AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್​ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್​ನಲ್ಲಿ ಭಾರೀ ಬಿಸಿನೆಸ್

Indian automobile industry: ಹೀರೋ ಮೋಟೋಕಾರ್ಪ್, ಟಿವಿಎಸ್ ಮೋಟಾರ್, ರಾಯಲ್ ಎನ್​ಫೀಲ್ಡ್​ನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಬಜಾಜ್ ಆಟೊ ಹೊರತುಪಡಿಸಿ ಇತರ ಪ್ರಮುಖ ಕಂಪನಿಗಳ ಬಿಸಿನೆಸ್ ಅಕ್ಟೋಬರ್​ನಲ್ಲಿ ಹೆಚ್ಚಾಗಿದೆ. ಭಾರತೀಯ ಕಂಪನಿಗಳು ದ್ವಿಚಕ್ರ ವಾಹನಗಳ ರಫ್ತಿನಲ್ಲೂ ಹೆಚ್ಚಳ ಸಾಧಿಸಿವೆ.

ಅಕ್ಟೋಬರ್​ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್​ನಲ್ಲಿ ಭಾರೀ ಬಿಸಿನೆಸ್
ಹೀರೋ ಬೈಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2024 | 10:49 AM

Share

ನವದೆಹಲಿ, ನವೆಂಬರ್ 6: ಅಕ್ಟೋಬರ್ ತಿಂಗಳಲ್ಲಿ ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರು ಒಳ್ಳೆಯ ಬಿಸಿನೆಸ್ ಕಂಡಿದ್ದಾರೆ. ಟಿವಿಎಸ್ ಮೋಟಾರ್, ಹೀರೋ ಮೋಟೋಕಾರ್ಪ್, ರಾಯಲ್ ಎನ್​ಫೀಲ್ಡ್ ಇತ್ಯಾದಿ ಪ್ರಮುಖ ಸಂಸ್ಥೆಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ. 13ರಿಂದ 26ರ ಶ್ರೇಣಿಯಲ್ಲಿ ಹೆಚ್ಚಳವಾಗಿದೆ. ಆದರೆ, ಬಜಾಜ್ ಆಟೊ ಸಂಸ್ಥೆ ಮಾತ್ರ ಕಡಿಮೆ ಮಾರಾಟ ಕಂಡಿದೆ.

ಟಿವಿಎಸ್ ಮೋಟಾರ್ ಸಂಸ್ಥೆ ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದರೆ ಈ ಬಾರಿ ಶೇ. 13ರಷ್ಟು ಹೆಚ್ಚು ಮಾರಾಟ ಮಾಡಿದೆ. 2023ರ ಅಕ್ಟೋಬರ್​ನಲ್ಲಿ ಅದು 3,44,957 ದ್ವಿಚಕ್ರ ವಾಹನಗಳನ್ನು ಮಾರಿತ್ತು. ಈ ಅಕ್ಟೋಬರ್​ನಲ್ಲಿ ಆ ಸಂಖ್ಯೆ 3,90,489 ಯುನಿಟ್​ಗೆ ಏರಿದೆ. ಅದರ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಶೇ. 45ರಷ್ಟು ಹೆಚ್ಚಳವಾಗಿರುವುದು ಗಮನಾರ್ಹ.

ವಿಶ್ವದ ಎರಡನೇ ಅತಿದೊಡ್ಡ ದ್ವಿಚಕ್ರ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಈ ಅಕ್ಟೋಬರ್​ನಲ್ಲಿ ಶೇ 17.4ರಷ್ಟು ಮಾರಾಟ ಹೆಚ್ಚಳ ಕಂಡಿದೆ. ಅಕ್ಟೋಬರ್​ನಲ್ಲಿ ಅದು ಬರೋಬ್ಬರಿ 6,57,403 ಟೂ ವ್ಹೀಲರ್​ಗಳನ್ನು ಮಾರಿದೆ. ಅದರ 100 ಸಿಸಿ ಮತ್ತು 125ಸಿಸಿ ಬೈಕ್​ಗಳು ಬಹಳ ಜನಪ್ರಿಯವಾಗಿವೆ.

ಇದನ್ನೂ ಓದಿ: ಗಾರ್ಮೆಂಟ್ಸ್ ರಫ್ತು: ಭಾರತ ಬಿಟ್ಟು ಮಾಲ್ಡೀವ್ಸ್ ಮಾರ್ಗ ಹಿಡಿದ ಬಾಂಗ್ಲಾದೇಶ; ಭಾರತಕ್ಕೇನು ಹಾನಿ?

ರಾಯಲ್ ಎನ್​ಫೀಲ್ಡ್ ಬೈಕ್ ಎಲ್ಲರಿಗಿಂತ ಹೆಚ್ಚು ಹೈಜಂಪ್ ಮಾಡಿದೆ. ಕಳೆದ ವರ್ಷದ ಅಕ್ಟೋಬರ್​ನಲ್ಲಿ 80,958 ರಾಯಲ್ ಎನ್​ಫೀಲ್ಡ್ ಬೈಕ್​ಗಳು ಮಾರಾಟವಾಗಿದ್ದವು. ಈ ಬಾರಿ ಆ ಸಂಖ್ಯೆ 1,01,886 ಯೂನಿಟ್​ಗೆ ಏರಿದೆ. ಇದು ಆ ಸಂಸ್ಥೆ ಯಾವುದೆ ತಿಂಗಳೊಂದರಲ್ಲಿ ದಾಖಲಿಸಿದ ಅತಿಹೆಚ್ಚು ಸೇಲ್ಸ್ ಆಗಿದೆ.

ಬಜಾಜ್ ಆಟೊ ಸಂಸ್ಥೆ ಮಾತ್ರ ಮಾರಾಟದಲ್ಲಿ ಇಳಿಮುಖ ಕಂಡಿದೆ. ಅದರ 2,55,909 ದ್ವಿಚಕ್ರ ವಾಹನಗಳು ಅಕ್ಟೋಬರ್​ನಲ್ಲಿ ಮಾರಾಟವಾಗಿವೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಮಾರಾಟ ಸಂಖ್ಯೆಯಲ್ಲಿ ಶೇ. 8ರಷ್ಟು ಕಡಿಮೆ ಆಗಿದೆ.

ದ್ವಿಚಕ್ರ ವಾಹನಗಳ ರಫ್ತಿನಲ್ಲೂ ಹೆಚ್ಚಳ

ಭಾರತದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಅಕ್ಟೋಬರ್​ನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಒಳ್ಳೆಯ ಸೇಲ್ಸ್ ಕಂಡಿರುವುದರ ಜೊತೆಗೆ ವಿದೇಶಗಳಿಗೂ ಸಾಕಷ್ಟು ರಫ್ತು ಮಾಡಿವೆ. ಭಾರತದಲ್ಲಿ ಅಕ್ಟೋಬರ್​ನಲ್ಲಿ ಮಾರಾಟ ಇಳಿಮುಖ ಕಂಡಿದ್ದ ಬಜಾಜ್ ಆಟೊ ಸಂಸ್ಥೆ ರಫ್ತಿನಲ್ಲಿ ಶೇ. 24ರಷ್ಟು ಬೆಳವಣಿಗೆ ಕಂಡಿದೆ. ಅದು 1,58,463 ಯುನಿಟ್​​ಗಳನ್ನು ಮಾರಿದೆ.

ಇದನ್ನೂ ಓದಿ: ಭಾರತ್ ಬ್ರ್ಯಾಂಡ್ ಎರಡನೇ ಹಂತದ ಸೇಲ್ಸ್ ಆರಂಭ; ಸಬ್ಸಿಡಿ ದರದಲ್ಲಿ ಗೋಧಿಹಿಟ್ಟು ಮತ್ತು ಅಕ್ಕಿ ಮಾರಾಟ

ಟಿವಿಎಸ್ ಮೋಟಾರ್ ಶೇ. 16ರಷ್ಟು ರಫ್ತು ಹೆಚ್ಚಳ ಕಂಡರೆ, ಹಿರೋ ಮೋಟೋಕಾರ್ಪ್ ಶೇ. 43ರಷ್ಟು ಹೆಚ್ಚು ಬೈಕ್, ಸ್ಕೂಟರ್​ಗಳನ್ನು ವಿದೇಶಗಳಿಗೆ ಸರಬರಾಜು ಮಾಡಿದೆ. ಆದರೆ, ಎಲ್ಲರಿಗಿಂತ ಹೆಚ್ಚು ರಫ್ತು ಹೆಚ್ಚಳ ಸಾಧಿಸಿದ್ದು ರಾಯಲ್ ಎನ್​ಫೀಲ್ಡ್. ಅದರ ರಫ್ತು ಬರೋಬ್ಬರಿ ಶೇ. 150ರಷ್ಟು ಹೆಚ್ಚಾಗಿದೆ. ದಕ್ಷಿಣ ಏಷ್ಯಾದ ಇತರ ಮಾರುಕಟ್ಟೆಗಳು ಹಾಗು ಲ್ಯಾಟಿನ್ ಅಮೆರಿಕನ್ ದೇಶಗಳಿಗೆ ರಾಯಲ್ ಎನ್​ಫೀಲ್ಡ್ ಬೈಕ್​ಗಳು ರಫ್ತಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು