ವ್ಯಾಪಾರ ಒಪ್ಪಂದಗಳು ಭಾರತಕ್ಕೆ ವಿಶ್ವದ ಶೇ. 76 ಮಾರುಕಟ್ಟೆ ಬಾಗಿಲು ತೆರೆಯುತ್ತವೆ: ಪೀಯುಷ್ ಗೋಯಲ್

ಪ್ರಮುಖ ವ್ಯಾಪಾರ ಒಪ್ಪಂದಗಳ ಮೂಲಕ ಭಾರತವು ಜಾಗತಿಕ ಆರ್ಥಿಕತೆಯ ಶೇ. 76ರಷ್ಟು ಭಾಗಕ್ಕೆ ಪ್ರವೇಶ ಪಡೆಯಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಯನ್ನು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮುಂದಿನ 22 ವರ್ಷದಲ್ಲಿ ಭಾರತದ ಜಿಡಿಪಿ 30 ಟ್ರಿಲಿಯನ್ ಡಾಲರ್ ಗಾತ್ರಕ್ಕೆ ಹೆಚ್ಚಲಿದೆ ಎಂದೂ ತಿಳಿಸಿದ್ದಾರೆ.

ವ್ಯಾಪಾರ ಒಪ್ಪಂದಗಳು ಭಾರತಕ್ಕೆ ವಿಶ್ವದ ಶೇ. 76 ಮಾರುಕಟ್ಟೆ ಬಾಗಿಲು ತೆರೆಯುತ್ತವೆ: ಪೀಯುಷ್ ಗೋಯಲ್
ಪೀಯುಷ್ ಗೋಯಲ್
Image Credit source: PTI

Updated on: Oct 27, 2026 | 1:30 PM

ನವದೆಹಲಿ, ಅಕ್ಟೋಬರ್ 27: ಭಾರತವು ಮಾಡಿಕೊಳ್ಳುತ್ತಿರುವ ಮುಕ್ತ ಮತ್ತು ಆದ್ಯತೆಯ ವ್ಯಾಪಾರ ಒಪ್ಪಂದಗಳ (Preferential Trade Agreements) ಮೂಲಕ ಜಾಗತಿಕ ಆರ್ಥಿಕತೆಯ ಬೃಹತ್ ಭಾಗವು ದೇಶದ ಮಾರುಕಟ್ಟೆಗೆ ಮುಕ್ತವಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ. ಈ ವಾಣಿಜ್ಯ ಪಾಲುದಾರಿಕೆಗಳು ದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಭಾರತವು ಹೊಂದಿರುವ ಮತ್ತು ಮುಂಬರಲಿರುವ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಒಟ್ಟು $115 ಟ್ರಿಲಿಯನ್ ಜಾಗತಿಕ ಜಿಡಿಪಿಯಲ್ಲಿ ಸುಮಾರು $85 ಟ್ರಿಲಿಯನ್ (ಅಂದರೆ ಶೇ. 76ರಷ್ಟು) ಮಾರುಕಟ್ಟೆಗೆ ಭಾರತೀಯ ಉದ್ಯಮಗಳು ಆದ್ಯತೆಯ ಪ್ರವೇಶ ಪಡೆಯಲಿವೆ ಎಂದು ಹೇಳಿರುವ ಗೋಯಲ್, ಮುಂದಿನ 22 ವರ್ಷದಲ್ಲಿ ಭಾರತದ ಆರ್ಥಿಕತೆಯ ಗಾತ್ರ $4 ಟ್ರಿಲಿಯನ್​ನಿಂದ $30 ಟ್ರಿಲಿಯನ್​​ಗೆ ಏರಲಿದೆ ಎಂದಿದ್ದಾರೆ.

ಈಗಾಗಲೇ ಪ್ರಮುಖ ದೇಶಗಳೊಂದಿಗೆ ಭಾರತ ಆದ್ಯತೆಯ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ. ಇನ್ನೂ ಕೆಲ ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಇವು ಸಾಕಾರಗೊಂಡರೆ, ಭಾರತದ ರಫ್ತು ವಲಯಕ್ಕೆ ಮತ್ತು ಆರ್ಥಿಕ ಪ್ರಗತಿಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಪೀಯುಷ್ ಗೋಯಲ್ ತಿಳಿಸಿದ್ದಾರೆ.

ಇದನ್ನೂ ಓದಿ: 2028, ಅಕ್ಟೋಬರ್ 23ಕ್ಕೆ ಬರಲಿದೆ ಅಪ್ಪಟ ಭಾರತೀಯ ಸ್ಮಾರ್ಟ್​ಫೋನ್; ಸಚಿವ ಎ ವೈಷ್ಣವ್ ಡೆಡ್​ಲೈನ್

ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ವೃದ್ಧಿ

ಈ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರವು ಇನ್ನಷ್ಟು ಬಲಗೊಳ್ಳಲಿದ್ದು, ದೇಶೀಯ ಉತ್ಪಾದನೆಗೆ ಮತ್ತು ವಿದೇಶಿ ನೇರ ಹೂಡಿಕೆಗೆ (FDI) ಹೆಚ್ಚಿನ ಅವಕಾಶಗಳು ಮುಕ್ತವಾಗಲಿವೆ ಎಂದು ವಾಣಿಜ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಆಧುನಿಕ ತಂತ್ರಜ್ಞಾನಗಳನ್ನು ಅಪ್ಪಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ…

ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಪ್ರತಿಭೆಗಳನ್ನು ಗುರುತಿಸುವುದು ಇತ್ಯಾದಿ ಸಂಗತಿಗಳಲ್ಲಿ ಭಾರತ ಸಮರ್ಥವಾಗಿದೆ. ಇದು ದೇಶದ ಆರ್ಥಿಕತೆಗೆ ಸಕಾರಾತ್ಮಕವಾಗಿರುವ ಸಂಗತಿ. ನಮ್ಮ ಪ್ರತಿಭಾ ಸಮೂಹಕ್ಕೆ ಆಧುನಿಕ ತಂತ್ರಜ್ಞಾನವು ಅರ್ಥವಾಗುತ್ತದೆ. ಕೆಲವೇ ದೇಶಗಳ ಗ್ರಹಿಕೆಗೆ ಸಾಧ್ಯವಾಗುವಷ್ಟು ವೇಗದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಲ್ಲರು ಭಾರತೀಯರು’ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ರೈಲ್ವೆ ಕೌಂಟರ್​ನಲ್ಲೂ ಟಿಕೆಟ್ ಜೊತೆಗೆ ಇನ್ಷೂರೆನ್ಸ್ ಆಯ್ಕೆ ಲಭ್ಯ; ಆದರೆ, ಹಣ ಪಾವತಿ ನಿಯಮದಲ್ಲಿ ಬದಲಾವಣೆ ಇದೆ, ಗಮನಿಸಿ

ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಶೇ. 100 ಎಫ್​ಡಿಐನಿಂದ ರೈತರಿಗೆ ಭರ್ಜರಿ ಲಾಭ

ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶೀ ಹೂಡಿಕೆಗೆ ಅವಕಾಶ ಕೊಡುವುದರಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಮತ್ತು ಮಾರುಕಟ್ಟೆ ಅವಕಾಶ ಸಿಗುತ್ತದೆ ಎಂದು ಗೋಯಲ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us