₹ 2,000 ನೋಟುಗಳ ವಿನಿಮಯಕ್ಕೆ ಅ.7ರವರೆಗೆ ಕಾಲಾವಕಾಶ: ಆರ್​​ಬಿಐ

ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್​ 7ವರೆಗೆ ಅವಕಾಶ ನೀಡಲಾಗುವುದು ಎಂದು ಆರ್​​ಬಿಐ ನಿರ್ಧಾರಿಸಿದೆ.

₹ 2,000 ನೋಟುಗಳ ವಿನಿಮಯಕ್ಕೆ ಅ.7ರವರೆಗೆ ಕಾಲಾವಕಾಶ: ಆರ್​​ಬಿಐ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 30, 2023 | 8:50 PM

ದೆಹಲಿ, ಸೆ.30: ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು (Deadline) ಒಂದು ತಿಂಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ ರಿಸರ್ವ್​​ ಬ್ಯಾಂಕ್ (RBI) ಸ್ಪಷ್ಟನೆ ನೀಡಿದ್ದು, 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್​ 7ವರೆಗೆ ಅವಕಾಶ ನೀಡಲಾಗುವುದು ಎಂದು ಇಂದು (ಸೆ.30) ಹೇಳಿದೆ.

ಇನ್ನು 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಇಂದಿಗೆ ಅಂದರೆ ಸೆ.30ಕ್ಕೆ ಕೊನೆಯ ದಿನಾಂಕವಾಗಿತ್ತು. ಆದರೆ ಈ ದಿನಾಂಕವನ್ನು ಇನ್ನು 7 ದಿನಕ್ಕೆ ವಿಸ್ತರಿಸಬೇಕು ಎಂಬ ಅಭಿಪ್ರಾಯವನ್ನು ಪರಿಶೀಲನೆ ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆರ್​​ಬಿಐ ತಿಳಿಸಿರುವ ಪ್ರಕಟಣೆ ಪ್ರಕಾರ ಅ.7ರವರೆಗೆ ಸಾರ್ವಜನಿಕ ತಮ್ಮ ಸಂಬಂಧಪಟ್ಟ ಬ್ಯಾಂಕ್​​​ಗಳಿಗೆ ಹೋಗಿ 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್​​​ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಲ್ಲಿಯವರೆಗೆ 2,000 ರೂ. ಕಾನೂನು ಬದ್ಧವಾಗಿ ವಿನಿಮಯ ಅವಕಾಶ ಇದೆ ಎಂದು ಹೇಳಿದೆ.

ಅಕ್ಟೋಬರ್ 7 ರ ನಂತರ ಏನಾಗುತ್ತದೆ?

ಆರ್‌ಬಿಐ ಪ್ರಕಾರ, ಅಕ್ಟೋಬರ್ 7ರ ನಂತರವೂ ಗ್ರಾಹಕರು ಈ ನೋಟುಗಳನ್ನು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಈ ಮೊತ್ತವನ್ನು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳ ಮೂಲಕವೂ ವ್ಯಕ್ತಿ ಅಥವಾ ಸಂಸ್ಥೆಗಳು ತಮ್ಮ ಖಾತೆಗೆ ಜಮಾ (ಕ್ರೆಡಿಟ್​) ಮಾಡಿಕೊಳ್ಳಬಹುದು.

ಎಎನ್​​ಐ ಟ್ವೀಟ್​​ ಇಲ್ಲಿದೆ

ಆರ್​​ಬಿಐ ತಿಳಿಸಿದ ಈ ದಿನಾಂಕದ ಒಳಗೆ 2,000 ರೂ. ನೋಟು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದಿದ್ದಾರೆ ಅಥವಾ ನೀವು ಇರುವ ಪ್ರದೇಶದಲ್ಲಿ ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳ ಇಲ್ಲವೆಂದರೆ 2,000 ರೂ. ನೋಟುಗಳನ್ನು ಪೋಸ್ಟ್​​ ಮೂಲಕವು ಕಳುಹಿಸಬಹುದು ಎಂದು ಹೇಳಿದೆ. ಇನ್ನು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸಿದರೆ, ನಿಮ್ಮಲ್ಲಿ ಸೂಕ್ತ ದಾಖಲೆಗಳು ಬೇಕು. ಇದನ್ನು ಪರಿಶೀಲನೆ ನಡೆಸಿದ ನಂತರವೇ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ ಎಂದು ಹೇಳಿದೆ.

ಇದನ್ನೂ ಓದಿ:ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್ ವಿಸ್ತರಣೆ; ಅಕ್ಟೋಬರ್​ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ

ಇಲ್ಲಿಯವರೆಗೆ 96%ದಷ್ಟು 2000 ರೂ. ನೋಟುಗಳು ವಾಪಸು

ಆರ್​​ಬಿಐ ಮೇ 19ರಂದು 2000 ರೂ. ಮುಖ ಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ತಕ್ಷಣಕ್ಕೆ ಜಾರಿಗೆ ಬರುವಂತೆ 2000 ರೂ. ಚಲಾವಣೆ ಮಾಡದಂತೆ ಎಲ್ಲ ಬ್ಯಾಂಕ್​​ಗಳಿಗೆ ಹಾಗೂ ಸಾರ್ವಜನಿಕರಿಗೆ ಆದೇಶವನ್ನು ನೀಡಿತ್ತು. ಕ್ಲೀನ್ ನೋಟ್ ಪಾಲಿಸಿಯ ಮೂಲಕ 2000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ ಅನುಗುಣವಾಗಿ 2000 ರೂ. ನೋಟುಗಳನ್ನು ಬ್ಯಾಂಕ್​​ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆ.30ರವರೆಗೆ ಅವಕಾಶವನ್ನು ನೀಡಿತ್ತು.

ಇತ್ತೀಚಿಗೆ ಆರ್‌ಬಿಐ ಬಿಡುಗಡೆ ಮಾಡಿದ ವರದಿ ಪ್ರಕಾರ ಮೇ 19ರ ಆದೇಶದಿಂದ ಇಲ್ಲಿಯವರೆಗೆ 2000 ರೂ. ಮುಖಬೆಲೆಯ ನೋಟುಗಳು 96 ಪ್ರತಿಶತದಷ್ಟು ಬ್ಯಾಂಕ್​​ಗಳಿಗೆ ಹಿಂತಿರುಗಿಸಲಾಗಿದೆ. ಇನ್ನು ಆರ್‌ಬಿಐ, ಬ್ಯಾಂಕ್‌ಗಳಿಂದ ಪಡೆದ ಅಂಕಿಅಂಶಗಳ ಪ್ರಕಾರ ಮೇ 19ರ ಮೊದಲು ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆ ನೋಟುಗಳು 3.56 ಲಕ್ಷ ಕೋಟಿ. ಆರ್​​​ಬಿಐ ಮೇ 19ರಂದು 2000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಆದೇಶ ನೀಡಿದ ನಂತರ ಬ್ಯಾಂಕ್​​ಗೆ ಬಂದ ಹಣ 3.42 ಲಕ್ಷ ಕೋಟಿ. ಆದರೆ ಕೇವಲ 0.14 ಲಕ್ಷ ಕೋಟಿ ಚಲಾವಣೆಯಲ್ಲಿ ಉಳಿದಿದೆ ಎಂದು ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sat, 30 September 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ