೂಡ ಮಾಡಬಹುದು ಎಂದು ಆರ್‌ಬಿಐ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Sat, 7 October 23