ಅಕ್ಟೋಬರ್ ತಿಂಗಳಲ್ಲಿ 28 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟ; ಒಟ್ಟಾರೆ ರೀಟೇಲ್ ಸೇಲ್ಸ್ ಶೇ. 32ರಷ್ಟು ಹೆಚ್ಚಳ

Indian automobile industry: ಹಬ್ಬದ ಸೀಸನ್ ಇದ್ದ ಅಕ್ಟೋಬರ್ ತಿಂಗಳಲ್ಲಿ ವಾಹನಗಳ ಮಾರಾಟದ ಬಿಸಿನೆಸ್ ಭರ್ಜರಿಯಾಗಿ ನಡೆದಿದೆ. ಫಾಡಾ ವರದಿ ಪ್ರಕಾರ ಅಕ್ಟೋಬರ್​ನಲ್ಲಿ 28,32,944 ವಾಹನಗಳ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸೇಲ್ಸ್ ಶೇ. 32ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್​ಗೆ ಹೋಲಿಸಿದರೆ ಮಾರಾಟ ಹೆಚ್ಚಳ ಬರೋಬ್ಬರಿ ಶೇ. 75ರಷ್ಟಿದೆ.

ಅಕ್ಟೋಬರ್ ತಿಂಗಳಲ್ಲಿ 28 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟ; ಒಟ್ಟಾರೆ ರೀಟೇಲ್ ಸೇಲ್ಸ್ ಶೇ. 32ರಷ್ಟು ಹೆಚ್ಚಳ
ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2024 | 2:55 PM

ನವದೆಹಲಿ, ನವೆಂಬರ್ 6: ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ವಾಹನಗಳ ರೀಟೇಲ್ ಮಾರಾಟದಲ್ಲಿ ಶೇ. 32ರಷ್ಟು ಹೆಚ್ಚಳವಾಗಿದೆ. ಆಟೊಮೊಬೈಲ್ ಡೀಲರ್​ಗಳ ಒಕ್ಕೂಟವಾದ ಎಫ್​ಎಡಿಎ ಪ್ರಕಟಿಸಿರುವ ಮಾಹಿತಿ ಪ್ರಕಾರ ಅಕ್ಟೋಬರ್​ನ ಒಂದು ತಿಂಗಳಲ್ಲಿ 28,32,944 ವಾಹನಗಳ ಮಾರಾಟವಾಗಿದೆ. ಇದರಲ್ಲಿ ದ್ವಿಚಕ್ರ ವಾಹನ, ಕಾರುಗಳೂ ಸೇರಿವೆ. ಕಳೆದ ವರ್ಷದ (2023) ಅಕ್ಟೋಬರ್​ನಲ್ಲಿ 21,43,929 ವಾಹನಗಳ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 32ರಷ್ಟು ಹೆಚ್ಚು ವಾಹನಗಳ ಸೇಲ್ ಆಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ವಾಹನಗಳ ಮಾರಾಟದಲ್ಲಿ ಬರೋಬ್ಬರಿ ಶೇ. 75ರಷ್ಟು ಹೆಚ್ಚಳವಾಗಿದೆ. ಅಕ್ಟೋಬರ್​ನಲ್ಲಿ ಹಬ್ಬದ ಸೀಸನ್ ಪ್ರಯುಕ್ತ ಡಿಸ್ಕೌಂಟ್ ಹೆಚ್ಚಿದ್ದರಿಂದ ಹೆಚ್ಚು ಸೇಲ್ ಆಗಿರುವ ಸಾಧ್ಯತೆ ಇದೆ.

ಗ್ರಾಮೀಣ ಭಾಗದಲ್ಲಿ ಹೆಚ್ಚು ಹುಮ್ಮಸ್ಸು…

ವಾಹನಗಳ ಮಾರಾಟದಲ್ಲಿ ಆಗಿರುವ ಹೆಚ್ಚಳದಲ್ಲಿ ಗ್ರಾಮೀಣ ಭಾಗದ ಪಾಲು ಹೆಚ್ಚಿದೆ. ಅದರಲ್ಲೂ ದ್ವಿಚಕ್ರ ವಾಹನ ಮತ್ತು ಪ್ಯಾಸೆಂಜರ್ ವಾಹನಗಳ ಮಾರಾಟವು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚಳ ಕಂಡಿದೆ. ಗ್ರಾಮೀಣ ಭಾಗದಲ್ಲಿ ಈ ಬಾರಿ ಉತ್ತಮ ಮುಂಗಾರು ಮತ್ತು ಉತ್ತಮ ಬೆಳೆ ನಿರೀಕ್ಷೆ ಇರುವುದರಿಂದ ಜನರ ಹುಮ್ಮಸ್ಸು ಹೆಚ್ಚಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್​ನಲ್ಲಿ ಭಾರೀ ಬಿಸಿನೆಸ್

2024ರ ಅಕ್ಟೋಬರ್​ನಲ್ಲಿ ಯಾವೆಲ್ಲಾ ವಾಹನ ಮಾರಾಟ ಎಷ್ಟು?

  • ಪ್ರಯಾಣಿಕ ವಾಹನ (ಪಿವಿ): 4,83,159
  • ದ್ವಿಚಕ್ರ ವಾಹನ: 20,65,095
  • ತ್ರಿಚಕ್ರ ವಾಹನ: 1,22,846
  • ಟ್ರಾಕ್ಟರ್: 64,433

ಇಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಕಾರು, ಬಸ್ಸು ಇತ್ಯಾದಿ ಜನರನ್ನು ಸಾಗಿಸುವ ವಾಹನಗಳು ಸೇರುತ್ತವೆ. 2023ರ ಅಕ್ಟೋಬರ್​ನಲ್ಲಿ ಈ ಪ್ಯಾಸೆಂಜರ್ ವಾಹನಗಳು ಮಾರಾಟವಾದ ಸಂಖ್ಯೆ 3,64,991. ಈ ಬಾರಿ ಅದು ಶೇ. 32.38ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಲಕ್ಷ ಕೋಟಿ ರೂ ದಾಖಲೆ ಮಾರಾಟ; ಸಣ್ಣ ನಗರಗಳಿಂದಲೇ ಭರ್ಜರಿ ಶಾಪಿಂಗ್

ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷದ ಅಕ್ಟೋಬರ್​ನಲ್ಲಿ 15,14,634 ಇತ್ತು. ಈ ಬಾರಿ ಮಾರಾಟ ಪ್ರಮಾಣ ಶೇ. 36.35ರಷ್ಟು ಹೆಚ್ಚಾಗಿದೆ. ಇನ್ನು ತ್ರಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷದಕ್ಕಿಂತ ಶೇ. 11.45ರಷ್ಟು ಹೆ್ಚಾಗಿದೆ. ಹಾಗೆಯೇ, ಟ್ರಾಕ್ಟರ್​ಗಳ ಮಾರಾಟ 2023ರ ಅಕ್ಟೋಬರ್​ನಲ್ಲಿ 62,542 ಇತ್ತು. ಈ ಬಾರಿ ಆ ಸಂಖ್ಯೆ ಶೇ. 3.08ರಷ್ಟು ಏರಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ